ಗುಬ್ಬಿ
ನಾಡಪ್ರಭು ಕೆಂಪೇಗೌಡರು ರಾಜಧಾನಿ ಬೆಂಗಳೂರನ್ನು ಸಮಗ್ರವಾಗಿ ಅಭಿವೃಧ್ದಿಪಡಿಸುವ ಮೂಲಕ ಎಲ್ಲಾ ಸಮುದಾಯಗಳು ಒಟ್ಟಿಗೆ ಬಾಳಿ ಬದುಕು ಕಟ್ಟಿಕೊಳ್ಳುವಂತಹ ಉತ್ತಮ ಅವಕಾಶವನ್ನು ದೊರಕಿಸಿಕೊಟ್ಟ ಕೆಂಪೇಗೌಡರ ಸಾಧನೆ ಮಹತ್ತರವಾದುದಾಗಿದೆ ಎಂದು ಮುಖಂಡ ಹೆಚ್.ಟಿ.ಭೈರಪ್ಪ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಢಳಿತದವತಿಯಿಂದ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬೆಂಗಳೂರು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹದ್ದಾಗಿದೆ ದೇಶ ವಿಧೇಶಿಗರು ಬೆಂಗಳೂರನ್ನು ವೀಕ್ಷಿಸಲು ಬರುತ್ತಾರೆ ಅಂತಹ ಸುಂದರ ಬೆಂಗಳೂರನ್ನು ನಿರ್ಮಿಸಿದ ನಿರ್ಮಾತೃ ನಾಡ ಪ್ರಭು ಕೆಂಪೇಗೌಡರು ಅವರ ಆಧರ್ಶ ಮತ್ತು ಅಭಿವೃಧ್ದಿಯ ಚಿಂತನೆಗಳನ್ನು ಇಂದಿನ ಯುವ ಪೀಳಿಗೆ ಅಳವಢಿಸಿಕೊಂಡಾಗ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಮಾತನಾಡಿ ನಾಡ ಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿ ಬೆಳೆಸುವುದರ ಜೊತೆಗೆ ದೇವಾಲಯಗಳು, ಸುಸಜ್ಜಿತವಾದ ವಿಶಾಲ ರಸ್ತೆಗಳ ನಿರ್ಮಾಣ, ಕಲ್ಯಾಣಿಗಳ ನಿರ್ಮಾಣ ಸೇರಿದಂತೆ ಹತ್ತು ಹಲವು ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.ತಹಸಿಲ್ದಾರ್ ಮಮತಾ ಮಾತನಾಡಿ ನಾಡ ಪ್ರಭು ಕೆಂಪೇಗೌಡರ ಅಭಿವೃಧ್ದಿಯ ಚಿಂತನೆಗಳು ಮಹತ್ವ ಪೂರ್ಣವಾದವುಗಳಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಗೇಂದ್ರ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣ್, ಆರ್.ಜಿ.ನಾಗಭೂಷಣ್, ಕಂದಾಯ ನಿರೀಕ್ಷಕ ರಮೇಶ್ ಕುಮಾರ್ ಮುಖಂಡರಾದ ಡಿ.ರಘು, ಕೆ.ಆರ್.ವೆಂಕಟೇಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಮುಖಂಡರುಗಳು ಭಾಗವಹಿಸಿದ್ದರು.