ಹೇಮಾವತಿ ಎಕ್ಸ್‍ಪ್ರೆಸ್ ಲಿಂಕಿಂಗ್ ತಡೆಗೆ ಮನವಿ

ತುರುವೇಕೆರೆ:

       ರಾಜ್ಯ ಸರ್ಕಾರ ಕೈಗೋಂಡಿರುವ ಹೇಮಾವತಿ ಎಕ್ಸ್‍ಪ್ರೆಸ್ ಲಿಂಕಿಂಗ್ ಪೈಪ್ ಲೈನ್ ಯೋಜನೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಭಾರತೀಯ ಕಿಸಾನ್ ಸಂಘ ತಾಲೂಕು ಘಟಕ ಅಧ್ಯಕ್ಷ ಗಂಗಾಧರಯ್ಯ, ಒತ್ತಾಯಿಸಿದ್ದಾರೆ.

        ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಉಪ ತಹಶೀಲ್ದಾರ್ ಸಿದ್ದಗಂಗಯ್ಯರ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿರವರಿಗೆ ಭಾರತೀಯ ಕಿಸಾನ್ ಸಂಘ ತಾಲೂಕು ಘಟಕದವತಿಯಿಂದ ಮನವಿ ನೀಡಿ ಮಾತನಾಡಿದ ಅವರು ರಾಜ್ಯ ಸರ್ಕಾರ ಮಾಗಡಿ ರಾಮನಗರಕ್ಕೆ ನೇರವಾಗಿ ಪೈಪ್ ಮೂಲಕ ನೀರು ತೆಗೆದುಕೊಳ್ಳಲು 614 ಕೋಟಿ ಅನುದಾನವನ್ನು ನೀಡಿದೆ.

       ಈ ಯೋಜನೇಯೇ ಅವ್ಶೆಜ್ಞಾನಿಕವಾಗಿದ್ದು ಇದರ ಬದಲು ಜಿಲ್ಲಗೆ ಹರಿಯುವ ಹೇಮಾವತಿ ಕಾಲುವೇ ಬೆಳೆದಿರುವ ಮರ ಗಿಡಗಳು, ಹುಲ್ಲು ನಾಲೆಯಲ್ಲಿ ಕುಸಿದು ಬಿದ್ದಿರುವ ಮಣ್ಣು ಕಲ್ಲು ತುಂಬಿ ನೀರು ಹರಿಯುವ ಸಾಮಥ್ರ್ಯ ಕಡಿಮೆಯಾಗಿದೆ. ಹೇಮಾವತಿ ಕಾಲುವೆಯ ಅಭಿವೃದ್ದಿಗೆ ರಾಜ್ಯ ಸರ್ಕಾರ 200 ಕೋಟಿ ಅನುಧಾನ ಬಿಡುಗಡೆ ಮಾಡಿದೆ. ಈ ಕಾಮಗಾರಿಯನ್ನು ನಿಲ್ಲಿಸಿ ಒಟ್ಟು 1289 ಕೋಟಿ ನೀಡಿ ತುಮಕೂರು ಶಾಖಾ ನಾಲೆಯನ್ನು ರೀ ಮಾಡಲಿಂಣ್ ಮತ್ತು ಹೆಚ್ಚುವರಿ ಸಾಮಥ್ರ್ಯಕ್ಕೆ ವಿಸ್ತರಿಸಲು ಯೋಜನೆ ರೂಪಿಸಿ ಈಗಿರುವ ನಾಲಾ ಸಾಮಥ್ರ್ಯ 1445 ಕ್ಯೂಸೆಕ್ಸ್ ನಿಂದ 2500 ಕ್ಯೂಸೆಕ್ಸ್ ಹೆಚ್ಚಿಸಬೇಕು ಎಂದು ಭಾರತೀಕ ಕಿಸಾನ್ ಸಂಘ ಆಗ್ರಹಿಸಿದೆ.

      ಜಿಲ್ಲೆಯ ಜನಪ್ರತಿನಿಧಿಗಳು ವಿಪಲ: ಜೂನ್ 19 ರಂದು ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ವಿಧಾನ ಸೌದದಲ್ಲಿ ಕರೆದಿದ್ದ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೇ ಜಿಲ್ಲೆಯ ನೀರಾವರಿಯ ಬಗ್ಗೆ ಜನಪ್ರತಿನಿಧಿಗಳು ನಿರ್ಲಕ್ಷಿಸಿದ್ದಾರೆ ಇದನ್ನು ಕಿಸಾನ್ ಸಂಘ ಖಂಡಿಸುತ್ತಿದೆ ಕೂಡಲೇ ಜಿಲ್ಲೆಯ ಎಲ್ಲ ಶಾಸಕರು ಸಭೆ ಸೇರಿ ಹೇಮಾವತಿ ನೀರಿನಲ್ಲಿ ಜಿಲ್ಲಗೆ ಹಾಗುತ್ತಿರುವ ಅನ್ಯಾಯದ ಸರಿಪಡಿಸಬೇಕಿದೆ ಹಾಗೂ ಜಿಲ್ಲಯ ರೈತರು ಸ್ವಯಂ ಪ್ರೇರಿತರಾಗಿ ಸರ್ಕಾರದ ವಿರುದ್ದ ಹೋರಾಟ ಮಾಡಲು ಅಣಿಯಾಗಬೇಕು ಎಂದು ಕರೆ ನೀಡಿದರು.

     ಈ ಸಂದರ್ಬದಲ್ಲಿ ಕಾರ್ಯದರ್ಶಿ ಜಗದೀಶ್, ಜಿಲ್ಲಾ ಕಾರ್ಯದರ್ಶಿ ದಿವಿತ್‍ಗೌಡ, ಜಿಲ್ಲಾ ಉಪಾದ್ಯಕ್ಷ ಸಿದ್ದಲಿಂಗಪ್ಪ, ಯುವ ಪ್ರಮುಖ್ ಗಂಗಾಧರ ಸ್ವಾಮಿ, ಕಮಿಟಿ ಸದಸ್ಯರಾದ ಶಿವಕುಮಾರ್, ಚೇತನ್, ಸುರೇಶ್ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap