ಸಿಎಂ ಗ್ರಾಮವಾಸ್ತವ್ಯದ ವೇಳೆ ಭದ್ರತಾಲೋಪ : 2 ಪೊಲೀಸ್ ಅಧಿಕಾರಿಗಳ ಸಸ್ಪೆಂಡ್!!

ರಾಯಚೂರು :

 

      ಸಿಎಂ ಕುಮಾರಸ್ವಾಮಿ ರವರ ಗ್ರಾಮ ವಾಸ್ತವ್ಯದ ವೇಳೆ ಸರಿಯಾದ ಭದ್ರತೆ ನೀಡಿಲ್ಲ ಎಂದು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡುವಂತೆ ಆದೇಶಿಸಲಾಗಿದೆ. 

      ರಾಯಚೂರಿನ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ನಿಂಗಪ್ಪ ಹಾಗೂ ಯರಗೇರಾ ಇನ್ಸ್​ಪೆಕ್ಟರ್​ ದತ್ತಾತ್ರೇಯ ಅಮಾನತ್ತಿಗೆ ಒಳಗಾಗಿರುವ ಅಧಿಕಾರಿಗಳು.

Image result for karegudda protest

      ಸಿಎಂ ಕುಮಾರಸ್ವಾಮಿ ಬುಧವಾರದಂದು ರಾಯಚೂರಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ವೇಳೆ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರು ಮರು ನೇಮಕಕ್ಕೆ ಒತ್ತಾಯಿಸಿ, ಪ್ರತಿಭಟನೆ ನಡೆಸಿ ಸಿಎಂ ತೆರಳುತ್ತಿದ್ದ ಬಸ್ ಗೆ ಮುತ್ತಿಗೆ ಹಾಕಿಗ್ರಾಮ ವಾಸ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದರು.

      ಪ್ರತಿಭಟನೆಯಿಂದ ಬೇಸತ್ತ ಮುಖ್ಯಮಂತ್ರಿ ಲಾಠಿಚಾರ್ಜ್ ಮಾಡುವ ಎಚ್ಚರಿಕೆ ನೀಡಿದ್ದರು. ಇದು ರಾಜ್ಯದಾದ್ಯಂತ ವ್ಯಾಪಕ ಟೀಕೆಗೆ ಕಾರಣವಾಗಿ ಸಿಎಂ ಕುಮಾರಸ್ವಾಮಿ ಇರುಸು ಮುರುಸು ಅನುಭವಿಸಬೇಕಾಯಿತು.

      ಈ ಘಟನೆಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಪರಿಗಣಿಸಿ ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತ್ತಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಆದೇಶ ಹೊರಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link