ಮಹಿಳೆಯರ ಆರ್ಥಿಕ ಪ್ರಗತಿಗೆ ಸ್ವಉದ್ಯೋಗ ಅವಶ್ಯ

ಚಿತ್ರದುರ್ಗ

    ಮನುಷ್ಯನ ಕೈ ಕಾಲುಗಳಿಗೆ ತರಬೇತಿ ನೀಡಿ ಅವರ ಜೀವನಕ್ಕೆ ಅನುಕೂಲವಾಗುವ ರೀತಿಯಲ್ಲಿ ವಿಜ್ಞಾನವನ್ನ ತಿಳಿಸಿಕೊಟ್ಟರೆ, ಅವರು ತಮಗೆ ಬೇಕಾದ ವಸ್ತುಗಳನ್ನ ತಾವೇ ಉತ್ಪಾದನೆ ಮಾಡಿಕೊಂಡು, ಬಳಕೆ ಹೆಚ್ಚಿಸಿಕೊಂಡರೆ ಅವರ ಆರ್ಥಿಕ ಅಭಿವೃದ್ಧಿಗೆ ಸಹಾಯಕ ವಾಗುವುದು ಎಂದು ಬೌತ ಶಾಸ್ತ್ರ ವಿಜ್ಞಾನಿ ಚಟರ್ಜಿ ನುಡಿದರು.

      ನಗರದ ಮಹಿಳಾ ಸೇವಾ ಸಮಾಜದಲ್ಲಿ, ಚಿತ್ರದುರ್ಗ ವಿಜ್ಞಾನ ಕೇಂದ್ರ, ಸರ್ಕಾರಿ ವಿಜ್ಞಾನ ಕಾಲೇಜು, ದಿಶಾ ಸಂಸ್ಥೆ, ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಅಯೋಜಿಸಿದ್ದ ಮಹಿಳಾ ಸೇವಾ ಸಮಾಜದಲ್ಲಿ ಮಹಿಳೆಯರಿಗೆ ಸೋಪು, ಶಾಂಪು, ಬಟ್ಟೆ ಸೋಪು, ಶೌಚಾಲಯ ಸ್ವಚ್ಛತ ವಸ್ತುಗಳ ತಯಾರಿಕಾ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

       ಸೋಪು, ಶಾಂಪೂ, ದಿನ ನಿತ್ಯ ಬಳಕೆ ಬೇಕಾದ ವಸ್ತುಗಳನ್ನ ಗ್ರಾಮೀಣ ಜನರು ತಾವೇ ತರಬೇತಿ ಪಡೆದು, ಮನೆಯಲ್ಲಿ ತಯಾರಿಸಿಕೊಂಡು, ಬಳಕೆ ಮಾಡಬಹುದು. ಅಥವಾ ಇನ್ನೂ ಹೆಚ್ಚಿನ ತರಬೇತಿ ಪಡೆದು ತಮ್ಮ ಸುತ್ತ ಮುತ್ತಲಿರುವ ಜನರಿಗೆ ಮಾರಾಟಮಾಡಿ ಬದುಕಿಗೆ ಬೇಕಾದ ಸಂಪಾದನೆಯನ್ನ ಮಡಿಕೊಳ್ಳಬಹುದು, ಇದರ ಬಗ್ಗೆ ಸಮಾಜ ಸಂಸ್ಥೆಗಳು ಕಾರ್ಯೊನ್ಮುಖರಾಗಬೇಕು ಎಂದರು.

      ಪ್ರೋ. ಡಾ||ಕೆ.ಕೆ.ಕಮಾನಿಯವರು ಮಾತನಾಡಿ ಭಾರತದ ಆರ್ಥಿಕ ಅಭಿವೃದ್ಧಿಗೆ ಸಣ್ಣ ಸಣ್ಣ ಗುಡಿಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಪ್ರತಿಯೊಂದು ದಿನ ಬಳಕೆ ವಸ್ತುಗಳನ್ನ ನಾವು ಹೊರದೇಶದ ಕಂಪನಿಗಳಿಂದ ಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗು ತ್ತಿರುವುದು ಶೋಚನೀಯ. ಅದನ್ನ ಸರಿಪಡಿಸಲು ಮಹಿಳೆಯರಿಗೆ ತರಬೇತಿ ಅಗತ್ಯವಾಗಿದೆ ಎಂದರು.

       ಪರಿಸರವಾದಿ ಡಾ|| ಹೆಚ್.ಕೆ. ಎಸ್. ಸ್ವಾಮಿ ಮಾತನಾಡಿ ಅನಾಥ ಮಕ್ಕಳಿಗೆ ಶಿಕ್ಷಣದ ಜೊತೆಗೆ ಹೊಲಿಗೆ, ಸೋಪು, ಶಾಂಪು, ಬಟ್ಟೆಗೆ ಬೇಕಾದ ವಸ್ತುಗಳು, ಸೌಂದರ್ಯ ಸಾಧಕಗಳನ್ನ ತಯಾರಿಸಿಕೊಳ್ಳಬೇಕು. ಬಡತನ ನಿವಾರಣೆಗೆ ಗುಡಿ ಕೈಗಾರಿಕೆಗಳ ಸಹಕಾರ ಅಗತ್ಯವಾಗಿದೆ ಎಂದರು.

      ಮಹಿಳ ಸೇವಾ ಸಮಾಜದ ಉಪಾಧ್ಯಕ್ಷರಾದ ಶ್ರೀಮತಿ ಮೋಕ್ಷಾ ರುದ್ರಸ್ವಾಮಿಯವರು ಅಧ್ಯಕ್ಷೀಯ ಭಾಷಣ ಮಾಡುತ್ತ ಮಹಿಳೆಯರ ಸ್ವಾವಲಂಬನೆ ಬದುಕಿಗೆ, ಕೊಳೆಚೆ ಪ್ರದೇಶಗಳಲ್ಲಿ ತರಬೇತಿಗಳನ್ನ ಏರ್ಪಡಿಸಬೇಕಾದೆ. ಮಹಿಳೆಯರ ಸಬಲೀಕರಣದ ಬಗ್ಗೆ ಹೆಚ್ಚು ಗಮನ ಕೊಡಬೇಕಾಗಿದೆ. ಅದರ ಬಗ್ಗೆ ಜನ ಜಾಗೃತಿ ಅಗತ್ಯವಾಗಿದೆ ಎಂದರು.

       ಪ್ರಾತ್ಯಕ್ಷಿಕತೆ ನೀಡಿದ, ಜ್ಞಾನ ವಿಜ್ಞಾನ ಸಮಿತಿ ಸದಸ್ಯರಾದ ಶ್ರೀಮತಿ ಪ್ರತಿಭರವರು ಮಾತನಾಡಿ, ವಿಶ್ವ ಸುಂದರಿ ಎಂಬ ಪದ ಬಳಕೆ ಮಾಡಿ ಮಹಿಳೆಯರ ಸೌಂದರ್ಯ ವರ್ಧಕ ವಸ್ತುಗಳನ್ನ ವ್ಯಾಪಾರ ಮಾಡಲು ಬಳಕೆಮಾಡುತ್ತಾರೆ. ಪ್ರತಿಯೊಂದು ವಸ್ತುವನ್ನ ನಾವು ಮನೆಯಲ್ಲೆ ಮಾಡಿಕೊಳ್ಳಬಹುದು, ಇದರ ಬಗ್ಗೆ ನಾವು ತಯಾರಿ ಮಾಡಿಕೊಳ್ಳಬೇಕು ಎಂದು ಸೋಪು, ಶಾಂಪೂ, ಬಟ್ಟೆ ಪುಡಿ ತಯಾರಕೆ ವಿಧಾನಗಳನ್ನ ಪ್ರಾಯೋಗಿಕವಾಗಿ ಮಾಡಿ ತೋರಿಸಿಕೊಟ್ಟರು.

       ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಕಾರ್ಯದರ್ಶಿ ಲತಾ ಉಮೇಶ್, ನಿರ್ದೇಶಕರಾದ ಮಾಳವಿಕ ರಘುನಾಥ, ಉಮಾಗುರು ರಾಜ್, ವಿಜಯ ಸುನೀಲ್, ದೀಶಾ ಸಂಸ್ಥೆಯ ಚಾಂದಿನ, ಯೋಗ ಗುರು ಚಿನ್ಮಯನಂದ, ಪವನ್, ಚಿತ್ರದುರ್ಗ ಜ್ಞಾನ ವಿಜ್ಞಾನ ಸಮಿತಿ ಸದಸ್ಯರಾದ ಮಹಂತೇಶ್, ಕಲ್ಲೇಶ್, ನವೀನ್, ಮಹಿಳಾ ಸಮಾಜದ ವಿದ್ಯಾರ್ಥಿಗಳು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link