ತುಮಕೂರು : ಬಸ್-ಆಟೋ ಮುಖಾಮುಖಿ : 4 ಮಂದಿ ಸಾವು!!!

ತುಮಕೂರು :

      ಕೆಎಸ್ಆರ್ ಟಿಸಿ ಬಸ್ ಹಾಗು ಆಟೋ ನಡುವೆ ಡಿಕ್ಕಿ ಸಂಭವಿಸಿ 4 ಜನ ಸ್ಥಳದಲ್ಲಿಯೇ ಮೃತಪಟ್ಟಿರುವ ದುರ್ಘಟನೆ ಮಲ್ಲಸಂದ್ರ ಬಳಿ ನಡೆದಿದೆ.

     ತುಮಕೂರು ಕಡೆಯಿಂದ ಶಿವಮೊಗ್ಗ ತೆರಳುತ್ತಿದ್ದ ಸರ್ಕಾರಿ ಬಸ್ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಆಟೋ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಆಟೋ ಡ್ರೈವರ್ ಸೇರಿ 4 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ, ಓರ್ವ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

     ಮೃತರೆಲ್ಲರೂ ಗುಬ್ಬಿ ತಾಲೂಕಿನ ಪತ್ರೆಮಟ್ಟಿಗಟ್ಟ ಗ್ರಾಮದವರು ಎನ್ನಲಾಗಿದೆ.

      ಇನ್ನು ಘಟನೆ ನಡೆದ ಸ್ಥಳದ ರಸ್ತೆಯು ಅತಿ ಚಿಕ್ಕದಾಗಿದ್ದು, ಒಂದೇ ಸಮಯದಲ್ಲಿ ಒಂದು ವಾಹನ ಪ್ರಯಾಣ ಬೆಳೆಸುವುದು ಕಷ್ಟಕರವಾಗಿದೆ. ಈ ಭಾಗದಲ್ಲಿ ಜನತೆ ಸುರಕ್ಷಿತವಾಗಿ ರಸ್ತೆ ಪ್ರಯಾಣ ಮಾಡುವುದಕ್ಕೆ ಪರದಾಡುವ ಸನ್ನಿವೇಶವಿದ್ದು, ಕೂಡಲೇ ಅಧಿಕಾರಿಗಳು ರಸ್ತೆಯನ್ನು ಅಗಲೀಕರಣ ಮಾಡಿದ್ದು ರೋಡ್‌ ಡಿವೈಡರ್‌ ಅನ್ನು ಹಾಕಬೇಕು ಅಂತ ಸ್ಥಳೀಯ ಜನತೆ ಆಗ್ರಹಿಸಿದ್ದಾರೆ.

      ಗುಬ್ಬಿ ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ಕಳಿಸಿದ್ದಾರೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link