ನವದೆಹಲಿ
ಕೆಲ ದಿನಗಳ ಹಿಂದೆ ಮಮತಾ ಬ್ಯಾನರ್ಜಿ ಸರ್ಕಾರ ಪಶ್ಚಿಮ ಬಂಗಾಳ ರಾಜ್ಯದ ಹೆಸರು ಬದಲಾವಣೆಗೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ರಾಜ್ಯಸಭೆ ಅನುಮೋದನೆ ನೀಡಿಲ್ಲ ಎಂದು ತಿಳಿದು ಬಂದಿದೆ.
ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯಕ್ಕೆ ಇರುವ ಹೆಸರನ್ನು ಪಶ್ಚಿಮ ಬಂಗಾಳ ದಿಂದ ಬಂಗಾಳಕ್ಕೆ ಮಾರ್ಪಾಟು ಮಾಡಲು ಇಚ್ಚಿಸಿದ್ದರು ಇದಕ್ಕಾಗಿ ಅವರು ಲೋಕಸಭೆಯಲ್ಲಿ ಮನವಿಯನ್ನು ಸಹ ಮಾಡಿದ್ದರು ನಂತರ ಬುಧವಾರ ನಡೆದ ಬೆಳವಣಿಗೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಶೀಘ್ರವೇ ಈ ಅಂಶ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ರಾಜ್ಯಸಭೆಯಲ್ಲಿ ಲಿಖೀತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್ ರಾಜ್ಯದ ಹೆಸರು ಬದಲಾವಣೆಗೆ ಸಂವಿಧಾನಕ್ಕೆ ತಿದ್ದುಪಡಿಯಾಗಬೇಕು. ಅದಕ್ಕೆ ಎಲ್ಲಾ ಅಂಶಗಳನ್ನೂ ಪರಿಗಣಿಸಬೇಕು ಎಂದು ಹೇಳಿದ್ದಾರೆ. ಕಳೆದ ವರ್ಷದ ಜು.26ರಂದು ಮಮತಾ ಬ್ಯಾನರ್ಜಿ ಸರ್ಕಾರ ಈ ಬಗ್ಗೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತು. 2011ರಲ್ಲಿ ಪಶ್ಚಿಮ್ ಬಂಗಾಳ, 2016ರಲ್ಲಿ ಇಂಗ್ಲಿಷ್ನಲ್ಲಿ ‘ಬೆಂಗಾಲ್’, ‘ಬಾಂಗ್ಲಾ ಎಂದು ಬಂಗಾಳಿಯಲ್ಲಿ, ಹಿಂದಿಯಲ್ಲಿ ‘ಬಂಗಾಲ್’ ಹೆಸರು ಬದಲಿಗೆ ಮಮತಾ ಸರ್ಕಾರ ನಿರ್ಧರಿಸಿ ಅದನ್ನು 2018ರಲ್ಲಿ ಇದೇ ವಿಚಾರ ಪರಿಶೀಲನೆಗಾಗಿ ವಿದೇಶಾಂಗ ಖಾತೆಗೂ ಮನವಿ ಸಲ್ಲಿಸಲಾಗಿತ್ತು ಎಂದು ತಿಳಿದು ಬಂದಿದೆ.