ವಾಷಿಂಗ್ಟನ್ :
ವಿಶ್ವದ ಎರಡು ಬಹು ದೊಡ್ಡ ಆರ್ಥಿಕತೆಗಳೆಂದು ಹೆಸರಾಗಿರುವ ಅಮೇರಿಕ ಮತ್ತು ಚೀನಾ ತಮ್ಮ ವ್ಯಾಪಾರ ವ್ಯವಹಾರ ಯುದ್ಧವನ್ನು ನಿಲ್ಲಿಸಿ ಸೌಹಾರ್ದಯುತ ಸಂಬಧಕ್ಕೆ ನಾಂದಿ ಹಾಡಲು ಮುಂದಾಗಿವೆ.
ಅಮೇರಿಕಾ ಹೇಳುವಂತೆ ಚೀನಾದಲ್ಲಿ ಅಮೇರಿಕ ಮಾಡಿರುವ ಹೂಡಿಕೆಗಳ ಮೇಲೆ ವಿಧಿಸಿರುವ ತೆರಿಗೆಗಳನ್ನು ಕಡಿಮೆ ಮಾಡದಿದ್ದರೆ ನಮ್ಮ ವ್ಯಾಪಾರ ಸಂಬಂದದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದಿತ್ತು ಆದರೆ ತೆರಿಗೆ ಕಡಿಮೆ ಆಗದ ಹಿನ್ನೆಲೆಯಲ್ಲಿ ಮೇ ತಿಂಗಳಿನಿಂದ ಮಾತುಕತೆ ಮುರಿದುಬಿದ್ದಿತ್ತು ಮತ್ತು ಎರಡು ಕಡೆಯವರು ದಂಡ ಸುಂಕಗಳಲ್ಲಿ ಹೆಚ್ಚಳ ಮಾಡಿದ್ದರಿಂದ ವ್ಯಾಪಾರ ಸಂಬಂದ ಹಳಸಿದಂತಾಗಿತ್ತು .
ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಜೂನ್ 29 ರಂದು ಜಪಾನ್‍ನಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಭೇಟಿಯಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾದ ಕ್ಸಿ ಜಿನ್‍ಪಿಂಗ್ ಅವರು ಮಾತುಕತೆಗಳನ್ನು ಪುನರುಜ್ಜೀವನಗೊಳಿಸಲು ಒಪ್ಪಿದರು.
ಅಮೇರಿಕದ ಖಜಾನೆ ಕಾರ್ಯದರ್ಶಿ ಸ್ಟೀವನ್ ಮ್ಯೂಚಿನ್ ಮತ್ತು ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್‍ಜೈಜರ್ ಅವರು ಮಂಗಳವಾರ ಚೀನಾದ ಉಪ ಪ್ರಧಾನ ಮಂತ್ರಿ ಲಿಯು ಹಿ ಮತ್ತು ವಾಣಿಜ್ಯ ಸಚಿವರೊಂದಿಗೆ ಮಾತನಾಡಿದ್ದಾರೆ ಎಂದು ತಿಲಿದು ಬಂದಿದೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕುಡ್ಲೊ ಈಗ ಕೇವಲ ಪ್ರಾಥಮಿಕವಾಗಿ ಚರ್ಚೆ ಆರಂಭಿಸಲಾಗಿದೆ ಮತ್ತು ಇದರಿಂದ ನಮ್ಮ ಸಂಬಂಧ ಇನ್ನೂ ಗಟ್ಟಿಯಾಗಲಿದೆ ಎಂದು ತಿಳಿಸಿದ್ದಾರೆ ಮತ್ತು ಇನ್ನೂ ಸರನಿ ಸಭೆಗಳನ್ನು ನಡೆಸಿ ಉತ್ತಮ ವ್ಯಾಪಾರ ಸಂಬಂಧ ಬಲಪಡಿಸಲಾಗುವುದು ಎಂದು ಹೇಳಿದರು, ಆದರೆ ಹೆಚ್ಚಿನ ವಿವರಗಳನ್ನು ನೀಡಲು ಒಪ್ಪದ ಅವರು ಹೊಸ ಸುಂಕಗಳನ್ನು ಹೇರುವುದನ್ನು ತಡೆಯಲು ಟ್ರಂಪ್ ಒಪ್ಪಿಕೊಂಡಿದ್ದಾರೆ ಮತ್ತು ಅಮೆರಿಕದ ಕೆಲವು ಉತ್ಪನ್ನಗಳನ್ನು ಚೀನಾದ ಟೆಲಿಕಾಂ ದೈತ್ಯ ಹುವಾವೇಗೆ ಮಾರಾಟ ಮಾಡಲು ಅವಕಾಶ ನೀಡಲು ಮುಂದಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ