ಬೆಂಗಳೂರು
ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ತನ್ನ 9 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆಮಾಡಿ ತಾನೂ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಯಲಹಂಕ ಉಪನಗರದ ಅಟ್ಟೂರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಮಧುರೈ ಮೂಲದ ಪ್ರಿಯಾ (36), ತನ್ನ ಮಗಳು ಪ್ರತಿಕ್ಷಾಗೆ ಉಸಿರುಗಟ್ಟಿಸಿ ಕೊಲೆಮಾಡಿ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಎಲ್ ಅಂಡ್ ಟಿ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಸುರೇಶ್ ಬಾಬು ಅವರನ್ನು ವಿವಾಹವಾಗಿದ್ದ ಪ್ರಿಯಾಗೆ ಪ್ರತಿಕ್ಷಾ ಅಲ್ಲದೆ, 16 ವರ್ಷದ ಆಕಾಶ್ ಎಂಬ ಇನ್ನೊಬ್ಬ ಮಗನಿದ್ದಾನೆ.ಅಟ್ಟೂರಿನ ಅಕ್ಷಯನಗರದಲ್ಲಿ ವಾಸಿಸುತ್ತಿದ್ದ ಪ್ರಿಯಾ, ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದು, 11ನೇ ತರಗತಿ ಓದುತ್ತಿದ್ದ ಮಗ ಆಕಾಶ್ ರಾತ್ರಿ 8ರ ವೇಳೆ ಸ್ಕೂಲ್ ಮುಗಿಸಿಕೊಂಡು ಮನೆಗೆ ಬಂದಿದ್ದಾನೆ.
ಮನೆಯ ಮುಂಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿದ್ದು, ಎಷ್ಟು ಬಾರಿ ಬಡಿದರೂ ಬಾಗಿಲು ತೆಗೆಯದ ಕಾರಣ, ಕೆಲಸಕ್ಕೆ ಹೋಗಿದ್ದ ತಂದೆಗೆ ಮೊಬೈಲ್ ಕರೆಮಾಡಿ ತಿಳಿಸಿದ್ದಾನೆ. ತಂದೆ ಸುರೇಶ್ ಬಾಬು ಬಂದು ಬಾಗಿಲು ಮುರಿದು ಒಳಹೋಗಿ ನೋಡಿದಾಗ ಇಬ್ಬರು ಮೃತಪಟ್ಟಿರುವುದು ಕಂಡುಬಂದಿದೆ.ಕೂಡಲೇ ಯಲಹಂಕ ಉಪನಗರ ಪೆÇಲೀಸರಿಗೆ ಮಾಹಿತಿ ನೀಡಿದ್ದು ಪ್ರಕರಣ ದಾಖಲಿಸಿ ಕೃತ್ಯವು ಅನುಮಾನಾಸ್ಪದವಾಗಿರುವುದರಿಂದ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








