ಸಭೆಗೆ ಬಾರದ ಅಧಿಕಾರಿಗಳು : ರೈತರು ಗರಂ

ತಿಪಟೂರು :

    ಕೆಲ ದಿನದ ಹಿಂದೆ ಅರೆಬರೆ ಮಾಹಿತಿ ಕೊಟ್ಟರೂ ರೈತರು ಇಂದು ತಾವು ಕರೆದಿದ್ದ ಸಭೆಗೆ ಬಂದಿದ್ದರು ಆದರೆ ಯಾವುದೇ ಮಾಹಿತಿ ನೀಡದೆ ಸಂಪರ್ಕಕ್ಕೂಸಿಗದೆ ತಾವು ಸಭೆಗೆ ಗೈರು ಹಾಕರಾಗಿರುವುದು ರೈತರಿಗೆ ಸಂತ್ರಸ್ತರಿಗೆ ಸೂಕ್ತ ಮಾತಿ ನೀಡದೇ ಅಪಮಾನ ಮಾಡಿದ್ದಾರೆಂದು ಸಂತ್ರಸ್ತ ರೈತರು ಇಂದು ಉಪವಿಗಾಧಿಕಾರಿಗಳಿಗೆ ತಮಗೆ ಅಪಮಾನ ಮಾಡಿದ ಅಧಿಕಾರಿಗಳ ವಿರುದ್ದ ದೂರು ಸಲ್ಲಿಸಿದರು.

     ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ಜನಸೇವಕರಾಗಿದ್ದು ಈ ರೀತಿ ಹೇಳಿದ ಸಭೆಗೆ ಬಾರದೆ ರೈತರಿಗೆ ಅಪಮಾನ ಮಾಡಿರುವುದು ಪ್ರಜಾತಂತ್ರಕ್ಕೆ ಮಾಡಿರುವ ಅಪಮಾನ. ಒಂದು ಸಭೆಗೆ ಮೂರು ದಿನದ ಮುಂಚೆ ಮಾಹಿತಿ ನೀಡುವುದು ಪ್ರಜಾತಂತ್ರ ರೂಡಿ ಆದರೆ ಅದನ್ನು ಉಲ್ಲಂಘಿಸಿರುವುದಲ್ಲದೇ ಇಂದು ಬೆಳಗ್ಗೆ ಸಭೆ ಎಂದು ತಿಳಿಸಿ ಸಭೆಗೆ ಹಾಜರಾಗದಿರಿವುದು ಎಷ್ಟು ಸಮಂಜಸ ಎಂದು ಆರೋಪಿಸಿದ ರೈತರುಗಳು ತಮ್ಮ ಬದುಕಿಗೆ ಆಸರೆಯಾಗಿರುವ ಜಮೀನಿಗೆ ನಿಮ್ಮ ಪುಡಿಗಾಸಿನ ಪರಿಹಾರ ನಿಮ್ಮ ಆವಾರ್ಡ್ ನೋಟಿಸಿನಲ್ಲಿ ನಮೂದಿಸಿರುವ ಮೊತ್ತವನ್ನು ಒಪ್ಪುವುದಿಲ್ಲ ಇಂದಿನ ಮಾರುಕಟ್ಟೆ ಬೆಲೆಗೆ ಅಂದರೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಬರುವ ಬೆಲೆಗೆ ಮಾತ್ರ ಜಮೀನನ್ನು ಕೊಡುತ್ತೇವೆ.

     ನಿಮ್ಮ ಕಂಟ್ರಾಕ್ಟರ್‍ಪರ, ಬಂಡಲಾಳಿಗರ ಪರ ಯೋಜನೆಗೆ ನಮ್ಮ ಬದುಕನ್ನು ಬಲಿಕೊಡುವುದಿಲ್ಲ ನಮ್ಮ ಈ ಹಕ್ಕನ್ನು ಈ ನೆಲದ ಸುಪ್ರೀಂ ಕೋರ್ಟ್ ಕೂಡ ಕಪಿಲ್ ಮೆಹ್ರಾ ಮತ್ತು ಇನ್ನಿತರರುರ ವಿರುದ್ದ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ 2014ರ ಅಕ್ಟೋಬರ್ 17 ರಂದು ನೀಡಿದ ತೀರ್ಪಿನಲ್ಲಿ ಎತ್ತಿಹಿಡಿದಿದ್ದಾರೆಂದು ತಮ್ಮ ಮನವಿಯಲ್ಲಿ ತಿಳಿದ್ದಾರೆ. ಆದರೂ ನೀವುಗಳು 2013ರ ಭೂಸ್ವಾಧೀನಕ್ಕೆ ಪರಿಹಾರ, ಪುನರ್ವಸತಿ ಅಡಿಯಲ್ಲಿ ಕಾಯ್ದೆಯಡಿ ಹೆಚ್ಚಿನ ಬೆಲೆಗೆ ನೀಡಲು ಸಾಕ್ಷಟು ಅವಕಾಶವಿದೆ. ಇದೆಲ್ಲವನ್ನು ನಿಮ್ಮ ಗಮನಕ್ಕೆ ತಂದಾಗಿದೆ.

    ಆದರೆ ಇದ್ಯಾವುದಕ್ಕೂ ಕಿವಿಗೊಡದೆ ರೈತರ ಬದುಕನ್ನು ಮಣ್ಣುಪಾಲು ಮಾಡಿ, ಕಂಟ್ರಾಕ್ಟರ್‍ಗಳನ್ನು ಹಾಗೂ ಉದ್ಯಮಿಗಳನ್ನು ಉದ್ದಾರ ಮಾಡಲು ಹೊರಟ್ಟಿದ್ದಾರೆಂದು ಆರೋಪಿಸಿದ ಅವರು ಮುಂದೆಆಗುವ ಅನಾಹುತಗಳಿಗೆ ನೀವೇ ಜವಾಬ್ದಾರರೆಂದು ಎಂದು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap