ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಂಪುಟ ಆಸ್ತು

ನವದೆಹಲಿ

     ಅಂತರರಾಜ್ಯ ನದಿ ನೀರಿಗೆ ಸಂಬಂಧಿಸಿದ ವಿವಾದಗಳನ್ನು ಕಾಲಬದ್ದವಾಗಿ ಇತ್ಯರ್ಥಗೊಳಿಸಲು ಸಾಧ್ಯವಾಗುವಂತೆ ಅಂತರರಾಜ್ಯ ನದಿ ನೀರು ವಿವಾದಗಳ ತಿದ್ದುಪಡಿ ವಿಧೇಯಕ -2019ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.ಅಂತರಾಜ್ಯ ನದಿ ನೀರು ವಿವಾದಗಳ ಇತ್ಯರ್ಥವನ್ನು ಮತ್ತಷ್ಟು ಸುವ್ಯಸ್ಥೆಗೊಳಿಸುವುದು ಈ ವಿಧೇಯಕದ ಉದ್ದೇಶವಾಗಿದೆ

     ಅಂತರರಾಜ್ಯ ನದಿ ಜಲ ವಿವಾದಗಳ ಇತ್ಯರ್ಥವನ್ನು ಮತ್ತಷ್ಟು ಸರಳೀಕರಿಸುವುದು ಹಾಗೂ ಪ್ರಸ್ತತ ಇರುವ ಸಾಂಸ್ಥಿಕ ಚೌಕಟ್ಟನ್ನು ಬಲಪಡಿಸಲು 1965ರ ಅಂತರರಾಜ್ಯ ನದಿ ನೀರು ವಿವಾದಗಳ ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿಧೇಯಕ ಒಳಗೊಳ್ಳಲಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ

     ಅಂತರ ರಾಜ್ಯ ನದಿಗಳಿಗೆ ಸಂಬಂಧಿಸಿದ ವಿವಾದಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಸಾಧ್ಯವಾಗುವಂತೆ ವಿವಿಧ ಖಾಖೆಗಳನ್ನು ಒಳಗೊಂಡ ಏಕೈಕ ನ್ಯಾಯಮಂಡಳಿ ರಚಿಸಲು ವಿಧೇಯಕ ಅವಕಾಶ ಕಲ್ಪಿಸಲಿದೆ ಕಾಯ್ದೆಗೆ ತರಲಾಗುವ ತಿದ್ದುಪಡಿ ಜಲವಿವಾದಗಳ ಇತ್ಯರ್ಥವನ್ನು ತ್ವರಿತಗೊಳಿಸಲಿದೆ ಎಂದು ಹೇಳಿಕೆ ತಿಳಿಸಿದೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link