ಮೋಗಾದಿಶು
ದಕ್ಷಿಣ ಸೋಮಾಲಿಯಾದ ಬಂದಗಾಹ್ ನಗರದ ಕಿಸ್ಮಾಯೋದಲ್ಲಿ ಶುಕ್ರವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಅಂದಾಜು 26 ಮಂದಿ ಮೃತಪಟ್ಟಿದ್ದಾರೆ.
ಭಯೋತ್ಪಾದಕರು ಕಿಸ್ಮಾಯೋ ನಗರದ ಪ್ರಸಿದ್ಧ ಮೆಡಿನಾ ಹೋಟೆಲ್ ವೊಂದಲ್ಲಿ ನುಗ್ಗಿ ದಾಳಿ ನಡೆಸಿದ್ದು, 26 ಮಂದಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ 56 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರಲ್ಲಿ 10 ಜನ ಕೀನ್ಯಾ, ಕೆನಡಾ, ಅಮೆರಿಕ ಹಾಗೂ ತಾಂಜೇನಿಯಾದ ಪ್ರಜೆಗಳಾಗಿದ್ದಾರೆ. ಮೆಡಿನಾ ಹೋಟೆಲ್ ನಲ್ಲಿ ನುಗ್ಗುವ ಮುನ್ನ ಆತ್ಮಾಹುತಿ ದಾಳಿಕಾರನೊಬ್ಬ ಸ್ಫೋಟಕ ವಸ್ತುಗಳಿದ್ದ ವಾಹನದಲ್ಲಿ ಹೋಟೆಲ್ ಒಳಗೆ ನುಗ್ಗಿದ್ದ ಎಂದು ಮೂಲಗಳು ತಿಳಿಸಿವೆ.ಮೃತರ ಪೈಕಿ ಇಬ್ಬರು ಪತ್ರಕರ್ತರಿದ್ದರು ಎಂದು ಸೊಮಾಲಿಯಾ ಪತ್ರಕರ್ತರ ಸಂಘ ಖಚಿತಪಡಿಸಿದೆ.