ಬೆಂಗಳೂರು
ತಾಂತ್ರಿಕ ಲೋಪದೋಷದ ಹಿನ್ನೆಲೆ ಚಂದ್ರಯಾನ -2 ಉಡಾಯನವನ್ನು ಮುಂದೂಡಿದ ಇಸ್ರೋ ಬೆಂಬಲಕ್ಕೆ ನಿಂತಿರುವ ನೆಟ್ಟಿಗರು ನಮ್ಮ ವಿಜ್ಞಾನಿಗಳ ಸಾಮಥ್ರ್ಯದ ಮೇಲೆ ನಮಗೆ ನಂಬಿಕೆ ಇದೆ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.
ಉಡಾಯನ ವಾಹನದಲ್ಲಿ ಕೊನೆಗಳಿಗೆಯಲ್ಲಿ ತಾಂತ್ರಿಕ ಲೋಪ ಪತ್ತೆಯಾಗಿದ್ದು, ಉಡಾಯನಕ್ಕೆ 56 ನಿಮಿಷ ಮೊದಲು ಕೌಂಟ್ ಡೌನ್ ಸ್ಥಗಿತಗೊಳಿಸಲಾಯಿತು ಎಂದು ಇಸ್ರೋ ಟ್ವೀಟ್ ಮಾಡಿತ್ತು. ಆದರೆ ಇಸ್ರೋದ ಈ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸುವ ಮೂಲಕ ಇಸ್ರೋಗೆ ಶಕ್ತಿ ತುಂಬಲು ಯತ್ನಿಸಿದ್ದಾರೆ.
ಸಕಾಲದಲ್ಲಿ ತಾಂತ್ರಿಕ ದೋಷ ಪತ್ತೆಹಚ್ಚಿ ತಾಂತ್ರಿಕ ತಂಡ ಉತ್ತಮವಾಗಿ ಕೆಲಸ ನಿರ್ವಹಿಸಿದೆ. ಇದರಿಂದ ಒಳ್ಳೆಯದಾಗಲಿದೆ ಎಂದು ಆಶಯ ವ್ಯಕ್ತಪಡಿಸಿರುವ ಆನಂದ್ ಶ್ರೀನಿವಾಸನ್ ಉಡಾಯನದ ಮುಂದಿನ ದಿನಾಂಕ ಮತ್ತು ಸಮಯ ಘೋಷಣೆಯನ್ನು ಆತುರದಿಂದ ಕಾಯುತ್ತಿದ್ದೇನೆ ಎಂದು ಇಸ್ರೋ ಟ್ವಿಟ್ಟರ್‍ನಲ್ಲಿ ಉತ್ತರ ನೀಡಿದ್ದಾರೆ.
ರೀಟಾ ಸಿಂಗ್ ಎನ್ನುವ ಮತ್ತೋರ್ವ ಟ್ವಿಟ್ಟರ್ ಬಳಕೆದಾರರು ಇಸ್ರೋ ತಂಡಕ್ಕೆ ಒಳ್ಳೆಯದಾಗಲಿ, ಯೋಜನೆ ಕಾರ್ಯರೂಪ ವಿಳಂಬವಾದರೆ ಪರವಾಗಿಲ್ಲ. ಮುಂದಿನ ದಿನಾಂಕ ಎದುರುನೋಡುತ್ತಿದ್ದೇನೆ ಎಂದಿದ್ದಾರೆ. ನಾವೆಲ್ಲರೂ ಸದಾ ನಿಮ್ಮೊಂದಿಗೆ ಇದ್ದೇವೆ, ಅಗತ್ಯವಿರುವಷ್ಟು ಸಮಯ ತೆಗೆದುಕೊಳ್ಳಿ. ಚಂದ್ರಯಾನ – 2 ಯಶಸ್ವಿಯಾಗಿ ಉಡಾಯಿಸಿ ಎಂದು ಆರ್ಯನ್ ರಾಜ್ ಪ್ರತಿಕ್ರಿಯಿಸಿದ್ದರೆ, ನೀವು ವಿಶ್ವದ ಅತ್ಯುತ್ತಮ ವಿಜ್ಞಾನಿಗಳು. ಇಂದು ಆಗಿರುವ ಸಮಸ್ಯೆಗೆ ತಲೆಕೆಡಿಸಿಕೊಳ್ಳಬೇಡಿ. ಕೊನೆಗಳಿಗೆಯಲ್ಲಿ ಉಡಾಯನ ಮುಂದೂಡುವುದು ಬಹುದೊಡ್ಡ ನಿರ್ಧಾರ. ಸದಾ ನಿಮಗೆ ಬೆಂಬಲ ನಾವು ನೀಡುತ್ತೇವೆ ಎಂದು ಇಸ್ರೋ ಕ್ರಮವನ್ನು ಬೆಂಬಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








