ತುರುವೇಕೆರೆ:
ತುಮಕೂರು ಭ್ರಷ್ಟಚಾರ ನಿಗ್ರಹ ದಳದವತಿಯಿಂದ ತಾಲೂಕಿನ ಬಾಣಸಂದ್ರ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಸಾರ್ವಜನಿಕರ ಕುಂದುಕೊರತೆಗಳ ಸಭೆಯಲ್ಲಿ ಭ್ರಷ್ಟಚಾರಕ್ಕೆ ಸಂಬಂದಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ತಾಲೂಕಿನ ಎಂ.ಮಂಚೇನಹಳ್ಳಿಯ ಕೃಷ್ಣಮೂರ್ತಿ ಎಂಬುವವರು ಕಳೆದ 28-11- 18 ರಂದು ಎಸಿಬಿ ಗೆ ತುರುವೇಕೆರೆ ತಾಲೂಕು ಕಛೇರಿಯಲ್ಲಿ ಕಾನೂನು ಬಾಹಿರವಾಗಿ ಖಾತೆ ಬದಲಾವಣೆ ಮಾಡಲಾಗಿದೆ. ಈ ಕುರಿತು ಸಾಕಷ್ಟು ಬಾರಿ ಮನವಿ ಹಾಗೂ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ತೊಂದರೆ ಮಾಡಲಾಗಿದೆ ಎಂದು ದೂರು ನೀಡಿದ್ದರು.
ಈ ಸಂಬಂಧ ತಾಲೂಕು ಕಛೇರಿಗೆ ಅಂದೇ ಜಿಲ್ಲಾ ಭ್ರಷ್ಠಾಚಾರ ನಿಗ್ರಹ ದಳದ ಅಧಿಕಾರಿಗಳು ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿ ದೂರುದಾರರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದೂ ಹಾಗೂ ಆ ಕುರಿತಂತೆ ದೂರುದಾರರಿಗೆ ಮತ್ತು ತಮಗೆ ಇನ್ನು 15 ದಿನಗಳೊಳೆಗೆ ತಮಗೂ ಮತ್ತು ದೂರುದಾರರಿಗೂ ಸೂಕ್ತ ಉತ್ತರವನ್ನು ಲಿಖಿತವಾಗಿ ನೀಡಬೇಕೆಂದು ಆದೇಶಿಸಿತ್ತು. ಆದರೆ ಏಳೆಂಟು ತಿಂಗಳು ಕಳೆದರೂ ಸಹ ತಮಗೂ ಮತ್ತು ಎಸಿಬಿ ಗೂ ಯಾವುದೇ ಉತ್ತರ ಬಂದಿಲ್ಲ ಎಂದು ದೂರುದಾರ ಕೃಷ್ಣಮೂರ್ತಿ ಎಸಿಬಿ ಇನ್ಸ್ಪೆಕ್ಟರ್ ರಮೇಶ್ ರವರಲ್ಲಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಎಸಿಬಿ ಇನ್ಸ್ಪೆಕ್ಟರ್ ರಮೇಶ್ ಉತ್ತರಿಸಿ ಸಾರ್ವಜನಿಕರಿಗೆ ಸರ್ಕಾರಿ ನೌಕರರಿಂದ ಆಗುತ್ತಿರುವ ಕಿರುಕುಳ, ಲಂಚಕ್ಕೆ ಆಗ್ರಹ, ಆದಾಯಕ್ಕಿಂತ ಹೆಚ್ಚಿಗೆ ಹಣ ಇದ್ದು ಅಕ್ರಮವಾಗಿ ಸಂಪಾದಿಸಿ ಆಸ್ತಿ ಪಾಸ್ತಿ ಮಾಡಿದಲ್ಲಿ ಅದನ್ನು ಪತ್ತೆಹಚ್ಚಿ ಶಿಕ್ಷಿಸುವುದು ಎಸಿಬಿ ಯ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರಿಗೆ ಭ್ರಷ್ಠಾಚಾರ ನಿಯಂತ್ರಣ ಮಾಡುವ ಕುರಿತು ಜಾಗೃತಿಗೊಳಿಸುವುದು ಇದರ ಉದ್ದೇಶವಾಗಿದೆ. ಸಭೆಗೆ ಬರುವ ಜನರು ಹೊತ್ತು ತರುವ ಸಮಸ್ಯೆಗಳನ್ನು ಮಾನವೀಯ ದೃಷ್ಠಿಯಿಂದ ತಮ್ಮ ವ್ಯಾಪ್ತಿಗೆ ಬಾರದಿದ್ದರೂ ಸಹ ಸಂಬಂಧಿಸಿದ ಸರ್ಕಾರಿ ಕಛೇರಿಗಳಿಗೆ ವರ್ಗಾಯಿಸಿ ಕೂಡಲೇ ಕ್ರಮ ಕೈಗೊಳ್ಳಿ ಎಂದು ಆದೇಶಿಸುವುದು ಸಾಮಾನ್ಯವಾಗಿದೆ ಎಂದು ರಮೇಶ್ ತಿಳಿಸಿದರು.ಸಭೆಯಲ್ಲಿ ಇಓ ಜಯಕುಮಾರ್, ಪಿಡಿಓ ಜ್ಯೋತಿ, ಕಾರ್ಯದರ್ಶಿ ಮಂಜುಳಾ, ತಾಲೂಕಿನ ಹಲವು ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
