CBIನಿಂದ NEET ಹಗರಣದ ಸ್ಫೋಟಕ ಅಂಶ ರಿವೀಲ್…..!

ಪಾಟ್ನಾ:

    ನೀಟ್ ಪತ್ರಿಕೆ ಸೋರಿಕೆ ಪ್ರಕರಣ ದೇಶಾದ್ಯಂತ ಭಾರೀ ಕೋಲಹಲವನ್ನು ಸೃಷ್ಟಿ ಮಾಡಿತ್ತು. ನೀಟ್ ಪತ್ರಿಕೆ ಸೋರಿಕೆ  ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಒಂದೊಂದಾಗಿ ವಿಷಯವನ್ನು ಕೆದಕುತ್ತಿದೆ.

    ಇದೀಗ ನೀಟ್ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಹೊರ ಬಿದ್ದಿದ್ದು, ಆರೋಪಿಗಳು 35 ರಿಂದ 60 ಲಕ್ಷ ರೂಪಾಯಿ ನೀಡಿ ನೀಟ್ ಪ್ರಶ್ನೆ ಪತ್ರಿಕೆಗಳನ್ನು ಖರೀದಿಸಿರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ. ಸಿಕ್ಕಿರುವ ಮಾಹಿತಿ ಪ್ರಕಾರ, ಬಿಹಾರದ ಅಭ್ಯರ್ಥಿಗಳು 35ರಿಂದ 45 ಲಕ್ಷ ರೂಪಾಯಿಗೆ ಪೇಪರ್ ಖರೀದಿಸಿದ್ದರು. ಆದರೆ ಬೇರೆ ರಾಜ್ಯಗಳ ಅಭ್ಯರ್ಥಿಗಳಿಗೆ 55 ರಿಂದ 60 ಲಕ್ಷ ರೂಪಾಯಿಗೆ ಪತ್ರಿಕೆ ನೀಡಲು ನಿರ್ಧರಿಸಲಾಗಿದೆ ಎಂಬ ಆತಂಕಕಾರಿ ಮಾಹಿತಿ ತಿಳಿದು ಬಂದಿದೆ.

    ಇದುವರೆಗೆ ಸುಮಾರು 150 ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಇವುಗಳಲ್ಲಿ ಕೆಲವು ಪರೀಕ್ಷಾ ಕೇಂದ್ರಗಳು ಜಾರ್ಖಂಡ್‌ನ ಹಜಾರಿ ಬಾಗ್‌ನಲ್ಲಿ ಮತ್ತು ಕೆಲವು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿವೆ. ಕೆಲವು ಅಭ್ಯರ್ಥಿಗಳು ಗುಜರಾತ್‌ನ ಗೋದ್ರಾ ಮತ್ತು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಪರೀಕ್ಷಾ ಕೇಂದ್ರಗಳನ್ನು ಹೊಂದಿದ್ದರು.

    80 ರಿಂದ 90 ವಿದ್ಯಾರ್ಥಿಗಳು ಉತ್ತಮ ರ‍್ಯಾಂಕ್ ಪಡೆಯಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಈ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆಯೇ ಅಥವಾ ಈ ಕೇಂದ್ರಗಳ ಆಯ್ದ ವಿದ್ಯಾರ್ಥಿಗಳಿಗೆ ಪೇಪರ್ ಲೀಕ್ ಮಾಡಲಾಗಿದೆಯೇ ಎಂಬ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಪತ್ರಿಕೆ ಸೋರಿಕೆಯಾದ ಬಳಿಕ ಪ್ರಶ್ನೆ ಪತ್ರಿಕೆ ಪಡೆದ 150 ವಿದ್ಯಾರ್ಥಿಗಳ ಪೈಕಿ ಸುಮಾರು 80ರಿಂದ 90 ಅಭ್ಯರ್ಥಿಗಳಿಗೆ ಉತ್ತಮ ರ್ಯಾಂಕ್ ಬಂದಿಲ್ಲ. ಈ ಹಿಂದೆ ಸಂಪೂರ್ಣ ಪೇಪರ್ ಸೋರಿಕೆ ಪ್ರಕರಣವನ್ನು ಬಿಹಾರ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ತನಿಖೆ ನಡೆಸುತ್ತಿತ್ತು. ಆದರೆ, ನಂತರ ಕೇಂದ್ರದಿಂದ ಸೂಚನೆ ಬಂದ ನಂತರ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.

    ಪೇಪರ್ ಸೋರಿಕೆ ಪ್ರಕರಣದ ತನಿಖೆ ನಡೆಯುತ್ತಿದ್ದರೂ ಈ ದಂಧೆಯ ಪ್ರಮುಖ ಆರೋಪಿ ಸಂಜೀವ್ ಮುಖಿಯಾ ಇನ್ನೂ ತಲೆಮರೆಸಿಕೊಂಡಿದ್ದಾನೆ . ಆದರೆ ಈ ದಂಧೆಯ ಮಾಸ್ಟರ್ ಮೈಂಡ್ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಈ ಪ್ರಕರಣದ ಕಿಂಗ್ ಪಿನ್ ಎನ್ನಲಾದ ಸಂಜೀವ್ ಮುಖಿಯಾ ತಲೆಮರೆಸಿಕೊಂಡಿದ್ದಾನೆ. ಆದಾಗ್ಯೂ, ರಾಕಿ ಮತ್ತು ಚಿಂಟು ಸೇರಿದಂತೆ ಅವರ ಸಹಾಯಕರು ಮತ್ತು ಸಹಚರರು ಸಿಬಿಐ ವಶದಲ್ಲಿದ್ದಾರೆ.

    ಜಾರ್ಖಂಡ್‌ನ ಹಜಾರಿ ಬಾಗ್‌ನಲ್ಲಿರುವ ಓಯಸಿಸ್ ಶಾಲೆಗೆ ಹೋಗುತ್ತಿದ್ದ ನೀಟ್ ಪೇಪರ್‌ಗಳನ್ನು ರಾಕಿ ಹೊರ ತೆಗೆದು ನಂತರ ಚಿಂಟು ಮೂಲಕ ಬಿಹಾರಕ್ಕೆ ಪೇಪರ್‌ಗಳನ್ನು ಕಳುಹಿಸಿದ್ದ ಎಂದು ಆರೋಪಿಸಲಾಗಿದೆ. ಚಿಂಟು ಸಂಜೀವ್ ಮುಖಿಯ ಸೊಸೆಯ ಪತಿ. ನೀಟ್ ಪೇಪರ್ ಸೋರಿಕೆ ಪ್ರಕರಣದ ಬಹುತೇಕ ಆರೋಪಿಗಳು ನಾವಡಾ ಜಿಲ್ಲೆಯ ನಿವಾಸಿಗಳಾಗಿದ್ದಾರೆ.

     ನೀಟ್ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಹೊರ ಬಿದ್ದಿದ್ದು, ಆರೋಪಿಗಳು 35 ರಿಂದ 60 ಲಕ್ಷ ರೂಪಾಯಿ ನೀಡಿ ನೀಟ್ ಪ್ರಶ್ನೆ ಪತ್ರಿಕೆಗಳನ್ನು ಖರೀದಿಸಿರುವುದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ.

Recent Articles

spot_img

Related Stories

Share via
Copy link
Powered by Social Snap