ಮಂಗಳೂರು:
ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿಕೊಂಡು ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣವನ್ನು ಬಗೆದಷ್ಟು ಆಘಾತಕಾರಿ ವಿಚಾರಗಳು ಬಯಲಾಗುತ್ತಲಿವೆ.
ಈ ದಂಧೆಯ ಕಾರ್ಯಾಚರಣೆಯ ವೇಳೆ ಇನ್ನಷ್ಟು ವಿದ್ಯಾರ್ಥಿನಿಯರು ಸಿಲುಕಿರುವುದು ತಿಳಿದುಬಂದಿದೆ.
ಮಕ್ಕಳ ಸಹಾಯವಾಣಿ ನಡೆಸಿದ ಕೌನ್ಸಿಲಿಂಗ್ ನಲ್ಲಿ ಇನ್ನೂ ಹಲವು ಮಾಹಿತಿಗಳು ಬೆಳಕಿಗೆ ಬಂದಿದೆ.
ವೇಶ್ಯವಾಟಿಕೆ ದಂಧೆ ನಡೆಸುವವರಿಗೆ ಅಪ್ರಾಪ್ತ ವಿದ್ಯಾರ್ಥಿನಿಯರೇ ದಂಧೆಯ ಟಾರ್ಗೆಟ್ ಎನ್ನಲಾಗಿದೆ. ಇತ್ತಿಚೆಗೆ ಆನ್ ಲೈನ್ ಕ್ಲಾಸ್ ಶುರುವಾದ ಬಳಿಕ ಅಪ್ರಾಪ್ತೆಯರನ್ನು ಈ ದಂಧೆಗೆ ಸೇರಿಸುವ ಪ್ರಕ್ರಿಯೆ ಹೆಚ್ಚಾಗಿದೆ. ಫೋಟೋ, ವಿಡಿಯೋ ಇಟ್ಕೊಂಡು ಮೊಬೈಲ್ ಮೂಲಕ ಅಪ್ರಾಪ್ತೆಯರನ್ನು ದಂಧೆಯ ಪ್ರಮುಖರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಇನ್ನು ವಿದ್ಯಾರ್ಥಿನಿಯೊಬ್ಬಳ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆಯಾಗಿದೆ. ವಿದ್ಯಾರ್ಥಿನಿಯರ ಅಟೆಂಡೆನ್ಸ್ ಕೊರತೆ, ವರ್ತನೆಯಲ್ಲಿ ಬದಲಾವಣೆ ಕಂಡು ಬಂದಾಗ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಯವರು ಎಚ್ಚೆತ್ತುಕೊಂಡರೆ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬಹುದಾಗಿದೆ. ಪಾಲಕರು ಮುನ್ನೆಚ್ಚರಿಕೆ ವಹಿಸುವಂತೆ ಮಕ್ಕಳ ಸಹಾಯವಾಣಿಯಿಂದ ಕರೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
