ನವದೆಹಲಿ:
2021ರ ಜನಗಣತಿಯನ್ನು ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಮಾಡುವುದಾಗಿ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದಾರೆ.
A mobile App will be used in Census 2021. It will be a transformation from paper census to digital census: Union Home Minister @AmitShah pic.twitter.com/GYFhyxRgvM
— PIB India (@PIB_India) September 23, 2019
ದೆಹಲಿಯಲ್ಲಿ ಜನಗಣನ(ಜನಗಣತಿ) ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಲ್ಲಿಯವರೆಗೆ ಪೇಪರ್ ಮೂಲಕ ಜನಗಣತಿ ಮಾಡಲಾಗುತಿತ್ತು. ಆದರೆ 2021ರಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಜನಗಣತಿ ಮಾಡಲಾಗುವುದು ಎಂದು ತಿಳಿಸಿದರು.
2021ರ ಸೆನ್ಸಸ್ ಗೆ ಒಂದು ಮೊಬೈಲ್ ಅಪ್ಲಿಕೇಶನ್ ಬಳಕೆಯಾಗಲಿದೆ. ಇಲ್ಲಿಯವರೆಗೆ ನಡೆಯುತ್ತಿದ್ದ ಪೇಪರ್ ಸಮೀಕ್ಷೆಯನ್ನು ಈ ಅಪ್ಲಿಕೇಶನ್ ಡಿಜಿಟಲ್ ಸಮೀಕ್ಷೆಯನ್ನಾಗಿ ಪರಿವರ್ತನೆ ಮಾಡಲಿದೆ. ಎಂದು ಹೇಳಿದರು.
ಈ ಮೊದಲು ಪೇಪರ್ ಸಮೀಕ್ಷೆ ಮಾಡಿದ ನಂತರ ಮತ್ತೊಮ್ಮೆ ಅದನ್ನು ಕಂಪ್ಯೂಟರಿಗೆ ದಾಖಲಿಸಿ ಮತ್ತೆ ಲೆಕ್ಕಾಚಾರ ಮಾಡಬೇಕಾಗಿತ್ತು. ಈಗ ಮೊದಲ ಹಂತದಲ್ಲೇ ಡೇಟಾ ಸರ್ವರ್ಗೆ ದಾಖಲಾಗುವುದರಿಂದ ಸಮಯ ಉಳಿತಾಯವಾಗುವುದರ ಜೊತೆ ಲೆಕ್ಕಾಚಾರವು ಸುಲಭವಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
