ತುಮಕೂರು:
ತುಮಕೂರು ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಸರ್ಜರಿ ನಿರೀಕ್ಷೆ ಮೂಡಿದೆ. ಜತೆಗೆ ಹೊಸ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ ಸಿಗುವ ಭರವಸೆಯೂ ಮೂಡಿದೆ.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಅವರು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಹೊಸದಿಲ್ಲಿಯಲ್ಲಿ ಭೇಟಿಯಾಗಿದ್ದು, ಜಿಲ್ಲಾ ವ್ಯಾಪ್ತಿಯ ‘ಹೆದ್ದಾರಿ’ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ. ಗಡ್ಕರಿ ಅವರ ಬಳಿ ವಿ.ಸೋಮಣ್ಣ ಅವರು ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾ.ಹೆ.ಗಳು, ಅವುಗಳ ಸ್ಥಿತಿಗತಿ, ಕಾಮಗಾರಿ ವಿಳಂಬ, ಮೊದಲಾದ ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದು, ಸಕಾರಾತ್ಮಕವಾಗಿ ಗಡ್ಕರಿ ಸ್ಪಂದಿಸಿದ್ದಾರೆ.
ಮಹತ್ವದ ಚರ್ಚೆಯಲ್ಲಿ ರಾ.ಹೆ. 69ರ ಚತುಷ್ಪಥ ರಸ್ತೆ ಅಭಿವೃದ್ಧಿ, ಮಲ್ಲಸಂದ್ರ ಬೈಪಾಸ್ ನಿರ್ಮಾಣ, ತುಮಕೂರು, ಗುಬ್ಬಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣದ ಬಗ್ಗೆಯೂ ಪ್ರಸ್ತಾಪವಾಗಿದೆ.