ಗೃಹಜ್ಯೋತಿ ಐೋಜನೆ : ಗ್ರಾಹರಿಗೆ ಸಿಹಿ ಸುದ್ದಿ….!

ಬೆಂಗಳೂರು :

     ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಇಂದಿನಿಂದ ರಾಜ್ಯಾದ್ಯಂತ 2,000 ಕೇಂದ್ರಗಳಲ್ಲಿ ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ.

     ಗೃಹಜ್ಯೋತಿ ಯೋಜನೆಗೆ ನೋಂದಾಯಿಸಲು ಸೇವಾಸಿಂಧು ವೆಬ್ ಸೈಟ್ ನಲ್ಲಿ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 2,000 ಕೇಂದ್ರಗಳಲ್ಲಿ ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ಒನ್, ಗ್ರಾಮ ಒನ್, ವಿದ್ಯುತ್ ಚ್ಛಕ್ತ ಕಚೇರಿಗಳು, ಗ್ರಾಮಪಂಚಾಯಿತಿಗಳು ಹಾಗೂ ನಾಡಕಚೇರಿಗಳಲ್ಲಿ ನೋಂದಣಿ ಮಾಡಲಾಗುವುದು. ಈ ಕೇಂದ್ರಗಳಲ್ಲಿ ನೋಂದಣಿಗೆ ಹೊಸ ಲಿಂಕ್ ಕೂಡ ನೀಡಲಾಗಿದೆ.

     ಜೂನ್.18ರಂದು ಗೃಹ ಜ್ಯೋತಿಗಾಗಿ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಸಿದಾಗ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಕೆಗೆ ಸಾಧ್ಯವಾಗಿರಲಿಲ್ಲ. ಬೆಂಗಳೂರು ಒನ್, ಕರ್ನಾಟಕ ಒನ್, ಹಾಗೂ ಗ್ರಾಮ ಒನ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಜನರು ಕ್ಯೂ ನಿಂತೂ ನಿಂತೂ ಹೈರಾಣಾಗಿ ಹೋಗಿದ್ದರು. ಮೊದಲ ದಿನ ಕೇವಲ 55 ಸಾವಿರಕ್ಕೂ ಹೆಚ್ಚು ಅರ್ಜಿಗಳು ಮಾತ್ರ ಸಲ್ಲಿಕೆಯಾಗಿತ್ತು. ಆ ನಂತ್ರ ಸರ್ವಸ್ ಸಮಸ್ಯೆ ಸರಿ ಪಡಿಸಿದ ಕಾರಣ, 1 ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರು.

    ಇದೀಗ ಸೇವಾ ಸಿಂಧು ಪೋರ್ಟಲ್ ಸರ್ವಸ್ ಸಮಸ್ಯೆ ಸುಧಾರಿಸಿದೆ. ರಾಜ್ಯದ ಜನರು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಇದ್ದಂತ ತಾಂತ್ರಿಕ ಸಮಸ್ಯೆಯನ್ನು ಕ್ಲಿಯರ್ ಮಾಡಲಾಗಿದೆ. ಸರ್ವರ್ ಸಾಮರ್ಥ್ಯವನ್ನು ಹೆಚ್ಚುಗೊಳಿಸಲಾಗಿದ್ದು, ಮೊಬೈಲ್ ಸೇರಿದಂತೆ ಕಂಪ್ಯೂಟರ್, ಲ್ಯಾಪ್ ಟಾಪ್ ಗಳಲ್ಲಿಯೂ ಕ್ಷಣ ಮಾತ್ರದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ನೀವು ಗೃಹ ಜ್ಯೋತಿಗೆ ಕುಳಿತಲ್ಲೇ ಅರ್ಜಿ ಸಲ್ಲಿಸಲು ಏನು ಮಾಡಬೇಕು.?

ಗೃಹ ಜ್ಯೋತಿ ಯೋಜನೆಯ ಸೌಲಭ್ಯಕ್ಕಾಗಿ ವಿದ್ಯುತ್ ಗ್ರಾಹಕರಾದಂತ ನೀವು https://sevasindhugs.karnataka.gov.in/gruhajyothi/renderApplicationForm.do?serviceId=19890005&UUID=5ffe9585-600b-44c2-b45f-4536f55a4d74&directService=true&tempId=8410&grievDefined=0&serviceLinkRequired=No&userLoggedIn=N&source=CTZN&OWASP_CSRFTOKEN=MQLF-BVL8-LJGM-3BHN-TFIY-S2AL-VH8S-Q24Q ಈ ಲಿಂಕ್ ದ್ರೇ, ನೇರವಾಗಿ ಅರ್ಜಿಸಲ್ಲಿಸಲು ಅರ್ಜಿ ತೆರೆದುಕೊಳ್ಳಲಿದೆ. ಇದಲ್ಲದೇ https://sevasindhugs.karnataka.gov.in/about_kannada.html# ಲಿಂಕ್ ಕೂಡ ಅರ್ಜಿ ಸಲ್ಲಿಸಬಹುದು.

ಯಾವೆಲ್ಲ ಮಾಹಿತಿಯನ್ನು ಭರ್ತಿ ಮಾಡಬೇಕು.?

200 ಯೂನಿಟ್ ವಿದ್ಯುತ್ ಉಚಿತ ಸೌಲಭ್ಯಕ್ಕಾಗಿ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಬೇಕಾಗಿರುವುದು ಕೇವಲ ಗ್ರಾಹಕರ ಐಡಿ( Customer ID ). ಇದು ನಿಮ್ಮ ವಿದ್ಯುತ್ ಬಿಲ್ ನಲ್ಲಿ ಇರುತ್ತದೆ. ಇದರ ಬದಲಾಗಿ ಆರ್ ಆರ್ ನಂಬರ್ ಬೇಕಿರುವುದಿಲ್ಲ. ಈ ಗ್ರಾಹಕರ ಐಡಿಯನ್ನು ನಿಮ್ಮ ವಿದ್ಯುತ್ ಸರಬರಾಜು ಕಂಪನಿಯನ್ನು ಆಯ್ಕೆ ಮಾಡಿ, ಭರ್ತಿ ಮಾಡಿದ್ರೇ ಅಲ್ಲಿಯೇ ನಿಮ್ಮ ಮಾಹಿತಿ ತೋರಿಸಲಿದೆ. ಈ ಬಳಿಕ ನಿಮ್ಮ ಆಧಾರ್ ಸಂಖ್ಯೆ ನಮೂದಿಸುವುದು ಮಾತ್ರ.

ಈ ರೀತಿಯಾಗಿ ಅರ್ಜಿ ಸಲ್ಲಿಸಿ

ನೀವು ಕುಳಿತಲ್ಲಿಯೇ ನಿಮ್ಮ ಮೊಬೈಲ್ ನಲ್ಲಿ, ಲ್ಯಾಪ್ ಟಾಪ್ ಗಳಲ್ಲಿ ಅರ್ಜಿ ಸಲ್ಲಿಸಲು ಮೇಲೆ ನೀಡಿರುವಂತ ಲಿಂಕ್ ದ್ರೇ ಗೃಹ ಜ್ಯೋತಿ ಯೋಜನೆಯ ಅರ್ಜಿ ತೆರೆದುಕೊಳ್ಳಲಿದೆ.

ಅರ್ಜಿಯಲ್ಲಿ ನಿಮಗೆ ಬೇಕಾದಂತ ಭಾಷೆ ಅಂದರೆ ಇಂಗ್ಲೀಷ್ ಅಥವಾ ಕನ್ನಡ ಆಯ್ಕೆ ಮಾಡಿಕೊಳ್ಳಿ.

ಎಸ್ಕಾಂ ಹೆಸರು ಅಂದರೆ ನಿಮ್ಮ ವಿದ್ಯುತ್ ಸರಬರಾಜು ಕಂಪನಿಯ ಹೆಸರು ಆಯ್ಕೆ ಮಾಡಿ.( BESCOM, MESCOM Etc)

ಖಾತೆ ಸಂಖ್ಯೆ/ಸಂಪರ್ಕ ಸಂಖ್ಯೆ ನಮೂದಿಸಿ. ಇದು ನಿಮ್ಮ ವಿದ್ಯುತ್ ಬಿಲ್ ನಲ್ಲಿ ಇರಲಿದೆ( Account ID/Connection ID )

ಖಾತೆದಾರರ ಹೆಸರು ಎಸ್ಕಾಂ ನಲ್ಲಿರುವಂತೆ ಆಟೋ ಫಿಲ್ ಆಗಲಿದೆ. ಅದನ್ನು ಗಮನಿಸಿ.

ಆನಂತ್ರ ಅಡ್ರೆಸ್ ಕೂಡ ಆಟೋ ಫಿಲ್ ಆಗಲಿದ್ದು, ಅದನ್ನು ಗಮನಿಸಿ.

ನಿವಾಸಿ ವಿಧ ಅಂದರೆ ನೀವು ಮಾಲೀಕರೋ ಅಥವಾ ಬಾಡಿಗೆದಾರರೋ ಎಂಬುದನ್ನು ಆಯ್ಕೆ ಮಾಡಿ.

ಈ ಬಳಿಕ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ

ಆಗ ಆಧಾರ್ ಕಾರ್ಡ್ ನಲ್ಲಿ ಇರುವಂತ ನಿಮ್ಮ ಹೆಸರು ಕೂಡ ಆಟೋ ತೋರಿಸಲಿದೆ.

ಈ ಬಳಿಕ ಆಧಾರ್ ನಂಬರ್ ಗೆ ಲಿಂಕ್ ಮಾಡಿರುವಂತ ಮೊಬೈಲ್ ಸಂಖ್ಯೆಗೆ ಓಟಿಪಿ ಬರಲಿದೆ. ಅದನ್ನು ನಮೂದಿಸಿ.

ಇದಾದ ನಂತ್ರ ನಿಮ್ಮ ಸಂಪರ್ಕ ಸಂಖ್ಯೆ ನಮೂದಿಸಿ.

ಅದರ ಕೆಳಗೆ ಇರುವಂತ ದೃಢೀಕರಿಸಲು ಸೂಚಿಸಿರುವಲ್ಲಿ ಟಿಕ್ ಮಾಡಿ.

ಇದರ ನಂತ್ರ ವರ್ಡ್ ವೆರಿಪಿಕೇಷನ್ ಎಂಬಲ್ಲಿ ಕಾಣಿಸುವಂತ ಸಂಖ್ಯೆಯನ್ನು ನೀಡಿದಂತ ಸ್ಥಳದಲ್ಲಿ ಭರ್ತಿ ಮಾಡಿ.

ಈ ಬಳಿಕ ಎಲ್ಲವನ್ನು ಸಬ್ ಮಿಟ್ ಎನ್ನುವಲ್ಲಿ ( ಹಸಿರು ಬಣ್ಣದಲ್ಲಿ ಇರಲಿದೆ) .

ಈಗ ಮತ್ತೊಂದು ಪೇಜ್ ತೆರೆದುಕೊಳ್ಳಲಿದೆ. ಅಲ್ಲಿ ನೀವು ನೀಡಿದ ಮಾಹಿತಿಯನ್ನು ತೋರಿಸಲಿದ್ದು, ಸೂಕ್ಷ್ಮವಾಗಿ ಪರಿಶೀಲಿಸಿ. ಏನಾದರೂ ತಪ್ಪಿದ್ದರೇ ಎಡಿಟ್ ಮಾಡಿ, ಇಲ್ಲವಾದಲ್ಲಿ ಸಬ್ ಮಿಟ್ ಕೊಡಿ.

ಬಹುಮುಖ್ಯವಾಗಿ ಈ ಬಳಿಕ ಬರುವಂತ ಅಕ್ನಾಲಜ್ಮಂಟ್ ಒಂದು ಕಡೆ ಸೇವ್ ಮಾಡಿ ಇಟ್ಟುಕೊಳ್ಳಿ. ಇಲ್ಲವೇ ಪ್ರಿಂಟ್ ಔಟ್ ತೆಗೆದುಕೊಳ್ಳಿ

ಹೀಗೆ ಈ ಮೇಲ್ಕಂಡಂತೆ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿಯನ್ನು ಸುಲಭವಾಗಿ ಸಲ್ಲಿಸುವ ಮೂಲಕ, 200 ಯೂನಿಟ್ ಉಚಿತ ವಿದ್ಯುತ್ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap