ಬೆಂಗಳೂರು :
ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಅಲಿಯಾಸ್ ಎಬಿಡಿ ಐಪಿಎಲ್ನಿಂದ ನಿವೃತ್ತರಾಗಿ ಮೂರು ವರ್ಷಗಳೇ ಕಳೆದಿದೆ. 2021, ಅಕ್ಟೋಬರ್ 11 ರಂದು ಕೊನೆಯ ಬಾರಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಎಬಿಡಿ ಆರ್ಸಿಬಿ ಅಭಿಮಾನಿಗಳ ಪಾಲಿಗೆ ಅಜರಾಮರ. ಇದಕ್ಕೆ ಸಾಕ್ಷಿ ಈ ಬಾರಿಯ ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಕೇಳಿ ಬಂದ ABD, ABD ಎಂಬ ಹರ್ಷೋದ್ಗಾರ.
ಹೌದು, ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ತಂಡದ ಅನ್ಬಾಕ್ಸ್ ಕಾರ್ಯಕ್ರಮದಲ್ಲೂ ಎಬಿ ಡಿವಿಲಿಯರ್ಸ್ ಹೆಸರು ರಾರಾಜಿಸಿದೆ. ಅದು ಸಹ ಅಭಿಮಾನಿಗಳಿಂದಲೇ.
ಮೂರು ವರ್ಷಗಳ ಹಿಂದೆಯೇ ಅರ್ಸಿಬಿ ತಂಡವನ್ನು ತೊರೆದಿರುವ ಎಬಿ ಡಿವಿಲಿಯರ್ಸ್ ಅವರನ್ನು ಅಭಿಮಾನಿಗಳು ಈ ವಿಶೇಷ ಕಾರ್ಯಕ್ರಮದಲ್ಲಿ ನೆನೆದಿದ್ದಾರೆ. ಅಲ್ಲದೆ ಸ್ಟೇಡಿಯಂನಲ್ಲಿದ್ದ ಆರ್ಸಿಬಿ ಫ್ಯಾನ್ಸ್ ಎಬಿಡಿ ಹೆಸರನ್ನು ಕೂಗುವ ಮೂಲಕ ವಿಶೇಷ ಗೌರವವನ್ನು ಸಲ್ಲಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಬಿ ಡಿವಿಲಿಯರ್ಸ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.








