ತುರುವೇಕೆರೆ:
ಬೆಂಗಳೂರಿನ ಜೆಎಸ್‍ಎಸ್ ಟ್ರಸ್ಟ್ ವತಿಯಿಂದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಯನ್ನು ಮಲ್ಲಿಕಾರ್ಜುನ ದುಂಡ ಅವರಿಗೆ ಶನಿವಾರ ಬೆಂಗಳೂರಿನ ನಯನ ಸಭಾಮಂಟಪ(ಕನ್ನಡ ಭವನ)ದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ರಾಜ್ಯದ ವಿವಿದ ಕ್ಷೇತ್ರಗಳಲ್ಲಿನ ಸಾದಕರಿಗೆ ನೀಡುವ ಪದ್ಮಭೂಷಣ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಯನ್ನು ಮಲ್ಲಿಕಾರ್ಜುನ ದುಂಡ ಅವರಿಗೆ ಬೆಂಗಳೂರಿನ ಜೆಎಸ್‍ಎಸ್ ಟ್ರಸ್ಟ್ ವತಿಯಿಂದ ಶನಿವಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು ವಿವಿದ ರಂಗಗಳಲ್ಲಿ ಇವರು ಸಲ್ಲಿಸಿದ ಗಣನೀಯ ಸೇವೆಯನ್ನು ಗುರ್ತಿಸಿ ಬೆಂಗಳೂರಿನ ಜನತಾ ಸಮಾಜ ಸೇವಾ ಟ್ರಸ್ಟ್ ವತಿಯಿಂದ ರಾಜ್ಯದ ವಿವಿದ ಕ್ಷೇತ್ರಗಳಲ್ಲಿನ ಸಾದಕರಿಗೆ ನೀಡುವ ಪದ್ಮಭೂಷಣ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಯನ್ನು ಮಲ್ಲಿಕಾರ್ಜುನ ದುಂಡ ಅವರಿಗೆ ಶನಿವಾರ ಬೆಂಗಳೂರಿನ ನಯನ ಸಭಾಮಂಟಪ (ಕನ್ನಡ ಭವನ) ದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಮಲ್ಲಿಕಾರ್ಜುನ ದುಂಡ ಅವರು ವಿವಿದ ಕ್ಷೇತ್ರಗಳನ್ನೊಳಗೊಂಡಂತೆ ತಾಲ್ಲೂಕಿನ ಹಾಗೂ ಜಿಲ್ಲೆಯ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಗಣನೀಯ ಸೇವೆ ಸಲ್ಲಿಸಿದ್ದು ಇವರ ಸೇವೆ ಗುರ್ತಿಸಿ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇಂತಹ ಹತ್ತು ಹಲವು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಹುಮುಖ ಪ್ರತಿಭೆ ಹೊಂದಿರುವ ಇವರ ಸಮಾಜ ಸೇವೆಯನ್ನು ಪರಿಗಣಿಸಿ ಇದೀಗ 2021-22 ನೇ ಸಾಲಿನ ಸಾದಕರಿಗೆ ನೀಡುವ ಪದ್ಮಭೂಷಣ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಬೇಲಿಮಠ ಮಹಾ ಸಂಸ್ಥಾ£ ಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳು, ಕರ್ನಾಟಕ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಕು.ನಾಗಲಕ್ಷ್ಮಿ, ಇತಿಹಾಸ ತಜ್ಞ ನಂದಿ ವೆಂಕಟೇಶ್, ಕುಂದಾಪುರ ಉಪನಿರೀಕ್ಷಕಿ ಸುಧಾಪ್ರಭು, ಕೇಂದ್ರ ಸೆನ್ಸಾರ್ ಬೋರ್ಡ್ ಸದಸ್ಯರಾದ ಡಾ.ಮೀರಾಅನುರಾಧ ಪಡಿಯಾರ್, ಜೆಎಸ್‍ಎಸ್ ಅಧ್ಯಕ್ಷ ಹೆಚ್.ಸದಾಶಿವ, ಗೌರವಾಧ್ಯಕ್ಷ ಹಾಗೂ ಪತ್ರಕರ್ತ ಡಾ.ಕೆಂಚನೂರು ಶಂಕರ್, ರಂಗಭೂಮಿ ಕಲಾವಿದರಾದ ಜೂನಿಯರ್ ರಾಜ್‍ಕುಮಾರ್, ಎನ್.ಶ್ರೀನಾಥ್ ಸೇರಿದಂತೆ ಅನೇಕ ಗಣ್ಯರು ಮಲ್ಲಿಕಾರ್ಜುನ ದುಂಡ ಅವರಿಗೆ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಗೌರವಿಸಿ ಅಭಿನಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
