ಆರ್‌ಸಿಬಿ ವಿಜಯೋತ್ಸವದ ವೇಳೆ ಬೈಕ್‌ಗಳು ಡಿಕ್ಕಿಯಾಗಿ ಯುವಕ ಸಾವು

ಶಿವಮೊಗ್ಗ: 

    ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ತಂಡ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿ ಅಭಿಮಾನಿಗಳ ಸಂಭ್ರಮಾಚರಣೆ  ಮುಗಿಲು ಮುಟ್ಟಿತ್ತು. ಈ ನಡುವೆ ಸಂಭ್ರಮಾಚರಣೆಗೆ ಹೊರಟಿದ್ದಾಗ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಯುವಕ ಮೃತಟ್ಟಿದ್ದಾನೆ. ವೆಂಕಟೇಶ ನಗರದ ನಿವಾಸಿ ಅಭಿನಂದನ್ (21) ಮೃತ ಯುವಕ.

   ಉಷಾ ನರ್ಸಿಂಗ್‌ ಹೋಂ ಸರ್ಕಲ್‌ ಬಳಿಯ ರವೀಂದ್ರ ನಗರ ಗಣಪತಿ ದೇವಸ್ಥಾನದ ಮುಂದೆ ಅಪಘಾತ ಸಂಭವಿಸಿದೆ. ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಗೆ ಯುವಕರು ಬೈಕ್‌ಗಳಲ್ಲಿ ಹೊರಟಿದ್ದರು. ಈ ಸಂದರ್ಭ ಎರಡು ಬೈಕುಗಳು ಮುಖಾಮುಖಿ ಡಿಕ್ಕಿಯಾಗಿವೆ. ತೀವ್ರ ಗಾಯಗೊಂಡಿದ್ದ ಅಭಿನಂದನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇನ್ನೊಂದು ಬೈಕ್​ನಲ್ಲಿದ್ದ ಮಿಥುನ್​​​ ಹಾಗೂ ಅಭಿಷೇಕ್​​​ ಗಾಯಗೊಂಡಿದ್ದಾರೆ.

    ಮಂಗಳವಾರ ರಾತ್ರಿ RCB ಟೀಂ ಗೆಲುವು ಸಾಧಿಸುತ್ತಿದ್ದಂತೆ ಯುವಕರು, ಕ್ರಿಕೆಟ್​​ ಪ್ರೇಮಿಗಳು ಉಷಾ ನರ್ಸಿಂಗ್​ ಹೋಂ ಬಳಿ ಸಂಭ್ರಮಾಚರಣೆ ನಡೆಸುತ್ತಿದ್ದರು. ನೂರು ಅಡಿ ರಸ್ತೆ ರವೀಂದ್ರ ನಗರದ ಕಡೆ ರಸ್ತೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಕುಣಿಯುತ್ತಿದ್ದರು. ಈ ವೇಳೆ ಮಿಥುನ್ ಹಾಗೂ ಅಭಿಷೇಕ್ ತಮ್ಮ ಬೈಕ್​ನಲ್ಲಿ ಉಷಾ ನರ್ಸಿಂಗ್​ ಹೋಂ ಕಡೆಯಿಂದ ವಿನೋಬನಗರ ಕಡೆಗೆ ಹೋಗುತ್ತಿದ್ದಾಗ, ಅದೇ ಕಡೆಯಿಂದ ಅಭಿಷೇಕ್​​ ಬರುತ್ತಿದ್ದು ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿವೆ. ಈ ವೇಳೆ ಅಭಿಷೇಕ್​ ಸ್ಥಳದಲ್ಲೇ ಮೃತಪಟ್ಟದ್ದಾನೆ.

Recent Articles

spot_img

Related Stories

Share via
Copy link