ಡೀಸೆಲ್​​​ ಟ್ಯಾಂಕರ್​​​ಗೆ ಡಿಕ್ಕಿ, ಹೊತ್ತಿ ಉರಿದ ಕಾರು ; ಐವರು ಸಜೀವ ದಹನ..!

ಆಗ್ರಾ : 

     ಡೀಸೆಲ್ ಸಾಗಿಸುತ್ತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದ ಕಾರು ಬೆಂಕಿಗೆ ಆಹುತಿಯಾಗಿ ಕಾರಿನಲ್ಲಿದ್ದ ಐವರು ಜೀವಂತ ದಹನವಾಗಿರುವ ಘಟನೆ ಯಮುನಾ ಎಕ್ಸ್‍ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದೆ.

    ನಾಗಾಲ್ಯಾಂಡ್​ ನೋಂದಣಿ ಸಂಖ್ಯೆಯುಳ್ಳ ಕಂಟೈನರ್​ ವಿರುದ್ಧ ದಿಕ್ಕಿನಲ್ಲಿ ಬರುತ್ತಿತ್ತು. ಕಾರಿನ ಚಾಲಕನಿಗೆ ಇದರ ಅರಿವು ಆಗಲಿಲ್ಲ. ಕಂಟೈನರ್​ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿತು. ಹೊರಕ್ಕೆ ಬರಲಾಗದೇ ಕಾರಿನಲ್ಲಿದ್ದವು ಕೂಗಿಕೊಂಡಿದ್ದಾರೆ. ಅಪಘಾತಕ್ಕೆ ಈಡಾದ ಕಾರು ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಹೊಂದಿದ್ದರಿಂದ ಒಳಿಗಿದ್ದವರು ಹೊರ ಬರಲು ಸಾಧ್ಯವಾಗದೆ ಬೆಂಕಿಗೆ ಆಹುತಿಯಾದರು ಎಂದು ಎತ್ಮಾಪುರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಅರ್ಚನಾ ಸಿಂಗ್ ತಿಳಿಸಿದ್ದಾರೆ.

      ಬೆಂಕಿ ದಹದಹಿಸುತ್ತಿದ್ದ ಕಾರಣ, ಸ್ಥಳೀಯರು ಸಮೀಪ ಹೋಗಲು ಭಯಪಟ್ಟಿದ್ದಾರೆ. ರಕ್ಷಣೆಗೆ ಧಾವಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕದಳದ ಸಿಬ್ಬಂದಿಗೆ ಕರೆ ಮಾಡಿ, ಅವರು ಒಂದು ಗಂಟೆ ಬಿಟ್ಟು ಬರುವಷ್ಟರಲ್ಲಿ ಕಾರಿನಲ್ಲಿದ್ದವರೆಲ್ಲರೂ ಸುಟ್ಟು ಕರಕಲಾಗಿ ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap