ಬಳ್ಳಾರಿ :
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದು, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಎದುರುಗಡೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಕಾರಣ ಕೇಂದ್ರ ನೀರಾವರಿ ಆಯೋಗದ ಇಬ್ಬರು ಅಧಿಕಾರಿಗಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ – 50 ರ ಹಾರುವನಹಳ್ಳಿ ಗ್ರಾಮದ ಸಮೀಪ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ನಾಲ್ವರು ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಕೇಂದ್ರ ನೀರಾವರಿ ಆಯೋಗದ ನಿರ್ದೇಶಕರಾಗಿರುವ ಬೆಂಗಳೂರು ಮೂಲದ ರಾಮಸ್ವಾಮಿ (50), ಜಿತೇಂದ್ರ (50), ತಿಪಟೂರಿನ ಕಾವ್ಯ (30) ಮತ್ತು ಶರಣಬಸವ (10). ಎಂದು ಗುರುತಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
