ಗಂಗಾನದಿಗೆ ಉರುಳಿ ಬಿದ್ದು ಪಿಕ್ಅಪ್ ವಾಹನ ; 9 ಮಂದಿ ಸಾವು!!

ಪಟ್ನಾ:

     ಪ್ರಯಾಣಿಕರ ಹೊತ್ತೊಯುತ್ತಿದ್ದ ಪಿಕಪ್‌ ‌ಜೀಪು ಗಂಗಾ ನದಿಯಲ್ಲಿ ಉರುಳಿಬಿದ್ದಿದ್ದು, 9 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

      ದಾನಪುರದ ಚಿತ್ರಕೂಟ ನಗರದಲ್ಲಿನ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಅಖಿಪುರಕ್ಕೆ ವಾಪಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನು ಈ ವಾಹನದಲ್ಲಿ ಒಟ್ಟು 13 ಮಂದಿಯಿದ್ದು, ನಾಲ್ವರು ಈಜಿ ದಡ ಸೇರಿದ್ದಾರೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ತಿಳಿಸಿದ್ದಾರೆ.

      ಸ್ಥಳಕ್ಕೆ ಎನ್‌ಡಿಆರ್‌ಎಫ್‌ ಸಿಬ್ಬಂದಿ ಧಾಮಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ಪರಿಹಾರ ಘೋಷಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link