ಕೊಪ್ಪಳ : ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಸಾವು

ಕೊಪ್ಪಳ: 

   ತಾಲೂಕಿನ ಮಂಗಳಾಪುರ ಗ್ರಾಮದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. ಹುಬ್ಬಳ್ಳಿಯ ಹೆಬ್ಬಸೂರ ಗ್ರಾಮದ ಬಳಿ ಶುಕ್ರವಾರ ತಡ ರಾತ್ರಿ ಘಟನೆ ನಡೆದಿದೆ. ಓಮಿನಿ ಮತ್ತು ಲಾರಿ ನಡುವೆ ನಡೆದ ಅಪಘಾತ ನಡೆದಿದ್ದು, ಘಟನೆಯಲ್ಲಿ ಜಾಫರಸಾಬ ಮಂಗಳೂರು(60), ಮುಸ್ತಫಾ (36), ಶೊಹೇಬ್(6)ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

   ಜಾಫರ್‌ ಅವರಿಗೆ ಪಾರ್ಶ್ವವಾಯು ಸಂಬಂಧಿತ ಸಮಸ್ಯೆಗೆ ಚಿಕಿತ್ಸೆ ಕೊಡಿಸಲು ಒಂದೇ ಕುಟುಂಬದ ಆರು ಜನ ಓಮಿನಿ ವಾಹನದಲ್ಲಿ ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಲಗಾಕ್ಕೆ ತೆರಳಿದ್ದರು. ವಾಪಸ್‌ ಬರುವಾಗ ಈ ದುರ್ಘಟನೆ ನಡೆದಿದೆ. ಹೆಬಸೂರು ಬಳಿ ಆರು ಜನರಿದ್ದ ವಾಹನ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ.

    ಇದರಿಂದ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ. ಇನ್ನು ಮೂವರಿಗೆ ಗಂಭೀರ ಗಾಯವಾಗಿದ್ದು, ಎಸ್ಡಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಮಾಮ ಸಾಬ, ಹುಸೇನ ಬಾಷಾ, ಫೈಜಲ್ ಎಂಬುವವರು ಗಾಯಗೊಂಡಿದ್ದಾರೆ.

Recent Articles

spot_img

Related Stories

Share via
Copy link