ನವದೆಹಲಿ
ವಿವಾದಿತ ಅದಾನಿ ಸಮೂಹ ಸಂಸ್ಥೆಯು ಮುಂದಿನ ತಿಂಗಳ ಅಂತ್ಯದ ವೇಳೆಗೆ 690 ಮಿಲಿಯನ್ ಡಾಲರ್ ಮತ್ತು 790 ಮಿಲಿಯನ್ ಡಾಲರ್ ಮೌಲ್ಯದ ಷೇರು-ಬೆಂಬಲಿತ ಸಾಲಗಳನ್ನು ಅವಧಿ ಮುನ್ನ ಪಾವತಿ ಮಾಡಲು ಯೋಜಿಸಿದೆ ಎಂದು ವರದಿಗಳು ತಿಳಿಸಿವೆ.
ಅದಾನಿ ಗ್ರೀನ್ ಎನರ್ಜಿ ತನ್ನ 2024 ಬಾಂಡ್‌ಗಳನ್ನು 800 ಮಿಲಿಯನ್ ಡಾಲರ್ ಅನ್ನು ಮೂರು ವರ್ಷಗಳ ಕ್ರೆಡಿಟ್ ಲೈನ್ ಮೂಲಕ ಮರುಪಾವತಿ ಮಾಡಲು ಯೋಜಿಸಿದೆ ಎಂದು ಮೂಲಗಳು ತಿಳಿಸಿದೆ ಎಂದು ಎನ್‌ಡಿಟಿವಿ ತಿಳಿಸಿದೆ. ವಿವಿಧ ಯೋಜನೆಗಳನ್ನು ಮಂಗಳವಾರ ಹಾಂಗ್ ಕಾಂಗ್‌ನಲ್ಲಿರುವ ಗುಂಪಿನ ಬಾಂಡ್‌ಹೋಲ್ಡರ್‌ಗಳಿಗೆ ಅದಾನಿ ಮ್ಯಾನೇಜ್‌ಮೆಂಟ್ ಪ್ರಸ್ತುತಪಡಿಸಿದೆ.