ಪಾಟ್ನಾ:
ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಮರು ಪರಿಶೀಲನೆಗಾಗಿ ಚುನಾವಣಾ ಆಯೋಗವು ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸಬೇಕು ಮತ್ತು ಅದನ್ನು ಮಾನ್ಯ ಎಂದು ಪರಿಗಣಿಸಲಾದ 11 ಇತರ ದಾಖಲೆಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ವಿಶೇಷ ತೀವ್ರ ಪರಿಷ್ಕರಣೆ ಪ್ರಕರಣದಲ್ಲಿ ಹೇಳಿದೆ. ಇಂದು ಬೆಳಿಗ್ಗೆ ನ್ಯಾಯಾಲಯದಲ್ಲಿ ಹೊರಡಿಸಲಾದ ಮೌಖಿಕ ಆದೇಶದಲ್ಲಿ, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಅಥವಾ ಹೊರಗಿಡುವ ಉದ್ದೇಶಕ್ಕಾಗಿ ವ್ಯಕ್ತಿಯ ಗುರುತನ್ನು ದೃಢೀಕರಣಕ್ಕಾಗಿ ಆಧಾರ್ ಕಾರ್ಡ್‌ಗಳನ್ನು 12 ನೇ ದಾಖಲೆಯಾಗಿ ಸ್ವೀಕರಿಸಬೇಕು ಎಂದು ಹೇಳಿದೆ.
ಕರಡು ಪಟ್ಟಿಯಲ್ಲಿರುವ 7.24 ಕೋಟಿ ಮತದಾರರಲ್ಲಿ ಶೇ 99.6 ರಷ್ಟು ಜನರು ಈಗಾಗಲೇ ದಾಖಲೆಗಳನ್ನು ಸಲ್ಲಿಸಿದ್ದಾರೆ ಮತ್ತು ಈಗ ಆಧಾರ್ ಸೇರಿಸಲು ಕೋರುವುದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ಚುನಾವಣಾ ಆಯೋಗದ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಆದಾಗ್ಯೂ, ಆಧಾರ್ ಅನ್ನು ನಕಲಿ ಮಾಡಬಹುದು ಮತ್ತು ಆದ್ದರಿಂದ ದೃಢಕರೀಸಲು ಸೂಕ್ತವಲ್ಲದ ಆಯ್ಕೆಯಾಗಿದೆ ಎಂಬ ಚುನಾವಣಾ ಆಯೋಗದ ಹಿಂದಿನ ಆಕ್ಷೇಪಣೆಗೆ ಒಪ್ಪಿಗೆ ಸೂಚಿಸುತ್ತಾ, ಚುನಾವಣಾ ಅಧಿಕಾರಿಗಳು “ಕಾರ್ಡ್‌ನ ನೈಜತೆಯನ್ನು ಪರಿಶೀಲಿಸಬಹುದು ಎಂದು ಸುಪ್ರೀಂ ಹೇಳಿದೆ.
ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ (ಎಸ್ಐಆರ್) ಹಲವು ಕಾರಣಗಳಿಂದ ಅನರ್ಹರಾಗಿ ಕರಡು ಮತಪಟ್ಟಿಯಲ್ಲಿ ಸ್ಥಾನ ಪಡೆಯದ 65 ಲಕ್ಷ ಜನರ ಮಾಹಿತಿಯನ್ನು ಬಿಡುಗಡೆ ಮಾಡಿತ್ತು. ಪರಿಷ್ಕರಣೆಯ ವೇಳೆ ಮತದಾರರು ಸೂಚಿಸಿದ ಸ್ಥಳದಲ್ಲಿ ಗೈರು, ವಲಸೆ, ಸಾವುಗಳ ಆಧಾರದ ಮೇಲೆ ಅವರನ್ನು ಮತಪಟ್ಟಿಯಿಂದ ಕೈಬಿಡಲಾಗಿತ್ತು.
ಈ ಕುರಿತ ಮಾಹಿತಿಯನ್ನು ಹೆಸರು ಸಮೇತ ಪ್ರಕಟಿಸಲು ಸುಪ್ರೀಂಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ದಾಖಲೆಗಳನ್ನು ನೀಡಿತ್ತು. ಕೋರ್ಟ್ ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ SIR ಪ್ರಕ್ರಿಯೆಯಲ್ಲಿ ಹೊರಗುಳಿದ ಮತದಾರರು ಭೌತಿಕ ಅರ್ಜಿ ಸಲ್ಲಿಕೆ ಜೊತೆಗೆ ಆನ್‌ಲೈನ್ ವಿಧಾನದ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುವಂತೆ ಪೀಠ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತು. ಆಧಾರ್ ಕಾರ್ಡ್ ಅಥವಾ ರೆಸಿಡೆನ್ಸಿಯ ಯಾವುದೇ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕೆಂದು ತಿಳಿಸಿತು.








