ಸಾರ್ವಜನಿಕರ ಸುರಕ್ಷತೆಗೆ ಎಮರ್ಜೆನ್ಸಿ ಕಾಲ್ ಬಾಕ್ಸ್ ಅಳವಡಿಕೆ ಸಮಗ್ರ ನಗರ ನಿರ್ವಹಣೆಯಡಿ ಸ್ಮಾರ್ಟ್ಸಸಿಟಿಯಿಂದ ವಿನೂತನ ಯೋಜನೆ

ತುಮಕೂರು:

ನಗರದ ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರ ವ್ಯಾಪ್ತಿಯ 41 ಪ್ರದೇಶಗಳಲ್ಲಿ ಪಬ್ಲಿಕ್ ಅನೌನ್ಸ್‍ಮೆಂಟ್ ಮತ್ತು ಎಮರ್ಜೆನ್ಸಿ ಕಾಲ್ ಬಾಕ್ಸ್‍ಗಳನ್ನು ಅಳವಡಿಸಲಾಗಿದೆ.

ನಗರದಲ್ಲಿ ಸ್ಮಾರ್ಟ್ ಸಿಟಿ ಕೈಗೊಂಡಿರುವ ಪ್ರಮುಖ ಯೋಜನೆಗಳಲ್ಲೊಂದಾದ ಸಮಗ್ರ ನಗರ ನಿರ್ವಹಣೆ ಮತ್ತು ನಿಯಂತ್ರಣ ಕೇಂದ್ರ(ಐಸಿಎಂಸಿಸಿ) ಯೋಜನೆಯಡಿ ಈ ಎಮರ್ಜೆನ್ಸಿ ಕಾಲ್ (ತುರ್ತು ಸಹಾಯವಾಣಿ) ಬಾಕ್ಸ್‍ಗಳನ್ನು ಅಳವಡಿಸಲಾಗಿದೆ. ಸಾರಿಗೆ, ಅಗ್ನಿಶಾಮಕ, ಜಲಮಂಡಳಿ, ಪೊಲೀಸ್, ಇ-ಆಡಳಿತ ಸೇರಿದಂತೆ ವಿವಿಧ ಕ್ರಿಯಾತ್ಮಕ ಇಲಾಖೆಗಳನ್ನೊಳಗೊಂಡಂತೆ ಏಕೈಕ ವೇದಿಕೆ ಕಲ್ಪಿಸಿ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸುರಕ್ಷತೆ ಒದಗಿಸುವುದು ಈ ತುರ್ತು ಸಹಾಯವಾಣಿಯ ಉದ್ದೇಶವಾಗಿದೆ.

ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 4 ದಿನ ಭಾರೀ ಮಳೆ

ತುರ್ತು ಸಂದರ್ಭದಲ್ಲಿ ಎಮರ್ಜೆನ್ಸಿ ಕಾಲ್ ಬಾಕ್ಸ್ ಉಪಯೋಗಿಸಿ:

ಸಾರ್ವಜನಿಕರು ಅಪಘಾತ, ಆಂಬುಲೆನ್ಸ್ ಸೇವೆ, ಪೊಲೀಸ್ 112 ಸೇವೆ, ಕಳ್ಳತನ, ಆರೋಗ್ಯ ಸೇವೆ, ಸಂಚಾರಿ ನಿಯಮ ಉಲ್ಲಂಘನೆ ಸೇರಿದಂತೆ ಯಾವುದೇ ತುರ್ತು ಸಂದರ್ಭಗಳಲ್ಲಿ ಎಮರ್ಜೆನ್ಸಿ ಕಾಲ್ ಬಾಕ್ಸ್ ಅನ್ನು ಉಪಯೋಗಿಸಬಹುದಾಗಿದೆ.

ಜೀವ ಉಳಿಸುವ ಬಾಕ್ಸ್: ಎಮರ್ಜೆನ್ಸಿ ಕಾಲ್ ಬಾಕ್ಸ್ ಅನ್ನು ಜೀವ ಉಳಿಸುವ ಬಾಕ್ಸ್ (SoS= Save our Soul) ಎಂದರೂ ತಪ್ಪಾಗಲಾರದು. ರಸ್ತೆ ಅಪಘಾತ ಸೇರಿದಂತೆ ಮತ್ತಿತರ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಮೂಲಕ ಜೀವವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದ್ದರೂ ಅಗತ್ಯ ನೆರವು ದೊರೆಯದೆ ಗಾಯಾಳುಗಳು ಸಾವನ್ನಪ್ಪಿರುವ ಎಷ್ಟೋ ನಿದರ್ಶನಗಳಿವೆ. ಇಂತಹ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಸಕಾಲದಲ್ಲಿ ಆಂಬುಲೆನ್ಸ್ ಸೇವೆ, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ತುರ್ತು ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯುವ ಮೂಲಕ ಜೀವನ್ಮರಣದ ನಡುವೆ ಹೋರಾಡುತ್ತಿರುವವರಿಗೆ ಮರು ಜೀವ ನೀಡಲು ಸಾಧ್ಯ ಮಾಡಬಹುದಾಗಿದೆ.

ಯೂಕ್ರೇನ್​ ಶಾಲೆ ಮೇಲೆ ರಷ್ಯಾ ಬಾಂಬ್​: ಮಕ್ಕಳು ಸೇರಿ 60 ಜನ ಮೃತಪಟ್ಟಿರುವ ಶಂಕೆ

ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಎಮರ್ಜೆನ್ಸಿ ಕಾಲ್ ಬಾಕ್ಸ್‍ನಲ್ಲಿರುವ ಕೆಂಪು ಗುಂಡಿಯನ್ನು ಒತ್ತಿ ಕರೆ ಮಾಡಬೇಕು. ತುರ್ತು ಸಹಾಯವಾಣಿಯಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು, ಕೆಂಪು ಗುಂಡಿ ಒತ್ತಿದ ಕೂಡಲೇ ಸ್ಮಾರ್ಟ್ ಸಿಟಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‍ಗೆ ವೀಡಿಯೋ ಕರೆ ಬರುತ್ತದೆ. ನಂತರ ಕಮ್ಯಾಂಡ್ ಸೆಂಟರ್ ಆಪರೇಟರ್‍ಗಳು ಸ್ವೀಕೃತ ಕರೆ ಆಧರಿಸಿ ನಕಲಿ ಕರೆಯೋ ಅಥವಾ ಅಸಲೀ ಕರೆಯೋ ಎಂದು ತಿಳಿದು ಅಗತ್ಯ ಸೇವೆಗಳನ್ನು ನೀಡಲಿದ್ದಾರೆ.

ನಗರದ 41 ಕಡೆ ಎಮರ್ಜೆನ್ಸಿ ಕಾಲ್ ಬಾಕ್ಸ್ : ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಎಮರ್ಜೆನ್ಸಿ ಕಾಲ್ ಬಾಕ್ಸ್ ಮೂಲಕ ಕರೆ ಮಾಡಲು 41 ಕಡೆ ಎಮರ್ಜೆನ್ಸಿ ಬಾಕ್ಸ್‍ಗಳನ್ನು ಅಳವಡಿಸಲಾಗಿದೆ. ನಗರ ವ್ಯಾಪ್ತಿಯ ದೇವರಾಯಪಟ್ಟಣ, ಶ್ರೀ ಸಿದ್ದಗಂಗಾ ಮಠ ಮುಂಭಾಗದ ಗೇಟ್, ಶ್ರೀ ಸಿದ್ದಗಂಗಾ ಮಠ ಹಿಂಭಾಗದ ಗೇಟ್, ಗೋಕುಲ್ ಬಡಾವಣೆ, ಹನುಮಂತಪುರ, ಯಲ್ಲಾಪುರ, ಹೆಚ್.ಎಂ.ಎಸ್. ಸಾಲೆ, ದಿಬ್ಬೂರು, ರಾಣಿ ಚೆನ್ನಮ್ಮ ವೃತ್ತ, ಕಾರ್ತಿಕ್ ಬಾರ್, ಸಂಕ್ರಾಂತಿ ಸ್ಟೋರ್, ಎಸ್‍ಎಸ್‍ಐಟಿ ಕಾಲೇಜು, ಮರಳೂರು ದಿಣ್ಣೆ, ಬನಶಂಕರಿ,

 ಮುಸ್ಲಿಂರು ಸುಪ್ರೀಂಕೋರ್ಟ್ ಆದೇಶ ಪಾಲಿಸದಿದ್ದರೆ ಹಿಂದೂ ಸಮಾಜದಿಂದ ಪೂರ್ಣ ಬಹಿಷ್ಕಾರ : ಪ್ರಮೋದ್ ಮುತಾಲಿಕ್ ಎಚ್ಚರಿಕೆ

ಮಾರುತಿ ನಗರ ಕಮಾನು, ಜಿಮ್ ವೃತ್ತ, ಉಪ್ಪಾರಹಳ್ಳಿ ಆಟೋನಿಲ್ದಾಣ, ನಮ್ಮೂರ ಆಹಾರ, ದೋಬಿ ಘಾಟ್, ಹೊರಪೇಟೆ ವೃತ್ತ, ಕೋತಿ ತೋಪು, ಅಮಾನಿಕೆರೆ ಪಾರ್ಕ್, ರಂಗಾಪುರ ಸ್ಕೈವಾಕ್, ಬಾಂಬೆ ಬಿಲ್ಡಿಂಗ್, ಕುರಿಪಾಳ್ಯ ವೃತ್ತ, ಕೆಸರಮಡು, ಶೆಟ್ಟಿಹಳ್ಳಿ, ಗೆದ್ದಲಹಳ್ಳಿ, ಕ್ಯಾತಸಂದ್ರ, ಬಡವಾಡಿ, ಶಿವಕುಮಾರ ಸ್ವಾಮಿ ವೃತ್ತ, ಭದ್ರಮ್ಮ ವೃತ್ತ, ಕಾಲ್ಟೆಕ್ಸ್ ವೃತ್ತ, ಗುಬ್ಬಿ ಗೇಟ್, ಕೋಡಿ ವೃತ್ತದ ಬಳಿ ತಲಾ ಒಂದು ಹಾಗೂ ದಾನಾ ಪ್ಯಾಲೇಸ್, ಶಿರಾ ಗೇಟ್ ಪ್ರದೇಶದಲ್ಲಿ ತಲಾ 2 ಸೇರಿದಂತೆ ಒಟ್ಟು 41 ಕಡೆ ಎಮರ್ಜೆನ್ಸಿ ಕಾಲ್ ಬಾಕ್ಸ್‍ಗಳನ್ನು ಅಳವಡಿಸಲಾಗಿದೆ.

ನಗರದಲ್ಲಿ 2020ರ ಮಾರ್ಚ್ ಮಾಹೆಯಲ್ಲಿ ಎಮರ್ಜೆನ್ಸಿ ಕಾಲ್ ಬಾಕ್ಸ್‍ಗಳನ್ನು ಅಳವಡಿಸಲಾಗಿದ್ದು, ಈವರೆಗು ಸುಮಾರು 300 ಕರೆಗಳನ್ನು ಸ್ವೀಕರಿಸಲಾಗಿದೆ. ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಸುವ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‍ನಲ್ಲಿ ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ 38 ಸಿಬ್ಬಂದಿಗಳು 3 ಪಾಳಿ(Shiಜಿಣ)ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಿಜೆಪಿ ಮುಖಂಡನಿಂದ ಭಾರಿ ವಂಚನೆ? ಡೆತ್‌ನೋಟ್‌ ಬರೆದಿಟ್ಟು ಮೈಸೂರು ಉದ್ಯಮಿ ಆತ್ಮಹತ್ಯೆ

ಬಹಳಷ್ಟು ಜನರಿಗೆ ಎಮರ್ಜೆನ್ಸಿ ಕಾಲ್ ಬಾಕ್ಸ್ ಬಳಕೆ ಹಾಗೂ ಪ್ರಯೋಜನಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಕಮ್ಯಾಂಡ್ ಸೆಂಟರ್‍ನಲ್ಲಿ ಎಲ್ಲ ಲೊಕೇಶನ್‍ಗಳ ನಕ್ಷೆಯನ್ನು ಅಳವಡಿಸಲಾಗಿದ್ದು, ಪ್ರತಿಯೊಂದೂ ಎಮರ್ಜೆನ್ಸಿ ಕಾಲ್ ಬಾಕ್ಸ್‍ಗಳಿಗೆ ಪ್ರತ್ಯೇಕ ಕೋಡ್‍ಗಳನ್ನು ನೀಡಲಾಗಿದೆ. ಕಾಲ್ ಬಾಕ್ಸ್‍ನಲ್ಲಿ ಕೆಂಪು ಗುಂಡಿ ಒತ್ತಿದ ಲೊಕೇಶನ್ ಯಾವುದೆಂದು ಈ ಕೋಡ್ ಮೂಲಕ ತಿಳಿಯುತ್ತದೆ.

ಕಮ್ಯಾಂಡ್ ಸೆಂಟರ್‍ನಲ್ಲಿರುವ ರಿಸೀವರ್‍ನಲ್ಲಿ ಯಾವ ಲೊಕೇಶನ್‍ನಿಂದ ಕರೆ ಬರುತ್ತಿದೆ ಎಂದು ತಿಳಿಯುವ ವ್ಯವಸ್ಥೆಯಿರುವುದರಿಂದ ಅಪಘಾತ ನಡೆದಿರುವ ಸ್ಥಳವನ್ನು ಪತ್ತೆ ಹಚ್ಚಿ ಕಡಿಮೆ ಸಮಯದಲ್ಲಿ ಸ್ಥಳಕ್ಕೆ ಧಾವಿಸಿ ನೆರವು ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಎಮರ್ಜೆನ್ಸಿ ಕಾಲ್ ಬಾಕ್ಸ್ ಬಳಕೆ ಮಾಡುವ ಮೂಲಕ ಅಗತ್ಯ ನೆರವು ಪಡೆಯಬೇಕೆಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ. ರಂಗಸ್ವಾಮಿ ಮನವಿ ಮಾಡಿದ್ದಾರೆ.

                                                                       – ವರದಿ: ಆರ್. ರೂಪಕಲಾ, ವಾರ್ತಾ ಇಲಾಖೆ, ತುಮಕೂರು

ಉದ್ಘಾಟನೆಯಾದ 48 ಗಂಟೆಗಳಲ್ಲೇ ಕಿತ್ತು ಬಂದ ರಾಜ್ಯದ ಮೊಟ್ಟದ ಮೊದಲ ತೇಲುವ ಸೇತುವೆ: ಪ್ರವೇಶ ಬಂದ್!!

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap