ಅಫ್ಘಾನ್ ಗಡಿಯಲ್ಲಿ ಮಾರಣಹೋಮ: 23 ಪಾಕ್ ಸೈನಿಕರು….!

ಇಸ್ಲಾಮಾಬಾದ್: 

   ಅಪ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತಾಕಿ ಭಾರತ ಭೇಟಿಯಲ್ಲಿರುವಂತೆಯೇ ಅತ್ತ ಅಫ್ಘಾನ್-ಪಾಕ್ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಮಾರಣಹೋಮ ನಡೆಯುತ್ತಿದೆ.

   ಗಡಿಯಲ್ಲಿ ರಾತ್ರಿಯಿಡೀ ನಡೆದ ಘರ್ಷಣೆಯಲ್ಲಿ 23 ಪಾಕಿಸ್ತಾನಿ ಸೈನಿಕರು ಮತ್ತು 200 ಕ್ಕೂ ಹೆಚ್ಚು ತಾಲಿಬಾನ್ ಸೈನಿಕರು ಹಾಗೂ ಅದರ ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನಿ ಸೇನೆ ಭಾನುವಾರ ತಿಳಿಸಿದೆ. ಗಡಿಯಾಚೆಗಿನ ಆಕ್ರಮಣದ ಪರಸ್ಪರ ಆರೋಪಗಳ ನಡುವೆ ನೆರೆಹೊರೆಯವರ ನಡುವೆ ಉದ್ವಿಗ್ನತೆ ಉಲ್ಬಣಗೊಂಡಿದೆ.

   ಗಡಿ ಪ್ರದೇಶಗಳಲ್ಲಿ ಅಫ್ಘಾನ್ ಪಡೆಗಳ ಅಪ್ರಚೋದಿತ ದಾಳಿಗಳಿಗೆ ಪ್ರತಿಕ್ರಿಯೆಯಾಗಿ 19 ಅಫ್ಘಾನ್ ಮಿಲಿಟರಿ ಪೋಸ್ಟ್‌ಗಳು ಮತ್ತು ಭಯೋತ್ಪಾದಕ ಅಡಗುತಾಣಗಳನ್ನು ವಶಕ್ಕೆ ಪಡೆದಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ.

   ಈ ಮಧ್ಯೆ ಪ್ರತೀಕಾರದ ಕಾರ್ಯಾಚರಣೆಯಲ್ಲಿ 58 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದಾರೆ ಎಂದು ಕಾಬೂಲ್ ಹೇಳಿದೆ. ಅಕ್ಟೋಬರ್ 11-12 ರ ಮಧ್ಯರಾತ್ರಿಯಲ್ಲಿ, ಅಫ್ಘಾನ್ ತಾಲಿಬಾನ್ ಮತ್ತು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಉಗ್ರರು ಪಾಕ್-ಆಫ್ಘಾನ್ ಗಡಿಯಲ್ಲಿ ಪಾಕಿಸ್ತಾನದ ಮೇಲೆ ಅಪ್ರಚೋದಿತ ದಾಳಿ ಆರಂಭಿಸಿದ್ದು, ಪಾಕಿಸ್ತಾನಿ ಪಡೆಗಳು “ಗಡಿ ಉದ್ದಕ್ಕೂ ನಿರ್ಣಾಯಕವಾಗಿ ದಾಳಿಯನ್ನು ಹಿಮ್ಮೆಟ್ಟಿಸಿದೆ ಮತ್ತು ತಾಲಿಬಾನ್ ಪಡೆಗಳು ಮತ್ತು ಖ್ವಾರ್ಜಿಗಳಿಗೆ (TTP ಉಗ್ರರು) ಭಾರಿ ಸಾವುನೋವುಗಳನ್ನು ಉಂಟುಮಾಡಿದೆ. ಭದ್ರತಾ ಪಡೆಗಳು ತಾಲಿಬಾನ್ ಶಿಬಿರಗಳು, ಪೋಸ್ಟ್‌ಗಳು ಮತ್ತು ಭಯೋತ್ಪಾದಕ ತರಬೇತಿ ಕೇಂದ್ರಗಳ ಮೇಲೆ ನಿಖರವಾದ ದಾಳಿ ನಡೆಸಿವೆ ಎಂದು ಹೇಳಿಕೆಯಲ್ಲಿ ಪಾಕ್ ಸೇನೆ ತಿಳಿಸಿದೆ.

   ಅಪ್ಘಾನ್ ಜೊತೆಗಿನ ಸಂಘರ್ಷದಲ್ಲಿ 23 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ. 200 ಕ್ಕೂ ಹೆಚ್ಚು ತಾಲಿಬಾನ್ ಮತ್ತು ಅದರ ಉಗ್ರರು ಹತರಾಗಿದ್ದಾರೆ. ಅನೇಕ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ನಾಶಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ.ಪಾಕಿಸ್ತಾನದ ಸಾರ್ವಭೌಮತ್ವ ಕಾಪಾಡುವಲ್ಲಿ ಯಾವುದೇ ರಾಜಿ” ಇಲ್ಲ ಎಂದು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ್ದಾರೆ.

   ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ನೇತೃತ್ವದಲ್ಲಿ ಪಾಕಿಸ್ತಾನ ಸೇನೆಯ ಕ್ರಮವನ್ನು ಶರೀಫ್ ಶ್ಲಾಘಿಸಿದ್ದು, “ಪ್ರತಿಯೊಂದು ಪ್ರಚೋದನೆಗೆ ಸೂಕ್ತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಯನ್ನು ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

Recent Articles

spot_img

Related Stories

Share via
Copy link