ನವದೆಹಲಿ:
ಪಾಕಿಸ್ತಾನ ಎಂದರೆ ಭಾರತ ಮಾತ್ರ ಅಲ್ಲ, ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳು ದ್ವೇಷಿಸುವ ರಾಷ್ಟ್ರ. ಇನ್ನು ನೆರೆಯ ಅಫ್ಘಾನಿಸ್ತಾನ ಅಂತೂ ಪಾಕಿಸ್ತಾನದ ಕುಕೃತ್ಯದಿಂದ ಬೇಸತ್ತಿರೋದಂತೂ ಅಕ್ಷರಶಃ ನಿಜ. ಹೀಗಾಗಿಯೇ ಅಲ್ಲಿನ ಜನ ಪಾಕಿಸ್ತಾನ ಅಂದ್ರೆ ಸಾಕು ಕೆಂಡ ಕಾರುತ್ತಾರೆ ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೊಂದು ಭಾರೀ ಸದ್ದು ಮಾಡುತ್ತಿದ್ದು, ಹೀಗೇ ಮುಂದುವರೆದರೆ ಪಾಕ್ ಸಂಪೂರ್ಣವಾಗಿ ನಿರ್ಣಾಮ ಆಗದಂತೂ ನಿಜ ಅಂತಿದ್ದಾರೆ ವಿಡಿಯೋ ನೋಡಿದ ನೆಟ್ಟಿಗರು.
ಅಫ್ಘಾನಿಸ್ತಾನ ಪ್ರವಾಸದಲ್ಲಿದ್ದ ಭಾರತೀಯ ಯೂಟ್ಯೂಬರ್ ಜೊತೆ ಮಾತನಾಡಿದ ಅಲ್ಲಿನ ವೃದ್ಧರೊಬ್ಬರು ಭಾರತ ಮತ್ತು ಅಫ್ಘಾನಿಸ್ತಾನ ಜೊತೆಗೂಡಿದರೆ ಪಾಕ್ ಅಂತ್ಯ ಖಂಡಿತ ಎಂಬ ಮಾತನ್ನು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದುಮಾಡುತ್ತಿದೆ. ‘ಭಾರತ ಮತ್ತು ಅಫ್ಘಾನಿಸ್ತಾನ ಮಿತ್ರ ರಾಷ್ಟ್ರಗಳು. ನಾವು ಸಹೋದರರಿದ್ದಂತೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಬೆಸುಗೆ ಎರಡೂ ದೇಶಗಳನ್ನು ಒಗ್ಗೂಡಿಸುತ್ತದೆ. ಹೀಗಾಗಿ ಎರಡೂ ರಾಷ್ಟ್ರಗಳು ಜೊತೆಗೂಡಿದರೆ ನಮ್ಮ ಶತ್ರು ರಾಷ್ಟ್ರವನ್ನು ಬಹಳ ಸುಲಭವಾಗಿ ಸರ್ವನಾಶ ಮಾಡಬಹುದಾಗಿ ಎಂದು ಅವರು ಹೇಳಿದ್ದಾರೆ.
‘ನೀವು ಆಕಡೆಯಿಂದ ದಾಳಿ ನಡೆಸಿ.. ನಾವು ಈ ಕಡೆಯಿಂದ ದಾಳಿ ನಡೆಸುತ್ತೇವೆ. ಅಫ್ಘಾನಿಸ್ತಾನ ನಿಮ್ಮ ಜೊತೆ ಯಾವಾಗಲೂ ಇದೆ. ಆಫ್ಗನ್ ಜನ ನಿಮ್ಮ ಜೊತೆಗಿದ್ದಾರೆ. ಇಬ್ಬರು ಜೊತೆಗೂಡಿ ದಾಳಿ ನಡೆಸಿದರೆ ಪಾಕ್ ಅನ್ನು ಮಟ್ಟ ಹಾಕಬಹುದು. ಅಲ್ಲಿನ ಸಾಮಾನ್ಯ ಜನರೊಡನೆ ನಮಗೇನು ದ್ವೇಷವಿಲ್ಲ. ಬದಲಾಗಿ ಅಲ್ಲಿನ ಆಡಳಿತ ವ್ಯವಸ್ಥೆ ಬಗ್ಗೆ ನಮಗೆ ಅಸಮಾಧಾನ ಇದೆ’ ಎಂದು ವೃದ್ಧ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಪಿಒಕೆ ಶೀಘ್ರದಲ್ಲೇ ಮತ್ತೆ ನಮ್ಮದಾಗುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಪಾಕಿಸ್ತಾನವನ್ನು ಯಾರೂ ಇಷ್ಟ ಪಡುವುದಿಲ್ಲ… ಅಫ್ಘಾನಿಸ್ತಾನ ಅತ್ಯಂತ ಹೆಚ್ಚಾಗಿ ದ್ವೇಷಿಸುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮೋದಿ ಇದ್ದಲ್ಲಿ ಎಲ್ಲವೂ ಸಾಧ್ಯ ಎಂದು ಮತ್ತೊಬ್ಬ ನೆಟ್ಟಿಗ ರಿಯಾಕ್ಟ್ ಮಾಡಿದ್ದಾರೆ.
ಇನ್ನು ಈದೇ ವಿಡಿಯೋವನ್ನು ಇಟ್ಟುಕೊಂಡು ಹಲವು ಮೀಮ್ಸ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ