ಮಂಗಳೂರು:
ಜಿಲ್ಲೆಯ ಹಲವು ಕಡೆಗಳಲ್ಲಿನ ಪ್ರಸ್ತಿದ್ಧ ಜಾತ್ರೆಗಳಲ್ಲಿ ಹಿಂದೂಯೇತರರ ವ್ಯಾಪಾರಕ್ಕೆ ನಿಷೇಧ ಹೇರಲಾಗಿತ್ತು. ಈ ಬಗ್ಗೆ ಬಹಿರಂಗವಾಗಿಯೇ ಬ್ಯಾನರ್ ನಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಈ ಬಳಿಕ ಈಗ ಮಂಗಳೂರಿನಲ್ಲಿನ ಮುಸ್ಲೀಂ ಹೋಟೆಲ್ ಗಳ ವಿರುದ್ಧವೂ ಭಜರಂಗದಳದಿಂದ ಸಮರ ಸಾರಲಾಗಿದೆ.ತಡರಾತ್ರಿ ಮುಸ್ಲೀಂ ಹೋಟೆಲ್ ಗೆ ಅನುಮತಿಯಾಕೆ ಎಂಬುದಾಗಿ ಪ್ರಶ್ನಿಸಲಾಗಿದೆ.
ಮೈಸೂರಿನಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮಾಧ್ಯಮ ಹೇಳಿಕೆ
ಈ ಬಗ್ಗೆ ಪೋಸ್ಟ್ ಒಂದು ವೈರಲ್ ಕೂಡ ಆಗಿದ್ದು, ವಿಹೆಚ್ ಪಿ ಮುಖಂಡ ಪ್ರದೀವ್ ಎಂಬುವರು ಈ ಬಗ್ಗೆ ಅಭಿಯಾನವನ್ನೇ ಆರಂಭಿಸಿದ್ದಾರೆ ಎನ್ನಲಾಗಿದೆ. ನಗರದಲ್ಲಿ ಅನೇಕ ಮುಸ್ಲೀಂ ಹೋಟೆಲ್ ಗಳು ರಾತ್ರಿ 11ರ ಬಳಿಕವೂ ತೆರೆದಿರುತ್ತವೆ. ಹೀಗೆ ಹೋಟೆಲ್ ತೆರೆಯೋದಕ್ಕೆ ಅವಕಾಶ ಕೊಟ್ಟವರು ಯಾರು.? ಮುಸ್ಲೀಂ ಹೋಟೆಲ್ ಗಳಿಗೆ ಒಂದು ರೂಲ್ಸ್, ಬೇರೆಯವರ ಹೋಟೆಲ್ ಗಳಿಗೆ ಮತ್ತೊಂದು ರೂಲ್ಸ್ ಯಾಕೆ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ವಿಕಲಚೇತನರ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗೆ ಚಾಲನೆ : ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ
ಮಂಗಳೂರಿನಲ್ಲಿ ಅವಧಿ ಮೀರಿದರೂ ತೆರೆಯುವಂತ ಹೋಟೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಲ್ಲಾ ಹೋಟೆಲ್ ಗಳಿಗೂ ಒಂದೇ ರೀತಿಯ ರೂಲ್ಸ್ ಜಾರಿಗೊಳಿಸಬೇಕು. ಈ ಬಗ್ಗೆ ಕೂಡಲೇ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಪೋಸ್ಟರ್ ನಲ್ಲಿ ಒತ್ತಾಯಿಸಿದ್ದಾರೆ. ಈ ಮೂಲಕ ಈಗ ಜಾತ್ರೆಗಳಲ್ಲಿ ಮುಸ್ಲೀಂ ವ್ಯಾಪಾರಕ್ಕೆ ನಿರ್ಬಂಧದ ಬಳಿಕ, ಮುಸ್ಲೀಂ ಹೋಟೆಲ್ ಗಳ ವಿರುದ್ಧವೂ ಕರಾವಳಿ ಜಿಲ್ಲೆಯಲ್ಲಿ ಸಮರ ಆರಂಭಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ