ಎಐ ಪರಿಪಕ್ವತೆ ಸಾಧಿಸುವ ಕಡೆಗೆ ಭಾರತ ಮಹತ್ವದ ಹೆಜ್ಜೆ…..!

ತುಮಕೂರು :

   ಸರ್ವೀಸ್‌ನೌ ಸಂಸ್ಥೆಯು ಪಿಯರ್ಸನ್ ಜೊತೆ ಸೇರಿ ನಡೆಸಿರುವ ಎಐ ಸ್ಕಿಲ್ಸ್ ರಿಸರ್ಚ್ ರಿಪೋರ್ಟ್ 2025ರ ಪ್ರಕಾರ, ಏಜೆಂಟಿಕ್ ಎಐ 2030ರ ವೇಳೆಗೆ ಭಾರತದಲ್ಲಿ 10.35 ಕೋಟಿ ಉದ್ಯೋಗಗಳನ್ನು ಬದಲಿಸುವ ಸಾಧ್ಯತೆ ಇದೆ, ಈ ಮೂಲಕ ಭಾರತವು ವಿಶ್ವದ ಅತಿದೊಡ್ಡ ಕಾರ್ಯ ಪಡೆ ಬದಲಾವಣೆಗೆ ಸಾಕ್ಷಿಯಾಗಲಿದೆ.

   ಈ ಹಿನ್ನೆಲೆಯಲ್ಲಿ ಈ ವರದಿಯು ಭಾರತದ ವಿಶಾಲ ಪ್ರತಿಭಾ ವಲಯವು ಪ್ರಕ್ರಿಯೆ ಆಧರಿತ ಕೆಲಸಗಳಿಂದ ಉದ್ದೇಶ ಪೂರಕ ಆವಿಷ್ಕಾರದ ಕಡೆಗೆ ಬದಲಾವಣೆ ಹೊಂದಲು ಮತ್ತು ಭವಿಷ್ಯದ ಕೆಲಸಗಳಿಗೆ ಸಿದ್ಧಗೊಳ್ಳಲು ಈಗಿನ ತಲೆಮಾರಿಗೆ ಒಂದು ಮಹತ್ವದ ಸೂಚನೆಯನ್ನು ನೀಡುತ್ತಿದೆ.

   ಈ ಕುರಿತು ಮಾತನಾಡಿರುವ ಸರ್ವೀಸ್‌ನೌ ಇಂಡಿಯಾ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್ ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸುಮೀತ್ ಮಾಥುರ್ ಅವರು, “ಭಾರತದ ಎಐ ಪಯಣವು ಒಂದು ನಿರ್ಣಾಯಕ ಘಟ್ಟದಲ್ಲಿದೆ. ಏಜೆಂಟಿಕ್ ಎಐ ಶೀಘ್ರದಲ್ಲಿಯೇ ಉದ್ಯೋಗಿಗಳ ವಲಯವನ್ನು ಬದಲಿಸಲಿದ್ದು, ಇದು ಸುಮಾರು 10.35 ಕೋಟಿ ಉದ್ಯೋಗಗಳನ್ನು ಪುನರ್ ರಚಿಸುವ ನಿರೀಕ್ಷೆ ಹೊಂದಲಾಗಿದೆ. 2030ರ ವೇಳೆಗೆ 30 ಲಕ್ಷಕ್ಕೂ ಹೆಚ್ಚು ಹೊಸ ತಂತ್ರಜ್ಞಾನಾಧರಿತ ಉದ್ಯೋಗಗಳು ಸೃಷ್ಟಿಯಾಗಲಿದೆ” ಎಂದು ಹೇಳಿದರು. 

   ಸರ್ವೀಸ್ ನೌನ ಎಐ ಮೆಚುರಿಟಿ ಇಂಡೆಕ್ಸ್ ಪ್ರಕಾರ ಸ್ಪಷ್ಟ ಎಐ ದೃಷ್ಟಿಕೋನ, ಪ್ಲಾಟ್‌ಫಾರ್ಮ್ ಫಸ್ಟ್ ಚಿಂತನೆ, ಸೂಕ್ತ ಪ್ರತಿಭಾ ಮಿಶ್ರಣ, ಅತ್ಯುತ್ತಮ ಆಡಳಿತ ಮತ್ತು ಏಜೆಂಟಿಕ್ ಎಐ ಅನುಷ್ಠಾನ ಈ ಐದು ವಿಚಾರಗಳಲ್ಲಿ ಮುಂದೆ ಇರುವ ಉದ್ಯಮಗಳು ಈ ಎಐ ಕಾಲಘಟ್ಟದ ವೇಗಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತಿವೆ. ಇದರ ಪರಿಣಾಮ ಬಹಳ ಗಮನಾರ್ಹವಾಗಿದ್ದು, ಶೇ. 57ರಷ್ಟು ಉದ್ಯಮಗಳು ಇದರಿಂದ ಅವರ ದಕ್ಷತೆ ಮತ್ತು ಉತ್ಪಾದಕತೆಯಲ್ಲಿ ಸುಧಾರಣೆ ಹೊಂದಿರುವುದಾಗಿ ತಿಳಿಸಿವೆ.

   ಈ ಕುರಿತು ಮಾಥುರ್ ಅವರು, “ಪ್ರಸ್ತುತ ಎಐ-ಸಿದ್ಧ ಪ್ರತಿಭೆಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಕಾರ್ಯನಿರ್ವಹಣಾ ಕ್ರಮವನ್ನು ಮರುವಿನ್ಯಾಸಗೊಳಿಸುವ ಮತ್ತು ನಿರಂತರವಾಗಿ ಆವಿಷ್ಕಾರ ಆಧರಿತ ವ್ಯಾಪಾರ ಮಾದರಿಗಳನ್ನು ಮರುಅಳವಡಿಸಿಕೊಳ್ಳುವ ಮೂಲಕ ಭಾರತವು ಜಾಗತಿಕವಾಗಿ ಮುಂಚೂಣಿ ಸಾಧಿಸುವ ಅವಕಾಶವಿದೆ. ಈ ವರದಿಯು ಭಾರತೀಯ ಉದ್ಯಮಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ಜಾಗತಿಕ ಸ್ಪರ್ಧೆ ಎದುರಿಸಲು ಧೈರ್ಯವಾಗಿ ಕಾರ್ಯಗತಗೊಳಿಸುವುದು, ಸಂಯೋ ಜಿತ ತಂತ್ರ, ಮತ್ತು ವಿಶ್ವಾಸ, ಪಾರದರ್ಶಕತೆ ಮತ್ತು ಕೌಶಲ್ಯ ಆಧರಿತ ಮಾನವ- ಎಐ ಸಹಕಾರ ಬೇಕು ಎಂದು ಸಾರಲಾಗಿದೆ” ಎಂದು ಹೇಳಿದರು. 

   ಉತ್ಪಾದನಾ ವಲಯ (8 ಮಿಲಿಯನ್), ರಿಟೇಲ್ (7.6 ಮಿಲಿಯನ್), ಮತ್ತು ಶಿಕ್ಷಣ (2.5 ಮಿಲಿಯನ್) ಕ್ಷೇತ್ರಗಳಿಗೆ ಈ ಬದಲಾವಣೆಯಿಂದ ಅತಿಹೆಚ್ಚು ಪರಿಣಾಮ ಉಂಟಾಗಲಿದೆ. ಈ ಉದ್ಯಮಗಳ ಕಾರ್ಯನಿರ್ವಹಣೆ ಮತ್ತು ಆವಿಷ್ಕಾರ ವಿಚಾರದಲ್ಲಿ ಎಐ ಭಾರಿ ಬದಲಾವಣೆಯನ್ನು ಉಂಟುಮಾಡುತ್ತದೆ.

  ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆ ಮತ್ತು ಆಕರ್ಷಕ ಡಿಜಿಟಲ್ ಆರ್ಥಿಕತೆ ಹೊಂದಿರುವ ಭಾರತವು ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿ 3 ಮಿಲಿಯನ್ ತಂತ್ರಜ್ಞಾನ ಉದ್ಯೋಗಿ ಗಳನ್ನು ಹೊಂದಲಿದೆ. ಉದ್ಯಮಗಳು ಎಐ ಕಾನ್ಫಿಗರೇಟರ್‌ ಗಳು (66%), ಎಕ್ಸ್‌ ಪೀರಿಯೆನ್ಸ್ ಡಿಸೈನರ್‌ ಗಳು (57%), ಮತ್ತು ಡೇಟಾ ಸೈಂಟಿಸ್ಟ್‌ ಗಳಂತಹ (65%) ಭವಿಷ್ಯ ಕೇಂದ್ರಿತ ಉದ್ಯೋಗ ಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ. 

   ಎಐ ಮೆಚುರಿಟಿ ಇಂಡೆಕ್ಸ್ ಪ್ರಕಾರ, ಉದ್ಯಮಗಳು ವಾಸ್ತವಿಕ ಎಐ ಬಳಕೆಯತ್ತ ಗಮನ ಹರಿಸುತ್ತಿದ್ದಂತೆ, ಅವರು ಭವಿಷ್ಯದ ಕೇಂದ್ರಿತ ಹುದ್ದೆಗಳಾದ ಎಐ ಕಾನ್ಫಿಗರೇಟರ್‌ಗಳು (66%), ಅನುಭವಿ ವಿನ್ಯಾಸಕಾರರು (57%), ಮತ್ತು ಡೇಟಾ ಸೈಂಟಿಸ್ಟ್‌ ಗಳು (65%) ಇತ್ಯಾದಿ ಹುದ್ದೆಗಳಿಗೆ ಆದ್ಯತೆ ನೀಡುತ್ತಿದ್ದಾರೆ.

   ಉದ್ಯೋಗಿ ಸಮೂಹದ ಗಾತ್ರ ಮತ್ತು ಕೌಶಲ್ಯ ಎರಡೂ ಬೆಳೆಯುತ್ತಿರುವಂತೆ ಉದ್ಯಮದ ಆಕಾಂಕ್ಷೆಗಳು ಕೂಡ ಬೆಳೆಯುತ್ತಾ ಹೋಗುತ್ತಿವೆ. ಭಾರತೀಯ ಸಂಸ್ಥೆಗಳು ಪೈಲಟ್‌ ಗಳು ಮತ್ತು ಪ್ರೂಫ್ ಆಫ್ ಕಾನ್ಸೆಪ್ಟ್‌ ಗಳನ್ನು ಮೀರಿ ಎಐ ಅನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿ ಸಲು ಧೈರ್ಯ ತೋರಿಸುತ್ತಿವೆ ಮತ್ತು ಸಿದ್ಧತೆಯನ್ನು ಮಾಡುತ್ತಿವೆ. 

   ಭಾರತದ ಎಐ ಪಯಣವು ಗಮನಾರ್ಹವಾಗಿ ವೇಗವನ್ನು ಪಡೆಯುತ್ತಿದ್ದರೂ ಬಹಳಷ್ಟು ಸವಾಲುಗಳೂ ಇವೆ. ಡೇಟಾ ಭದ್ರತೆಯು ಶೇ.30ರಷ್ಟು ಭಾರತೀಯ ಉದ್ಯಮಗಳಿಗೆ ಪ್ರಮುಖ ಚಿಂತೆಯಾಗಿದೆ. ಜೊತೆಗೆ, ಶೇ.26ರಷ್ಟು ಸಂಸ್ಥೆಗಳಿಗೆ ಭವಿಷ್ಯದ ಅಗತ್ಯ ಕೌಶಲ್ಯಗಳ ಕುರಿತು ಸ್ಪಷ್ಟತೆ ಇಲ್ಲ. ಇದು ಕಾರ್ಯತಂತ್ರದ ದೂರದೃಷ್ಟಿ ಮತ್ತು ಕ್ರಾಸ್-ಫಂಕ್ಷನಲ್ ರೀಸ್ಕಿಲ್ಲಿಂಗ್ ದಾರಿಯನ್ನು ಕಂಡುಕೊಳ್ಳುವ ತುರ್ತು ಅಗತ್ಯವನ್ನು ಸಾರುತ್ತದೆ.

   ಭಾರತೀಯ ಉದ್ಯಮಗಳು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕಾದರೆ ಎಐ ಒದಗಿಸುವ ಫಲಿತಾಂಶಗಳನ್ನು ಪರಿಶೀಲಿಸಲು ಉದ್ಯೋಗಿಗಳನ್ನು ಸಜ್ಜುಗೊಳಿಸುವುದರ ಜೊತೆಗೆ ಆ ಫಲಿತಾಂಶಗಳಿಗೆ ಕಾರಣವಾದ ಪ್ರಕ್ರಿಯೆಗಳು ಮತ್ತು ಡೇಟಾವನ್ನು ಸಕ್ರಿಯವಾಗಿ ಪರಿಶೋಧಿಸುವಂತೆ ಸಜ್ಜುಗೊಳಿಸಬೇಕು. ಎಐ-ಚಾಲಿತ ಸಂಸ್ಥೆಯಾಗಲು ವಿಶ್ವಾಸದಿಂದ ಬೆಳೆಸಲು, ಸ್ವಾಯತ್ತತೆಯನ್ನು ಸಾಧಿಸಲು ಮತ್ತು ಮಾನವ ಸಾಮರ್ಥ್ಯವನ್ನು ಎಲ್ಲಾ ಕೆಲಸಗಳಲ್ಲಿ ಹೆಚ್ಚಿಸಲು ಎಐ ಅನ್ನು ಸಂಯೋಜಿಸುವುದು ಅತ್ಯಗತ್ಯ.

   ಉದ್ಯೋಗಿ ಕೇಂದ್ರಿತ ವಿಧಾನದಿಂದ ಎಐ-ಚಾಲಿತ ಆರ್ಥಿಕತೆ ಕಡೆಗೆ ಭಾರತ ಧಾವಿಸುತ್ತಿರುವ ಈ ವೇಳೆಯಲ್ಲಿ ಜವಾಬ್ದಾರಿಯುತ ಆವಿಷ್ಕಾರ ವಿಚಾರದಲ್ಲಿ ಮತ್ತು ತನ್ನ ಪ್ರತಿಭಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸುವ ವಿಚಾರದಲ್ಲಿ ಜಾಗತಿಕ ಮಾನದಂಡಗಳನ್ನು ಸ್ಥಾಪಿಸಲು ಭಾರತಕ್ಕೆ ಈಗ ಒಂದು ಐತಿಹಾಸಿಕ ಅವಕಾಶ ಲಭ್ಯವಿದೆ. 

   ಉದ್ಯಮದ ಎಐ ಪರಿಪಕ್ವತೆಯ ಪ್ರಸ್ತುತ ಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಸರ್ವೀಸ್‌ನೌ ಆಕ್ಸ್ ಫರ್ಡ್ ಎಕಾನಾಮಿಕ್ಸ್ ಜೊತೆಗಿನ ಸಹಭಾಗಿತ್ವದಲ್ಲಿ ಜಾಗತಿಕ ಮಟ್ಟದ 4,473 ಹಿರಿಯ ಉದ್ಯಮ ನಾಯಕರ ಸಮೀಕ್ಷೆ ಮಾಡಿದೆ. ಇದರಲ್ಲಿ ಭಾರತದ 511 ಉದ್ಯಮ ನಾಯಕರು ಸೇರಿದ್ದಾರೆ. ಪ್ರಮುಖ ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ನಡೆಯಲು ಹೇಗೆ ಎಐ ಅನ್ನು ಅಳವಡಿಸಿ ಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿಯಲು ನಾವು ಒಂದು ಸಂಪೂರ್ಣ ಸ್ವಾಮ್ಯದ ಇಂಡೆಕ್ಸ್ ಮಾಡೆಲ್ ಅನ್ನು ಅಭಿವೃದ್ಧಿಪಡಿಸಿದ್ದೇವೆ. 

   ಸರ್ವೀಸ್‌ನೌ ಸಂಸ್ಥೆಯು ಪಿಯರ್ಸನ್‌ ಜೊತೆಗಿನ ಸಹಭಾಗಿತ್ವದಲ್ಲಿ ಈ ಸಂಶೋಧನೆಯನ್ನು ಕೈಗೊಂಡಿದ್ದು, ಈ ತಂಡವು ಜನಗಣತಿ ಮಾಹಿತಿ, ಉದ್ಯೋಗ ಮಂಡಳಿಗಳು ಮತ್ತು ಇತರ ಸಾರ್ವ ಜನಿಕ ಕಾರ್ಮಿಕ ಮಾರುಕಟ್ಟೆ ಮಾಹಿತಿಯನ್ನು ವಿಶ್ಲೇಷಿಸಲು

Recent Articles

spot_img

Related Stories

Share via
Copy link