ಅಣ್ಣಮಲೈ ವಿರುದ್ಧ ಬಿಜೆಪಿ ವರಿಷ್ಠರಿಗೆ ಎಐಎಡಿಎಂಕೆ ದೂರು….!

ನವದೆಹಲಿ

     ಬಿಜೆಪಿ ಜೊತೆಗಿನ ಎಐಎಡಿಎಂಕೆ ಮೈತ್ರಿಯಲ್ಲಿ ವಿರಸ ಕಾಣಿಸಿಕೊಂಡಿದೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕಿರಿಕ್‌ನಿಂದ ಎಐಎಡಿಎಂಕೆ ನಾಯಕರು ಮನನೊಂದಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬೀಡುಬಿಟ್ಟಿರುವ ಎಐಎಡಿಎಂಕೆ ಮುಖಂಡರು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಅಳಲು ತೋಡಿಕೊಳ್ಳುತ್ತಿರುವುದು ಗೊತ್ತಾಗಿದೆ.

     ಬಿಜೆಪಿಯೊಂದಿಗೆ ತಮ್ಮ ಪಕ್ಷ ಮೈತ್ರಿ ಹೊಂದಿಲ್ಲವೆಂದು ಕಳೆದ ವಾರ ಎಐಡಿಎಂಕೆ ನಾಯಕರು ಹೇಳಿಕೆ ನೀಡಿದ್ದರು. ಇದಾದ ಕೆಲ ದಿನಗಳ ಬಳಿಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

   ಒಂದೇ ಪಕ್ಷದ 25 ಜನ ಸಂಸದರಿದ್ದೀರ, ನಾಚಿಕೆ ಆಗ್ಬೇಕು ನಿಮ್ ಜನ್ಮಕ್ಕೆ, ರೈತ ಸಂಘಟನೆಗಳ ಆಕ್ರೋಶ ಹಿರಿಯ ನಾಯಕ ಎಸ್‌ಪಿ ವೇಲುಮಣಿ ನೇತೃತ್ವದ ಎಐಎಡಿಎಂಕೆಯ ಉನ್ನತ ನಾಯಕರ ನಿಯೋಗವು ನಡ್ಡಾ ಮತ್ತು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರನ್ನು ಸೆಪ್ಟೆಂಬರ್ 22ರ ಸಂಜೆ ದೆಹಲಿಯಲ್ಲಿ ಭೇಟಿ ಮಾಡಿದೆ. ಈ ವೇಳೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ವಿರುದ್ಧ ಹಲವು ದೂರಗಳನ್ನು ನೀಡಿದೆ.

    ಪಿ ತಂಗಮಣಿ, ಸಿವಿ ಷಣ್ಮುಗಂ, ಆರ್ ವಿಶ್ವನಾಥನ್ ಅವರನ್ನೊಳಗೊಂಡ ನಿಯೋಗವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಸಮಯ ಕೋರಿದೆ ಎಂದು ತಿಳಿದುಬಂದಿದೆ. ಇಸ್ತ್ರಿ ಪೆಟ್ಟಿಗೆ, ಕುಕ್ಕರ್, ಹಣ ಕೊಟ್ಟು ಗೆದ್ದ ಸಿದ್ದರಾಮಯ್ಯ; ರಾಜೀನಾಮೆಗೆ ಎನ್‌. ರವಿಕುಮಾರ್‌ ಆಗ್ರಹ ಈ ನಿಯೋಗವು ಚೆನ್ನೈನಿಂದ ನೇರವಾಗಿ ದೆಹಲಿಗೆ ತೆರಳಿಲ್ಲ.

    ಮೊದಲು ಕೊಚ್ಚಿನ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ದೆಹಲಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ಅಣ್ಣಾಮಲೈ ವಿರುದ್ಧ ದೂರು ಅಣ್ಣಾಮಲೈ ಅವರು ತಮ್ಮ ಪಕ್ಷದ ಹಿರಿಯ ಹಾಗೂ ದಿವಂಗತ ನಾಯಕರ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ನಮಗೆ ಸರಿಬರುತ್ತಿಲ್ಲವೆಂದು ನಡ್ಡಾ ಮುಂದೆ ಎಐಎಡಿಎಂಕೆ ನಾಯಕರು ಹೇಳಿಕೊಂಡಿದ್ದಾರೆ.

    ಇದೇ ವೇಳೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಪಳನಿಸ್ವಾಮಿ ( ಇಪಿಎಸ್ ) ಅವರ ಪತ್ರವನ್ನು ನಡ್ಡಾ ಅವರಿಗೆ ತಲುಪಿಸಿದ್ದಾರೆ. ಈ ಪತ್ರದಲ್ಲಿ ಅಣ್ಣಾಮಲೈ ಅವರ ನಡವಳಿಕೆಯು ಎಐಎಡಿಎಂಕೆ-ಬಿಜೆಪಿ ಸಂಬಂಧವನ್ನು ಹದಗೆಡಿಸುತ್ತಿದೆ ಎಂದು ವಿವರಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಮೇಲೆ ಗಂಭೀರ ಆರೋಪ, ವಜಾಗೊಳಿಸಲು ಆಗ್ರಹ ತಮ್ಮ ಪಕ್ಷದ ಅತ್ಯುನ್ನತ ನಾಯಕರನ್ನು ಅಣ್ಣಾಮಲೈ ತೆಗಳುತ್ತಿದ್ದಾರೆ. ಎಐಎಡಿಎಂ ಪಕ್ಷದ ನಾಯಕರ ಬಗ್ಗೆ ಅವರಲ್ಲಿ ಕಿಂಚಿತ್ತೂ ಗೌರವವಿಲ್ಲ.

    ಇದನ್ನು ನಾವು ಸಹಿಸುವುದಿಲ್ಲ. ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿ, ಇಲ್ಲದಿದ್ದರೆ ಮೈತ್ರಿಗೆ ಧಕ್ಕೆಯಾಗುತ್ತದೆ ಎಂದು ಎಐಎಡಿಎಂ ಹೇಳಿದೆ. ಇದೇ ಸಂದರ್ಭದಲ್ಲಿ ಅಮಿತ್‌ ಶಾ ಭೇಟಿಗೆ ಎಐಡಿಎಂಕೆ ನಾಯಕರಿಗೆ ಅವಕಾಶ ನೀಡಿಲ್ಲವೆಂದು ತಿಳಿದುಬಂದಿದೆ. ನಡ್ಡಾ ನಂತರ ಪಿಯೂಷ್‌ ಗೋಯಲ್‌ ಬಳಿ ತೆರಳಲು ಬಿಜೆಪಿ ಹೈಕಮಾಂಡ್‌ ಸೂಚಿಸಿದೆ. ಗೋಯಲ್‌ ಬಳಿಯೂ ಇದೇ ಅಳಲನ್ನು ಎಐಎಡಿಎಂಕೆ ನಾಯಕರು ತೋಡಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap