AIR INDIA ವಿಮಾನ ದುರಂತ ; ಉಲ್ಟಾ ಹೊಡೆದ ನಟ ವಿಕ್ರಾಂತ್

ನವದೆಹಲಿ :

     ಏರ್ ಇಂಡಿಯಾ   ದುರಂತದಲ್ಲಿ ವಿಮಾನದ ಕೋ-ಪೈಲೆಟ್ ಆಗಿದ್ದ ಕರ್ನಾಟಕ ಮೂಲದ ಕ್ಲೈವ್ ಕುಂದರ್ ತಮ್ಮ ಸಂಬಂಧಿ ಎಂದು ‘12th ಫೇಲ್’ ಚಿತ್ರದ ನಟ ವಿಕ್ರಾಂತ್ ಮಾಸಿ ಹೇಳಿಕೊಂಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರೇ ಪೋಸ್ಟ್ ಕೂಡ ಹಾಕಿದ್ದರು. ಪೋಸ್ಟ್ ನೋಡಿದ ಪ್ರತಿಯೊಬ್ಬರಿಗೂ ಇದೇ ಅರ್ಥ ಕೊಡುವಂತೆ ಇತ್ತು. ಆದರೆ, ಈಗ ಇವರು ಉಲ್ಟಾ ಹೊಡೆದಿದ್ದಾರೆ. ಮಾಧ್ಯಮದವರೇ ತಪ್ಪಾಗಿ ಭಾವಿಸಿದ್ದಾರೆ ಎಂದು ಹೇಳುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

   ‘ನನ್ನ ಅಂಕಲ್ ಕ್ಲಿಫರ್ಡ್​ ಕುಂದರ್ ಅವರು ಮಗನನ್ನು ಕಳೆದುಕೊಂಡಿದ್ದಾರೆ’ ಎಂದು ಬರೆದುಕೊಂಡಿದ್ದರು ವಿಕ್ರಾಂತ್. ಆ ಬಳಿಕ ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘ಕ್ಲೈವ್ ಕುಂದರ್ ಅವರು ನನ್ನ ಸಹೋದರ ಸಂಬಂಧಿ ಅಲ್ಲ. ಅವರು ನಮ್ಮ ಫ್ಯಾಮಿಲಿ ಫ್ರೆಂಡ್ ಅಷ್ಟೇ. ಈ ವಿಚಾರದಲ್ಲಿ ಹೆಚ್ಚಿನ ಊಹೆ ಬೇಡ. ಅವರ ಕುಟುಂಬ ನೆಮ್ಮದಿಯಿಂದ ಇರಲಿ’ ಎಂದು ಕೋರಿದ್ದಾರೆ.
   ಏರ್​ ಇಂಡಿಯಾ ಬೋಯಿಂಗ್ 787, ಎಐ171 ವಿಮಾನ ಟೇಕಾಪ್ ಆದ ಕೆಲವೇ ನಿಮಿಷಗಳಲ್ಲಿ ಹಾಸ್ಟೆಲ್​ಗೆ ಅಪ್ಪಳಿಸಿತು. ಈ ವಿಮಾನ 230 ಪ್ರಯಾಣಿಕರು ಮತ್ತು 12 ಕ್ರ್ಯೂ ಮೆಂಬರ್​ಗಳನ್ನು ಹೊಂದಿತ್ತು. ಇದರಲ್ಲಿ 241 ಜನರು ನಿಧನ ಹೊಂದಿದ್ದಾರೆ. ಓರ್ವ ಮಾತ್ರ ಅದೃಷ್ಟ ರೀತಿಯಲ್ಲಿ ಪಾರಾಗಿದ್ದಾರೆ. ವಿಕ್ರಾಂತ್ ಅವರು ‘12th ಫೇಲ್’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ಆ ಬಳಿಕ ಅವರು ಒಂದು ಬ್ರೇಕ್ ಪಡೆದಿದ್ದಾರೆ. ಸದ್ಯ ಕುಟುಂಬದ ಕಡೆ ಅವರು ಗಮನ ಹರಿಸಿದ್ದಾರೆ.

Recent Articles

spot_img

Related Stories

Share via
Copy link