ತುಮಕೂರು:
ಕೆಲ ವರ್ಷಗಳಿಂದ ಮನೆಗಳಿಗೆ ಫ್ಯಾನ್ ಬಂತು, ಎಸಿ ಬಂತು, ಇದೀಗ ಮನೆಗಲಿಗೆ ಏರ್‌ಫ್ಯೂರಿಫೈಯರ್ ಅವಶ್ಯಕವಾಗಿದೆ…. ಇವೆಲ್ಲಾ ನಾವು ಎಷ್ಟು ಆಧುನಿಕವಾಗಿದ್ದೇವೆ ಎಂಬ ಸೂಚನೆಯಲ್ಲ, ನಾವು ಪರಿಸರವನ್ನು ಎಷ್ಟರಮಟ್ಟಿಗೆ ಹಾಳು ಮಾಡಿದ್ದೇವೆ ಎಂಬುವುದನ್ನು ಸೂಚಿಸುತ್ತದೆ.
ವಾಯು ಮಾಲಿನ್ಯದಿಂದಾಗಿ ಶುದ್ಧ ಗಾಳಿ ಸಿಗುವುದೇ ಕಷ್ಟವಾಗಿದೆ, ಹಾಗಾಗಿ ಏರ್‌ಫೈಯರ್ ಇತ್ತೀಚಿನ ವರ್ಷಗಳಲ್ಲಿ ಅವಶ್ಯಕವಾಗಿದೆ, ನಾವು ಪರಿಸರದ ಬಗ್ಗೆ ಕಾಳಜಿವಹಿಸದಿದ್ದರೆ ಮುಂದೊಂದು ದಿನ ಶುದ್ಧ ಗಾಳಿಯನ್ನು ದುಡ್ಡು ಕೊಟ್ಟುಕೊಳ್ಳುವ ಪರಿಸ್ಥಿತಿ ಬಂದರೂ ಬರಬಹುದು.
ಏರ್‌ಫ್ಯೂಯರ್ ಬಳಸುವಾಗ ಈ ಅಂಶಗಳನ್ನು ಗಮನಿಸಬೇಕು ನಿಮ್ಮ ರೂಂ ಗಾತ್ರದ ಬಗ್ಗೆ ಜಾಗ್ರತೆವಹಿಸಿ ನೀವು ಏರ್‌ಫ್ಯೂರ್‌ಫೈಯರ್ ತೆಗೆದುಕೊಳ್ಳುವಾಗ ಅಂಗಡಿಗೆ ಹೋಗಿ ಯಾವುದೋ ಒಂದು ಏರ್‌ಫ್ಯೂಯರ್ ಕೊಳ್ಳುವ ಬದಲು ನಿಮ್ಮ ರೂಮ್‌ನ ಗಾತ್ರಕ್ಕೆ ಹೊಂದು ಏರ್‌ಫ್ಯೂರಿಫೈಯರ್ ಖರೀದಿಸಿ. ಅದರ ಶಬ್ದದ ಬಗ್ಗೆ ಕೂಡ ಗಮನಹರಿಸಿ ಗಾಳಿ ಶುದ್ಧ ಮಾಡಲು ತಂದ ಏರ್ ಫ್ಯೂರಿಫೈಯರ್ ಅದರಿಂದ ಶಬ್ದ ಮಾಲಿನ್ಯ ಬಂದರೆ ಏನು ಪ್ರಯೋಜನ ಅಲ್ವಾ? ಆದ್ದರಿಂದ ಹೆಚ್ಚು ಶಬ್ದ ಮಾಡದ ಏರ್‌ಫ್ಯೂರಿಫೈಯರ್ ಖರೀದಿಸಿ.
ಏರ್‌ಫ್ಯೂರಿಫೈಯರ್ ಪ್ರಯೋಜನಗಳು ಏರ್‌ಫ್ಯೂರಿಫೈಯರ್ ಹೊಗೆ, ದೂಳಿನ ಕಣಗಳನ್ನು ಹೊರ ಹಾಕುತ್ತದೆ, ಮನೆಯೊಗಿನ ಕೆಟ್ಟ ವಾಸನೆ ಹೊರಹಾಕುವುದು, ಅಲ್ಲದೆ ಈ ಏರ್ ಫ್ಯೂರಿಯರ್ ಸೂಕ್ಷ್ಮಾಣುಗಳನ್ನು ಕೊಲ್ಲುತ್ತದೆ. ಕೆಲವೊಂದು ಏರ್‌ಫ್ಯೂರಿಫೈಯರ್ ಮಲ್ಟಿಪಲ್ ಟೆಕ್ನಾಲಾಜಿ ಹೊಂದಿರುತ್ತದೆ, ಅಂಥದ್ದು ಬಳಸಿದರೆ ಒಳ್ಳೆಯದು.
ಅದರ ನಿರ್ವಹಣೆ ಉತ್ತಮವಾಗಿ ಮಾಡಿ ನೀವು ಏರ್ ಫ್ಯೂರಿಫೈಯರ್ ಮನೆಗೆ ತಂದರೆ ಅದರ ನಿರ್ವಹಣೆ ಉತ್ತಮವಾಗಿ ಮಾಡಿ. ಅದರ ಫಿಲ್ಟರ್ ಅನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಿ. ಇಲ್ಲದಿದ್ದರೆ ಅದರಲ್ಲಿ ದೂಳು ತುಂಬಿಕೊಂಡು, ಇದರಿಂದ ರೂಮ್‌ನಲ್ಲಿ ವಾಯು ಮಾಲಿನ್ಯ ಹೆಚ್ಚಾಗುವುದು, ಆದ್ದರಿಂದ ಈ ಕುರಿತು ಜಾಗ್ರತೆವಹಿಸಿ.
ಯಾರು ಏರ್‌ಫ್ಯೂರಿಫೈರ್ ಬಳಸಿದರೆ ಒಳ್ಳೆಯದು? ದೂಳು, ವಾಯು ಮಾಲಿನ್ಯ ಅಧಿಕವಿರುವ ಕಡೆ ವಾಸವಿರುವವರು ಏರ್‌ಫ್ಯೂರಿಫೈಯರ್ ಬಳಸಿದರೆ ಶುದ್ಧ ಗಾಳಿ ಸೇವನೆ ಮಾಡಬಹುದು. ದೂಳು ಅಲರ್ಜಿ ಸಮಸ್ಯೆ ಇರುವವರು ಇದನ್ನು ಬಳಸಿದರೆ ಮನೆಯೊಳಗೆ ದೂಳು ಕಡಿಮೆಯಾಗುವುದರಿಂದ ಅಲರ್ಜಿ ಕಡಿಮೆಯಾಗುವುದು ಅಸ್ತಮಾ ಸಮಸ್ಯೆ ಇರುವವರಿಗೆ ವಾಯು ಮಾಲಿನ್ಯ ಮತ್ತಷ್ಟು ಸಮಸ್ಯೆ ತರುತ್ತದೆ, ಆದ್ದರಿಂದ ಏರ್‌ಫ್ಯೂರಿಫೈಯರ್ ಬಳಸುವುದು ಒಳ್ಳೆಯದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ