ಏರ್ ಶೋ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಬಂದ್

ಬೆಂಗಳೂರು

   ‘ಏರೋ ಇಂಡಿಯಾ 2025’ ಏರ್ ಶೋಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 10 ರಿಂದ 14 ರವರಗೆ ಯಲಹಂಕದಲ್ಲಿ ಏರ್ ಶೋ ನಡೆಯಲಿರುವ ಕಾರಣ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಿಮಾನಗಳ ಕಾರ್ಯಾಚರಣೆ ಮೇಲೆಯೂ ಪರಿಣಾಮವಾಗಲಿದೆ. ಏರ್ ಶೋ ವೇಳೆ‌‌‌ ನಿಗದಿತ ಸಮಯದಲ್ಲಿ ವಿಮಾನಗಳ‌ ಹಾರಾಟ ಬಂದ್ ಆಗಲಿದೆ. ಲ್ಯಾಂಡಿಂಗ್ ಹಾಗೂ ಟೇಕಾಫ್​ಗಳು ಇರುವುದಿಲ್ಲ. ಹೀಗಾಗಿ ಏರ್​​ಲೈನ್ಸ್ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಬರುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.

   ಪೆಬ್ರವರಿ 13 ಮತ್ತು 14 ರಂದು ಬೆಳಗ್ಗೆ 9 ರಿಂದ 12 ಗಂಟೆ ಮತ್ತು ಮದ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆವರೆಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆ ಇರುವುದಿಲ್ಲ. ಏಷ್ಯಾದ ಅತಿ ದೊಡ್ಡ ಏರ್ ಶೋ ಯಲಹಂಕದ ವಾಯನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರಗೆ ನಡೆಯಲಿದ್ದು ದೇಶ ವಿದೇಶಗಳ ಅನೇಕ ಗಣ್ಯರು, ಉದ್ಯಮಿಗಳು, ವಾಯುಪಡೆಗಳ ಸಿಬ್ಬಂದಿ ಆಗಮಿಸಲಿದ್ದಾರೆ. ಆಕರ್ಷಕ ಏರ್ ಶೋ ಕೂಡ ನಡೆಯಲಿದೆ.
   ಏರ್ ಶೋಗೆ ಆಗಮಿಸುವವರಿಗೆ ಪಾರ್ಕಿಂಗ್ ವ್ಯವಸ್ಥೆ, ಉಚಿತ ಬಸ್ ವ್ಯವಸ್ಥೆಯನ್ನು ವಾಯುಪಡೆ ಮಾಡುತ್ತಿದೆ. 15ನೇ ಆವೃತ್ತಿಯ ಏರ್ ಶೋ ಇದಾಗಿದ್ದು, ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆ ಇದೆ.

Recent Articles

spot_img

Related Stories

Share via
Copy link