KSRTC : “ಐರಾವತ” ಸರಣಿಗೆ ಹೊಸ ಸುಧಾರಿತ “ಐರಾವತ 2.0” ಇಂದು ಸೇರ್ಪಡೆ

ಬೆಂಗಳೂರು

    ಕೆಎಸ್​ಆರ್​ಟಿಸಿ ಹೊಸ ಐರಾವತ ಕ್ಲಬ್ ಕ್ಲಾಸ್ 2.0 ಆವೃತ್ತಿಯ 20 ಬಸ್​ಗಳನ್ನು ಇಂದು ಲೋಕಾರ್ಪಣೆಗೊಳಿಸುತ್ತಿದೆ. ಹೊಸ ಬಸ್‌ಗಳು ಜನಪ್ರಿಯ ಐರಾವತ್ ಕ್ಲಬ್ ಕ್ಲಾಸ್‌ನ ನವೀಕರಿಸಿದ ಆವೃತ್ತಿ (2.0) ಆಗಿದೆ. ಐರಾವತ್ ಕ್ಲಬ್ ಕ್ಲಾಸ್‌ ಅನ್ನು ಮೊದಲು 2003-04 ರಲ್ಲಿ ಕೆಎಸ್​ಆರ್​ಟಿಸಿ ರಸ್ತೆಗಿಳಿಸಿತ್ತು.

   ಬಸ್‌ಗಳು ವೋಲ್ವೋದ ‘9600 ಸರಣಿ’ಯ ಭಾಗವಾಗಿದ್ದು, ಕೆಎಸ್​ಆರ್​ಟಿಸಿಯ ಪ್ರಮುಖ ಅಂಬಾರಿ ಉತ್ಸವದ ಅದೇ ಸರಣಿಯಾಗಿದೆ. ಪ್ರತಿ ಬಸ್‌ಗೆ 1.78 ಕೋಟಿ ರೂ. ವ್ಯಯಿಸಲಾಗಿದೆ.

   ಹೊಸ ಬಸ್‌ಗಳು ಅಸ್ತಿತ್ವದಲ್ಲಿರುವ ಐರಾವತ್ ಕ್ಲಬ್ ಕ್ಲಾಸ್ ಲೋಗೋವನ್ನೇ ಹೊಂದಿರಲಿದ್ದು, ಅದೇ ಬ್ರ್ಯಾಂಡಿಂಗ್​ನಡಿ ಇರಲಿದೆ. ಆದರೆ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (ಎಫ್‌ಎಪಿಎಸ್) ಸೇರಿದಂತೆ ಕೆಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿವೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

Recent Articles

spot_img

Related Stories

Share via
Copy link