ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಮಾ. 6ರ ತನಕ ಮಳೆ

ಚೆನ್ನೈ:

ಚೆನ್ನೈ, ಮಾರ್ಚ್ 04; ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದಾಗಿ ದೇಶದ ವಿವಿಧ ಕಡೆ ಮಾರ್ಚ್ 6ರ ತನಕಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚೆನ್ನೈನ ಭಾರತೀಯ ಹವಾಮಾನ ಇಲಾಖೆ ಡಿಡಿಜಿಎಂ ಡಾ. ಎಸ್. ಬಾಲಚಂದ್ರನ್ ಈ ಕುರಿತು ಮಾಹಿತಿ ನೀಡಿದ್ದಾರೆ. “ದಕ್ಷಿಣ ಬಂಗಾಳಕೊಲ್ಲಿಯ ಮಧ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪುದುಚೇರಿಯ ಪೂರ್ವ-ಆಗ್ನೇಯಕ್ಕೆ ಸುಮಾರು 820 ಕಿ. ಮೀ. ದೂರದಲ್ಲಿದೆ” ಎಂದು ಹೇಳಿದ್ದಾರೆ.

“ಇದು ಇನ್ನಷ್ಟು ತೀವ್ರಗೊಂಡು ವಾಯುವ್ಯವಾಗಿ ತಮಿಳುನಾಡು ಮತ್ತು ಶ್ರೀಲಂಕಾ ಕರಾವಳಿಯ ಕಡೆಗೆ ಚಲಿಸುತ್ತದೆ. ಇದರ ಪರಿಣಾಮದಿಂದ ಮಾರ್ಚ 3, 4, 5, 6ರಂದು ತಮಿಳುನಾಡು ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ” ಎಂದು ಡಾ. ಎಸ್. ಬಾಲಚಂದ್ರನ್ ತಿಳಿಸಿದ್ದಾರೆ.

ತಮಿಳುನಾಡು ಮಾತ್ರವಲ್ಲ ಪುದಚೇರಿ, ಕಾರೈಕಲ್‌ನಲ್ಲಿಯೂ ಮಳೆಯಾಗಲಿದೆ. ಪುಡುಕೊಟ್ಟಿ, ಕುಡಲೂರು, ಚೆಂಗಲ್ಪಟ್ಟು ಪ್ರದೇಶಗಳಲ್ಲಿಯೂ ಸಾಧಾರಣೆ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಬಳಿಕ ವಾಯುಭಾರ ಕುಸಿತ ಶ್ರೀಲಂಕಾ ಕಡೆ ಸಾಗಲಿದೆ.

ಹವಾಮಾನ ಇಲಾಖೆ ಚಂಡಮಾರುತದ ಮಾದರಿಯಲ್ಲೇ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಮತ್ತು ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶದ ಕರಾವಳಿಯಲ್ಲಿ ಗಂಟೆಗೆ 45 ರಿಂದ 55 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಿದೆ.

ಮುಂದಿನ 24 ಗಂಟೆಯಲ್ಲಿ ವಾಯುಭಾರ ಕುಸಿತವು ಇನ್ನಷ್ಟು ಬಲವಾಗಿ ಪರಿವರ್ತನೆಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಚಂಡಮಾರುತ ಉಂಟಾದರೆ ಗಂಟೆಗೆ 65 ಕಿ. ಮೀ. ವೇಗದಲ್ಲಿ ಗಾಳಿ ಬೀಸುತ್ತದೆ. ಈ ವಾಯುಭಾರ ಕುಸಿತದ ಪರಿಣಾಮ ಗಂಟೆಗೆ 45 ರಿಂದ 55 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಅಂದಾಜಿಸಲಾಗಿದೆ.

ಶನಿವಾರ ಮತ್ತು ಭಾನುವಾರ ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿಯಲ್ಲಿ ವಾಯುಭಾರ ಕುಸಿತದ ಪರಿಣಾಮವನ್ನು ಕಾಣಬಹುದಾಗಿದೆ. ಮಾರ್ಚ್ 5ರ ತನಕ ದಕ್ಷಿಣ ಬಂಗಾಳ ಕೊಲ್ಲಿ ಮತ್ತು ಪಕ್ಕದ ಸಮಭಾಜಕ ಹಿಂದೂ ಮಹಾಸಾಗರ, ಮನ್ನಾರ್ ಗಲ್ಫ್ ಮತ್ತು ಕೊಮೊರಿನ್ ಪ್ರದೇಶಗಳಿಗೆ ತೆರಳದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.

ಶುಕ್ರವಾರದಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಶನಿವಾರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಬಂಗಾಳಕೊಲ್ಲಿ ಮತ್ತು ಸಮಭಾಜಕ ಹಿಂದೂ ಮಹಾಸಾಗರ, ಮನ್ನಾರ್ ಕೊಲ್ಲಿ ಮತ್ತು ಕೊಮೊರಿನ್ ಪ್ರದೇಶದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರುವ ಚಿತ್ರಣಗಳು ಲಭ್ಯವಾಗಿವೆ. ನೈಋತ್ಯ ಮತ್ತು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಮಾರ್ಚ್ 3 ರಿಂದ 5ರ ತನಕ ಸಮುದ್ರ ಪ್ರಕ್ಷುಬ್ಧವಾಗಲಿದೆ ಎಂದು ಅಂದಾಜಿಸಲಾಗಿದೆ.

2022ರಲ್ಲಿ ಮೊದಲ ಬಾರಿಗೆ ವಾಯುಭಾರ ಕುಸಿತ ಉಂಟಾಗಿದೆ. ಅದರಲ್ಲೂ ಬಂಗಾಳ ಕೊಲ್ಲಿಯಲ್ಲಿ ಮಾರ್ಚ್‌ ತಿಂಗಳಿನಲ್ಲಿ ವಾಯುಭಾರ ಕುಸಿತ ಉಂಟಾಗದೇ ಹಲವು ವರ್ಷಗಳು ಕಳೆದಿತ್ತು.

ಬೇಸಿಗೆ ಮಳೆಯ ದಾಖಲೆ ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪ್ರಭಾವದಿಂದ ಮಾರ್ಚ್ ಆರಂಭದಲ್ಲಿಯೇ ಚೆನ್ನೈ ನಗರದಲ್ಲಿ ಅಪರೂಪದ ಬೇಸಿಗೆ ಮಳೆ ದಾಖಲೆ ನಿರ್ಮಿಸಬಹುದು ಎಂದು ಅಂದಾಜಿಸಲಾಗಿದೆ. ಶುಕ್ರವಾರ ಮತ್ತು ಶನಿವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಾರ್ಚ್ ತಿಂಗಳು ಚೆನ್ನೈನಲ್ಲಿ ಸಾಮಾನ್ಯವಾಗಿ ಶುಷ್ಕ ಅವಧಿಯಾಗಿದ್ದು, ಸರಾಸರಿ ಮಾಸಿಕ ಮಳೆಯು 3.5 ಮಿ. ಮೀ. ಆಗಿರುತ್ತದೆ. ಆದರೆ ಈ ವರ್ಷದ ಮಾರ್ಚ್‌ನಲ್ಲಿ ವಾಯುಭಾರ ಕುಸಿತದ ಪರಿಣಾಮ ಸುರಿಯುವ ಮಳೆ ದಾಖಲೆ ನಿರ್ಮಿಸಲಿದೆ. ಆದಾಗ್ಯೂ, ಹವಾಮಾನಶಾಸ್ತ್ರಜ್ಞರು ಕಡಿಮೆ ಒತ್ತಡದ ಪ್ರದೇಶವನ್ನು ನಿರೀಕ್ಷಿಸುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap