ಅಲಸ್ಕಾ : ಅಜ್ಞಾತ ವಸ್ತು ಹೊಡೆದುರುಳಿಸಿದ ವಾಯುಪಡೆ

ನವದೆಹಲಿ: 

    ಇತ್ತೀಚಿನ ದಿನಗಳಲ್ಲಿ ಡ್ರೋಣ್‌ , ರೆಮೋಟ್‌ ಕಂಟ್ರೋಲ್ಡ್‌ ವಿಮಾನಗಳ ಆವಿಷ್ಕಾರಗಳಿಂದ ದೇಶಗಳು ಶತ್ರುಗಳ ಮೇಲೆ ಮಾನವ ರಹಿತ ಬೇಹುಗಾರಿಕೆ ನಡೆಸಲು ಸೂಕ್ತ ವಾತಾವರಣ ಸೃಷ್ಠಿಯಾಗಿದೆ .ಇದೆ ಹಿನ್ನೆಲೆಯಲ್ಲಿ ಅಮೇರಿಕಾದ ಫೈಟರ್ ಜೆಟ್ ವಿಮಾನ ಪಹರೆ ಕಾಯುವಾಗ ಅಲಾಸ್ಕಾ ಕರಾವಳಿ ಪ್ರದೇಶದಲ್ಲಿ ಹಾರಾಡುತ್ತಿದ್ದ ಅಜ್ಞಾತ ವಸ್ತುವೊಂದನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ. 

   ಶ್ವೇತ ಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬೇ ಈ ಬಗ್ಗೆ ಮಾತನಾಡಿದ್ದು, ಸುಮಾರು 40,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ಈ ವಸ್ತುವು  ಪ್ರಯಾಣಿಕ ವಿಮಾನಗಳಿಗೆ ಅಪಾಯವೊಡ್ಡುವ ಎಲ್ಲಾ ಸಾಧ್ಯತೆ ಇದ್ದ ಕಾರಣ  ಹೊಡೆದುರುಳಿಸಲಾಗಿದೆ. 

    ವಾಣಿಜ್ಯ ವಿಮಾನಗಳು ಹಾಗೂ ಖಾಸಗಿ ಜೆಟ್ ಗಳು 45,000 ಅಡಿ  ಗಳಷ್ಟು ಮೇಲೆ ಹಾರಡುತ್ತವೆ. ಆ ಅಜ್ಞಾತ ವಸ್ತು ಒಂದು ಸಣ್ಣ ಕಾರಿನ ಗಾತ್ರದಲ್ಲಿತ್ತು, ಆದರೆ ಚೀನಾದ ಶಂಕಿತ ಸ್ಪೈ ಬಲೂನ್ ಗಿಂತಲೂ ಕಡಿಮೆ ಗಾತ್ರದಲ್ಲಿತ್ತು ಇದನ್ನು ವಾಯಡೆಯ ಫೈಟರ್ ಜೆಟ್ ಗಳು ದಕ್ಷಿಣ ಕೆರೊಲಿನಾದಲ್ಲಿನ ಕರಾವಳಿ ಪ್ರದೇಶದ ಬಳಿ ಹೊಡೆದುರುಳಿಸಿದೆ ಎಂದು ಕಿರ್ಬೇ ತಿಳಿಸಿದ್ದಾರೆ.
 
     ಈ ಘಟನೆ ಚೀನಾದ ಬೇಹುಗಾರಿಕೆ ಬಗ್ಗೆ ಆತಂಕಗಳನ್ನು ಹೆಚ್ಚಿಸಿದ್ದು ಮಾತ್ರ ನಿಜ,ಡ್ರಾಗನ್‌ ಎಂದೇ ಪ್ರಸಿದ್ದವಾಗಿರುವ ಚೀನಾ  ವಿರುದ್ಧ ಕಠಿಣ ನಿಲುವು ತಳೆಯುವಂತೆ ಸಾರ್ವಜನಿಕರಿಂದ ಬೈಡನ್ ಆಡಳಿತದ ಮೇಲೆ ಒತ್ತಡ ಹೆಚ್ಚಿದೆ. ಇಂಥಹದ್ದೇ ಎರಡು ಪ್ರತ್ಯೇಕ ಪ್ರಕರಣಗಳಲ್ಲಿನ ವ್ಯತ್ಯಾಸಗಳನ್ನು ಶ್ವೇತಭವನ ಗುರುತಿಸಿದೆ. ಇತ್ತೀಚಿನ ಘಟನೆಯಲ್ಲಿ ಆ ವಸ್ತುವಿನ ಪೂರ್ವಾಪರ ಈಗಚ್ಟೇ ತಿಳಿಯಬೇಕಿದೆ ಎನ್ನಲಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap