ಸಿನಿಮಾಗಾಗಿ ತನ್ನ ಬಳಿ ಇದ್ದ ಕಾರನ್ನೇ ಮಾರಿದ ನಟ ಅಜಯ್‌ ರಾವ್…!

ಬೆಂಗಳೂರು :

   ನಟ ಅಜಯ್ ರಾವ್ ತಮ್ಮ ಬಳಿ ಇದ್ದ BMW ಕಾರನ್ನು ಮಾರಾಟ ಮಾಡಿದ್ದಾರೆ. ಸ್ಯಾಂಡಲ್‌ ವುಡ್‌ ಕೃಷ್ಣ ಅಜಯ್‌ ರಾವ್‌ ಹೆಣ್ಣಿನ ಶೋಷಣೆ ವಿರುದ್ಧ ಸಮರ ಸಾರಿದ್ದಾರೆ. ಅದಕ್ಕಾಗಿಯೇ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ಶೋಷಣೆಯನ್ನು ಯುದ್ಧಕಾಂಡ ಎಂಬ ಚಿತ್ರದ ಮೂಲಕ ಹೇಳೋದಿಕ್ಕೆ ಹೊರಟಿದ್ದಾರೆ. ಈಗಾಗಲೇ ಈ ಚಿತ್ರದ ಟೀಸರ್‌, ಟ್ರೇಲರ್‌ ಹಾಗೂ ಹಾಡುಗಳು ಭಾರೀ ಸದ್ದು ಮಾಡಿವೆ.ಯುದ್ಧಕಾಂಡಕ್ಕಾಗಿ ಅಜಯ್‌ ರಾವ್ ತನ ಮನ ಹಾಗೇಯೇ ಧನ ಅರ್ಪಿಸಿ ಕೆಲಸ ಮಾಡಿದ್ದಾರೆ. 

   ಯುದ್ಧಕಾಂಡ ಸಿನಿಮಾದಲ್ಲಿ ಅಜಯ್‌ ರಾವ್‌ ನಟಿಸಿ, ನಿರ್ಮಿಸಿದ್ದಾರೆ. ನಿರ್ಮಾಪಕರಾಗಿ ಈ ಚಿತ್ರ ಮಾಡಲು ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಸಾಕಷ್ಟು ಮಾಧ್ಯಮಗಳಲ್ಲಿ ತಿಳಿಸಿದ್ದಾರೆ. ಯುದ್ಧಕಾಂಡ ಚಿತ್ರಕ್ಕಾಗಿ ತಮ್ಮ ಮಗಳ ಅಚ್ಚುಮೆಚ್ಚಿನ ಕೋಟಿ ಬೆಲೆಯ BMW ಕಾರು ಮಾರಾಟ ಮಾಡಿದ್ದಾರೆ. ಕಾರು ಮಾರಾಟದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಜಯ್‌ ರಾವ್‌ ಮಗಳು ಚೆರ್ರಿ ಕಾರು ಮಾರಾಟದ ವಿಷ ತಿಳಿದು ಬಿಕ್ಕಿ ಬಿಕ್ಕಿ ಹತ್ತಿದ್ದಾಳೆ. ನನ್ನ ಅಚ್ಚುಮೆಚ್ಚಿನ ಕಾರು ತೆಗೆದುಕೊಂಡು ಹೋಗುತ್ತಿರುವುದಕ್ಕೆ ಕಣ್ಣೀರು ಹಾಕಿದ್ದಾಳೆʻಯುದ್ಧಕಾಂಡʼ ಸಿನಿಮಾ ಇದೇ ಏಪ್ರಿಲ್‌ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

   ಚಿತ್ರಕ್ಕೆ ಶ್ರೀ ಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ಅಜಯ್ ರಾವ್ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ಸ್ವತಃ ಅಜಯ್ ರಾವ್ ನಿರ್ಮಾಪಕರಾಗಿ ಹಣ ಹೂಡಿದ್ದಾರೆ. ತಮ್ಮದೇ ತಂಡ ಕಟ್ಟಿಕೊಂಡು ಕಥೆ, ಚಿತ್ರಕಥೆ ಬರೆಸಿದ್ದಾರೆ. ಪವನ್‌ ಭಟ್‌ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಹೇಮಂತ್ ಜೋಯಿಸ್ ಸಂಗೀತ ಚಿತ್ರಕ್ಕಿದೆ.

Recent Articles

spot_img

Related Stories

Share via
Copy link