ಬಲ ಪ್ರದರ್ಶನಕ್ಕೆ ಮುಂದಾದ ಅಜಿತ್‌ ಪವಾರ್‌

ಮುಂಬೈ:

    ಪಕ್ಷದ ಬಹುಪಾಲು ಶಾಸಕರ ಬೆಂಬಲ ತಮಗೆ ಇದೆ ಎಂದು ಅಜಿತ್ ಪವಾರ್ ಪಾಳಯ ಚುನಾವಣಾ ಆಯೋಗದ ಮೊರೆ ಹೋಗಿತ್ತು.

    ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು 40 ಶಾಸಕರು, ಎಂಎಲ್ಸಿಗಳು ಹಾಗೂ ಸಂಸದರ ಬೆಂಬಲದೊಂದಿಗೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಹಕ್ಕು ಮಂಡಿಸಿದ್ದಾರೆ.

    ಅಜಿತ್ ಪವಾರ್ ಬಣದ ಭಾಗದ ಎಲ್ಲಾ ಶಾಸಕರನ್ನು ಮುಂಬೈ ಹೋಟೆಲ್ ನಲ್ಲಿ ಇರಿಸಲಾಗಿದೆ, ಅವರ ಸಹಿ ಮಾಡಿದ ಅಫಿಡವಿಟ್ ಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ.

   ಆಡಳಿತಾರೂಢ ಮೈತ್ರಿಕೂಟಕ್ಕೆ ಸೇರುವ ಮೊದಲು ಜೂನ್ 30 ರಂದು ಪಕ್ಷದ ಅಧ್ಯಕ್ಷರಾಗಿ ಅಜಿತ್ ಪವಾರ್ ಅವರನ್ನು ಹೆಸರಿಸಿದ್ದೇವೆ ಎಂದು ಬಂಡಾಯ ಶಾಸಕರು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap