ಡಿ.ಕೆ.ಶಿವಕುಮಾರ್ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಅಜ್ಜಯ್ಯ ಸ್ವಾಮೀಜಿ….!

ಯಾದಗಿರಿ:

    ರೈತರು, ವರ್ತಕರು ಹಾಗೂ ಸಮಸ್ತ ಸದ್ ಭಕ್ತರ ಸಂಕಲ್ಪದಂತೆ, ಆಸೆಯಂತೆ ಡಿ. ಕೆ. ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ನೊಣವಿನಕೆರೆ ಅಜ್ಜಯ್ಯ ಸ್ವಾಮೀಜಿ ಹೇಳಿದ್ದಾರೆ.ತಾಲೂಕಿನ ಅಬ್ಬೆತುಮಕೂರಿನ ವಿಶ್ವರಾಧ್ಯರ ಮಠದಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಆದರೆ ಎಷ್ಟು ದಿನದಲ್ಲಿ ಎಂದು ಹೇಳಲು ಸಾಧ್ಯವಿಲ್ಲ. ನಾನೂ ಹಾಗೂ ಡಿಕೆ ಶಿವಕುಮಾರ್ ಹೋಗಿ ಪವಿತ್ರ ಗಂಗಾ ಸ್ನಾನವನ್ನು ಮಾಡಿದ್ದೇವೆ.

   ಅಲ್ಲಿ ಸಂಕಲ್ಪವನ್ನೂ ಮಾಡಿದ್ದೇವೆ, ಶ್ರೀ ಮಠದ ಆಶೀರ್ವಾದದಿಂದ, ಯೋಗ್ಯ ವ್ಯಕ್ತಿ ಡಿಕೆ ಶಿವಕುಮಾರ್ ಅವರು ಸಿಎಂ ಆಗ್ತಾರೆ. ಈಗಲೇ ರಾಜಕಾರಣದಲ್ಲಿ ಪ್ರತಿನಿತ್ಯ ಚರ್ಚೆ ನಡೆಯುತ್ತಿದೆ. ಎಲ್ಲಾ ಭಗವಂತರ ಆಶೀರ್ವಾದ ಸಿಗಲಿ, ಎಲ್ಲರೂ ಹೇಳುವಂತೆ, ಎಲ್ಲರ ಸಂಕಲ್ಪದಂತೆ ಬಡವರ, ರೈತರ ಪ್ರೀತಿ ವಿಶ್ವಾಸಗಳಿಸಿ ಉತ್ತಮ ವ್ಯಕ್ತಿಯಾಗಿ ಬಾಳಲಿ, ಧರ್ಮದೃಷ್ಟಿಯಿಂದ ಮಠಕ್ಕೆ ಬರುವ ಭಕ್ತರು ಅವರು. ರಾಜ ಪ್ರತ್ಯಕ್ಷ ದೇವರು ಎಂದು ನಂಬುವ ನಾವು, ಡಿಕೆಶಿಯವರಲ್ಲಿ ರಾಜಕೀಯ ಮುತ್ಸದ್ದಿತನವನ್ನು ನೋಡುತ್ತಿದ್ದೇವೆ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಆಗಿದ್ದಾರೆ.

   ಸೌಹಾರ್ದತೆಯ ರಾಜಪುತ್ರ ಅವರಾಗಿದ್ದು, ಸಮಾಜದ ಕಣ್ಮನಿಯಾಗಿ ಬೆಳೆಯಲಿದ್ದಾರೆ. 140 ವರ್ಷಕ್ಕೊಮ್ಮೆ ಆಗುವ ಕುಂಭಮೇಳದಲ್ಲಿ ಗಂಗಾಸ್ನಾನ ಮಾಡಿದ್ದಾರೆ, ಎಲ್ಲವೂ ಒಳ್ಳೆಯದಾಗುತ್ತದೆ, ಎಲ್ಲರ ಆಸೆ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕೆಂಬುದಿದೆ. ಎಲ್ಲಾ ಜನರ ಸಂಕಲ್ಪ ಹಾಗೂ ಶ್ರೀಮಠದ ಆಶೀರ್ವಾದದಿಂದ ಒಂದು ದಿನ ಸಿಎಂ ಆಗ್ತಾರೆ. ಯಾವ ದಿನ ಸಿಎಂ ಆಗ್ತಾರೆ ಅಂತ ಹೇಳೊಕೆ ಆಗಲ್ಲ. ನಾನು ಕೂಡಾ ಅಬ್ಬೆತೂಮಕೂರ ವಿಶ್ವಾರಾಧ್ಯರ ಗದ್ದುಗೆಗೂ ಬಂದಿನಿ, ಅವರ ಆಶೀರ್ವಾದವೂ ಡಿಕೆಶಿಗೆ ಸಿಗಲಿ. ಶ್ರೀ ಶೈಲ ಜಗದ್ಗುರುಗಳು ಬಂದಿದ್ದಾರೆ, ಆ ಪರಮಾತ್ಮನ ಆಶೀರ್ವಾದವೂ ಡಿಕೆಶಿಗೆ ಸಿಗಲಿ, ಡಿ.ಕೆ.ಶಿವಕುಮಾರ್‌ಗೆ ಸಿಎಂ ಆಗುವ ಯೋಗವಿದೆ – ಜನರ ಸಂಕಲ್ಪದಂತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ನೊಣವಿನಕೆರೆ ಅಜ್ಜಯ್ಯ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.