ಲಕ್ನೋ:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ಕಾಂಗ್ರೆಸ್ ಜೊತೆ ಸೇರುವುದಕ್ಕಿಂತ ತೃತೀಯ ರಂಗ ಸೇರಲು ಸಮಾಜವಾದಿ ಪಕ್ಷ ಒಲವು ತೋರಿದೆ ಎನ್ನಲಾಗಿದೆ.
ಇನ್ನೂ ಪ.ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನೇತೃತ್ವದ ಯಾವುದೇ ಮೈತ್ರಿಕೂಟದ ಭಾಗವಾಗಲು ಸಮಾಜವಾದಿ ಪಕ್ಷ ಹಿಂಜರಿಯುತ್ತಿದೆ.
2024 ರಲ್ಲಿ ಗಾಂಧಿ ಕುಟುಂಬದ ಭದ್ರಕೋಟೆಗಳಾದ ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ತಮ್ಮ ಅಭ್ಯರ್ಥಿಗಳ ಬಗ್ಗೆ ತಮ್ಮ ಉದ್ದೇಶ ಸ್ಪಷ್ಟಪಡಿಸಿದ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಇತ್ತೀಚಿನ ಹೇಳಿಕೆಗಳಿಂದ ಇದನ್ನು ಊಹಿಸಬಹುದು.
ಇತ್ತೀಚಿನವರೆಗೂ, ಎಸ್‌ಪಿ ಮತ್ತು ಕಾಂಗ್ರೆಸ್ ಪರಸ್ಪರ ಅಘೋಷಿತ ಮೈತ್ಕಿ ಹೊಂದಿದ್ದವು. ಎಸ್‌ಪಿ ರಾಯ್‌ಬರೇಲಿ ಮತ್ತು ಅಮೇಥಿಯಲ್ಲಿ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೂ, ಮುಲಾಯಂ ಸಿಂಗ್ ಯಾದವ್ ಅವರ ಕ್ಷೇತ್ರ ಮೈನ್‌ಪುರಿ ಮತ್ತು ಅಖಿಲೇಶ್ ಸ್ಪರ್ಧಿಸುವ ಯಾವುದೇ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಉತ್ತರ ನೀಡಿತು.
ಕಳೆದ ವಾರ, ಎಸ್‌ಪಿ ಮುಖ್ಯಸ್ಥರು ಅಮೇಥಿಗೆ ಭೇಟಿ ನೀಡಿದಾಗ, ಕ್ಷೇತ್ರವನ್ನು “ಹಾಳು” ಮಾಡಿದ ವಿಐಪಿಗಳಿಗೆ ಮತ ನೀಡಬೇಡಿ ಎಂದು ಜನರಿಗೆ ಮನವಿ ಮಾಡಿದ್ದರು. ಇಷ್ಟು ವರ್ಷಗಳ ಕಾಲ ರಾಜಕೀಯ ದೊರೆಗಳನ್ನು ಆಯ್ಕೆ ಮಾಡಿದರೂ ಅಮೇಥಿಗೆ ಬೇಕಾದ ಅರ್ಹತೆ ಸಿಕ್ಕಿಲ್ಲ. ಈ ಬಾರಿ ಅಮೇಥಿಯ ಜನರು ದೊಡ್ಡ ಹೃದಯದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ, ನಾವು ಇಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ಅಖಿಲೇಶ್ ಹೇಳಿದ್ದರು.
ಇತ್ತೀಚಿನ ದಿನಗಳಲ್ಲಿ, ಬಿಜೆಪಿಯ ವಿರುದ್ಧ ತೃತೀಯ ರಂಗವನ್ನು ರಚಿಸುವ ಪ್ರಯತ್ನಗಳನ್ನು ಬಲಪಡಿಸಲು ವಿರೋಧ ಪಕ್ಷಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅಖಿಲೇಶ್ ಬಿಜೆಪಿಯೇತರ, ಕಾಂಗ್ರೆಸ್- ಇಲ್ಲದ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ