ಅಕ್ರಮ ಜಾನುವಾರು ಸಾಗಾಟ:ಶಿರಸಿ ನಗರ ಠಾಣೆ ಪೋಲೀಸರ ಕಾರ್ಯಾಚರಣೆ ಇರ್ವರ ಬಂಧನ ಮತ್ತೊಬ್ಬ ಪರಾರಿ

ಶಿರಸಿ:

   ಯಾವುದೇ ದಾಖಲೆಗಳನ್ನು ಹೊಂದಿಲ್ಲದೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ ನಗರ ಪೊಲೀಸರು ಬಂಧಿಸಿದ ಘಟನೆ ಇಂದು ವರದಿಯಾಗಿದೆ.

   ಆರೋಪಿತರಾದ ಬಸವರಾಜ ತಂದೆ ಫಕೀರಪ್ಪ ಗೊಲ್ಲರ (38)ಸಾ: ಹನುಮನ ಕೊಪ್ಪ, ತಾ: ಹಾನಗಲ್, ಜಿ: ಹಾವೇರಿ, ಸುಜಾತಾ ಬಸವರಾಜ್ ಗೊಲ್ಲರ,(31) ಹನುಮನ ಕೊಪ್ಪ, ಹಾನಗಲ್, ಜಿ: ಹಾವೇರಿ ಹಾಗೂ ಪಾಂಡುರಂಗ ನಾರಾಯಣ ನಾಯ್ಕ (54)ಸಾ: ಕಾನಗೋಡ್, ತಾ: ಶಿರಸಿ ಈ ಮೂರು ಜನರು ಸೇರಿಕೊಂಡು ಕೆಎ-31 6424 ಮಹಿಂದ್ರಾ ಬುಲೆರೊ ಪಿಕಪ್ ವಾಹನದಲ್ಲಿ 2 ಆಕಳು, 2 ಹೋರಿ ಕರು, 1 ಆಕಳು ಕರು ಒಟ್ಟೂ 05 ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಹಾನಗಲ್ ಕಡೆಗೆ ತೆರಳುತ್ತಿರುವಾಗ ಶಿರಸಿಯ ನಿಲೇಕಣಿ ಹತ್ತಿರ ಶಿರಸಿ ನಗರ ಠಾಣೆ ಪಿಎಸ್ಐ ನಾಗಪ್ಪ,ಬಿ ನೇತೃತ್ವದಲ್ಲಿಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿತರರಾದ ಪಾಂಡುರಂಗ ನಾಯ್ಕ್, ಸುಜಾತಾ ಗೊಲ್ಲರ ರವರುಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಅಂದಾಜು 3ಲಕ್ಷ ರೂ ಮೌಲ್ಯದ ಬುಲೆರೊ ಮಹಿಂದ್ರಾ ವಾಹನ ಜಪ್ತಿಪಡಿಸಿಕೊಂಡಿರುತ್ತಾರೆ,ಹಾಗೂ ಒಟ್ಟು ಅಂದಾಜು 19,500/- ರೂ ಮೌಲ್ಯ ಹೊಂದಿದ್ದ 05 ಜಾನುವಾರುಗಳನ್ನು ರಕ್ಷಿಸಿದ್ದಾರೆ, ಈ ವೇಳೆ ಬಸವರಾಜ್ ಗೊಲ್ಲರ ತಪ್ಪಿಸಿ ಕೊಂಡಿದ್ದಾನೆ ಎಂದು ತಿಳಿಸಲಾಗಿದೆ.

Recent Articles

spot_img

Related Stories

Share via
Copy link