ಅಕ್ಷಯ್‌ ಕುಮಾರ್‌ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ನೂಕು ನುಗ್ಗಲು…..!

ಪುಣೆ:

     ಬಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಹೌಸ್‌ ಫುಲ್‌-5 ಸಿನಿಮಾ  ಇದೇ ತಿಂಗಳ ಜೂನ್ 6ರಂದು ತೆರೆ ಕಾಣಲಿದೆ. ಹಾಗಾಗಿ ಸಿನಿಮಾ ಪ್ರಚಾರಕ್ಕಾಗಿ ನಟ ಅಕ್ಷಯ್ ಕುಮಾರ್ , ಜಾಕ್ವೆಲಿನ್ ಫರ್ನಾಂಡಿಸ್, ನಾನಾ ಪಾಟೇಕರ್, ಸೋನಂ ಬಾಜ್ವಾ, ನರ್ಗಿಸ್ ಫಖ್ರಿ, ಫರ್ದೀನ್ ಖಾನ್, ಸೌಂದರ್ಯಾ ಶರ್ಮಾ ಸೇರಿದಂತೆ ಚಿತ್ರತಂಡ ಭಾನುವಾರ ಪುಣೆಗೆ ಬಂದಿತ್ತು. ಆದರೆ ನೆಚ್ಚಿನ ಸಿನಿಮಾ ತಾರೆಯರನ್ನು ನೋಡಲೆಂದು ದೊಡ್ಡ ಅಭಿಮಾನಿಗಳ ಬಳಗವೇ ನೆರೆದಿತ್ತು. ನಟ-ನಟಿಯರು ವೇದಿಕೆಗೆ ಎಂಟ್ರಿಯಾಗುತ್ತಿದ್ದಂತೆ ಭಾರೀ ನೂಕು ನುಗ್ಗಲು ಸಂಭವಿಸಿದ್ದು , ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಏಕಾಏಕಿ ಸ್ಥಳದಲ್ಲಿ ನೂಕು ನುಗ್ಗಲು ಸಂಭವಿಸಿದ ಕಾರಣ ಮಹಿಳೆಯರು ಮಕ್ಕಳು ಸೇರಿದಂತೆ ಅನೇಕರು ಜನರು ಬಹಳ ತೊಂದರೆ ಅನುಭವಿಸುವಂತಾಯಿತು.

    ಈ ಸಂದರ್ಭದಲ್ಲಿ ವೇದಿಕೆಗೆ ಬಂದ ಅಕ್ಷಯ್ ಕುಮಾರ್ ಜನರನ್ನು ಶಾಂತಗೊಳಿಸಲು ಕೈ ಮುಗಿದು, ದಯವಿಟ್ಟು ಸಂಯಮ ಕಾಪಾಡಿಕೊಳ್ಳಿ. ಇಲ್ಲಿ ಮಹಿಳೆಯರು, ಮಕ್ಕಳು ಇದ್ದಾರೆ ಎಂದು ಮನವಿ ಮಾಡಿದರು. ಕೆಲಹೊತ್ತಿನ ನಂತರ ಪರಿಸ್ಥಿತಿಯನ್ನು ತಿಳಿಗೊಂಡು ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗತ್ತಿದೆ. ಇದರಲ್ಲಿ ಮಹಿಳೆಯರು ಜನಸಂದಣಿಯಲ್ಲಿ ಸಿಲುಕಿ ಪರದಾಡುತ್ತಿರುವ ಗೋಳಾಡುತ್ತಿರುವುದನ್ನು ಕಾಣಬಹುದಾಗಿದೆ. ಮತ್ತೊಂದೆಡೆ ವೇದಿಕೆಗೆ ಸಮೀಪ ಇದ್ದ ಪುಟ್ಟ ಹುಡುಗಿಯೊಬ್ಬಳು ತನ್ನ ತಂದೆ-ತಾಯಿಯಿಂದ ಮಿಸ್‌ ಆಗಿ ಅಳಲು ಶುರು ಮಾಡಿತ್ತಿದ್ದಾಳೆ. ಆಗ ನಟಿ ಜಾಕ್ವೆಲಿನ್ ಹುಡುಗಿಯನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ.

    ಪರಿಸ್ಥಿತಿ ಶಾಂತಗೊಂಡು ಕಾರ್ಯಕ್ರಮ ಆರಂಭಗೊಂಡ ಬಳಿಕ ಕಲಾವಿದರು ಹಾಗೂ ಅಭಿಮಾನಿಗಳು ಸೊಗಸಾಗಿ ನೃತ್ಯ ಮಾಡಿದ್ದಾರೆ. ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜೂನ್ 6, 2025 ರಂದು ಬಿಡುಗಡೆಯಾಗಲಿರುವ ಹೌಸ್‌ಫುಲ್ 5 ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಅಭಿಷೇಕ್ ಬಚ್ಚನ್, ರಿತೇಶ್ ದೇಶ್‌ಮುಖ್, ಚಂಕಿ ಪಾಂಡೆ, ಜಾನಿ ಲೀವರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Recent Articles

spot_img

Related Stories

Share via
Copy link