ತುರುವೇಕೆರೆ:
ಬೆಲೆ ಏರಿಕೆ ಕಾಲದಲ್ಲಿ ಅಗ್ಗದ ಬೆಲೆಗೆ ಸೇವೆ ನೀಡುವ ಹರೀಶ್
ಏನ್ ಸಾರ್ ನಿಮ್ ಪ್ರಾಬ್ಲಂ. ಸಾರ್ ನಮ್ಮ ಮನೆಯಲ್ಲಿ ಕರೆಂಟ್ ಬರ್ತಿಲ್ಲ, ಸಾರ್ ನಮ್ಮನೇಲಿ ನಲ್ಲಿ ಕೆಟ್ಟುಹೋಗಿದೆ. ಸಾರ್ ನಮ್ಮನೇಲಿ ಸಿಂಕ್ ಸೋರ್ತಿದೆ. ಹೌದಾ ಸರಿ ನಮ್ ಹುಡ್ಗ ಬರ್ತಾನೆ. ಪ್ರಾಬ್ಲಂ ಸಾಲೂ ಮಾಡ್ತಾನೆ.
ಬೇಗ ಕಳುಹಿಸಿಕೊಡಿ ಸಾರ್ ಎಂದು ಪೋನ್ ಇಡುವುದರೊಳಗಾಗಿ ಕೆಲಸದ ಹುಡುಗ ಮನೆ ಮುಂದೆ ಹಾಜರ್. ಒಂದು ವೇಳೆ ಅವರ ಅಂಗಡಿ ಬಳಿ ಹೋದರೆ ಆತ್ಮೀಯತೆಯಿಂದ ಮಾತನಾಡಿ ಕೆಲಸದ ಹುಡುಗನನ್ನು ಜೊತೆಯಲ್ಲಿಯೆ ತಕ್ಷಣ ಕಳುಹಿಸಿಕೊಟ್ಟು ಗ್ರಾಹಕರ ಆತಂಕ ನಿವಾರಿಸುವ ಸದಾ ನಗು ಮೊಗದ ವ್ಯಕ್ತಿ ತುರುವೇಕೆರೆ ಹರೀಶ್.
ಪಟ್ಟಣದ ಮನೆ ಮಾತಾದ ಅಂಗಡಿ :
ಪಟ್ಟಣದ ತಿಪಟೂರು ರಸ್ತೆಯ ಬೇಟೆರಾಯ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಚಿಕ್ಕದೊಂದು ಶೀಟಿನ ಅಂಗಡಿಯಲ್ಲಿ ಶ್ರೀ ಗಂಗಾಪರಮೇಶ್ವರ ಎಲೆಕ್ಟ್ರಿಕಲ್ ಸರ್ವಿಸ್ ಸೆಂಟರ್ ಹೆಸರಿನಡಿಯಲ್ಲಿ “ಎವ್ವೆರಿ ಕಸ್ಟವiರ್ ಈಸ್ ಅವೈಲಬಲ್” ಎಂಬ ನಾಮ ಫಲಕದೊಂದಿಗೆ ಸೇವಾ ಮನೋಭಾವದಿಂದ ವಿವಿಧ ಹತ್ತಾರು ನುರಿತ ಕೆಲಸಗಾರರನ್ನು ಜೊತೆಯಲ್ಲಿ ಇಟ್ಟುಕೊಂಡು ಪಟ್ಟಣದ ಯಾವುದೆ ಮೂಲೆಯ ನಾಗರಿಕರ ಮನೆಗಳಲ್ಲಿ ಕರೆಂಟ್ ಬಾರದಿರುವುದು.
ನಲ್ಲಿ ಕೆಟ್ಟಿರುವುದು, ಫ್ಲಂಬಿಂಗ್ ಕೆಲಸ, ಗೋಡೆ ಕಟ್ ಮಾಡುವಂತಹ ಹಾಗೂ ಮಿಕ್ಸಿ, ಫ್ಯಾನ್, ಕಟಿಂಗ್ ಮೆಷಿನ್ ಇತ್ಯಾದಿ ಕೆಲಸಗಳನ್ನು ಕ್ಷಣ ಮಾತ್ರದಲ್ಲಿ ಮಾಡಿಕೊಡುವ ಹರೀಶ್ ಅವರು ಪಟ್ಟಣದ ನಾಗರಿಕರ ಮನೆ ಮಾತಾಗಿದ್ದಾರೆ.
ಸಬೂಬು ಹೇಳುವ ಕೆಲಸಗಾರರು :
ಮನೆ ನೀರಿನ ನಲ್ಲಿ ಸೋರುತ್ತಿದೆ ಎಂದು ಮಾಮೂಲಿ ಕೆಲಸಗಾರರಿಗೆ ಫೋನಾಯಿಸಿದರೆ ನಾವು ಹೊಸಮನೆಯೊಂದರ ಗುತ್ತಿಗೆ ಕೆಲಸ ವಹಿಸಿಕೊಂಡಿದ್ದೇವೆ ಎಂದು ಹೇಳಿ ನಾಳೆಯೋ, ನಾಡಿದ್ದೋ ಬಂದು ರಿಪೇರಿ ಮಾಡಿಕೊಡ್ತೇವೆ ಅಂತಲೋ ಅಥವಾ ಈ ವಾರ ತುಂಬಾ ಬ್ಯುಸಿಯೆದ್ದೇವೆ ಅಂತಲೋ ಹೇಳಿ ನುಣುಚಿಕೊಳ್ಳುತ್ತಾರೆ.
ಕಾರಣ ಕೇವಲ ಸಣ್ಣ-ಪುಟ್ಟ ಕೆಲಸಗಳಿಗೆ ಯಾರು ಹೋಗುತ್ತಾರೆ ಎಂದು ನಾನಾ ಸಬೂಬು ಹೇಳುತ್ತಾರೆ. ಒಂದು ವೇಳೆ ನಾಗರಿಕರು ಆತನಿಗಾಗಿ ಎರಡು ಮೂರು ದಿನ ಕಾದರೂ ಆತ ಇಂತಹ ಸಣ್ಣ ಕೆಲಸಕ್ಕೆ ಬರುವುದಿಲ್ಲ. ಒಂದು ವೇಳೆ ಬಂದರೂ 500 ರೂ. ಗಿಂತ ಕಡಿಮೆ ಹಣ ಮುಟ್ಟುವುದಿಲ್ಲ.
ಸಾರ್ವಜನಿಕರಿಗೆ ಅನುಕೂಲ :
ಪಟ್ಟಣದಲ್ಲಿ ಯಾವ ಮೂಲೆಯಲ್ಲಾದರೂ ಸರಿಯೆ ನಾಗರಿಕರಿಂದ ಪೋನ್ ಬಂದ 10 ನಿಮಿಷದಲ್ಲಿ ಅವರ ಮನೆ ಮುಂದೆ ಹಾಜರ್. ಒಂದೇ ಕೆಲಸ ವಾಗಿದ್ದರೆ ಕೆಲಸ ಮುಗಿಸಿ ಪೆಟ್ರೋಲ್ ಚಾರ್ಜನ್ನು ಸಹ ಕೇಳದೆ ಕೇವಲ 100 ರೂ. ಪಡೆದು ಅಲ್ಲಿಂದ ಹೊರಡುತ್ತಾರೆ.
ಕೇವಲ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಎಲೆಕ್ಟ್ರಿಷಿಯನ್ ಆಗಲಿ, ಫ್ಲಂಬಿಂಗ್‍ನವರಾಗಲಿ ಸಣ್ಣ ಪುಟ್ಟ ಕೆಲಸಗಳಿಗೆ ಇತ್ತ ತಿರುಗಿಯೂ ನೋಡುವುದಿಲ್ಲ. ಒಂದು ವೇಳೆ ಬರಲು ಒಪ್ಪಿದರಾದರೂ ಸಮಯಕ್ಕೆ ಬಾರದೇ ಇರುವುದರಿಂದ ಕೆಲಸವಾಗದೆ ತೊಂದರೆ ಅನುಭವಿಸುವಂತ ಪರಿಸ್ಥಿತಿ ಸಾರ್ವಜನಿಕರದ್ದು.
ಕೇವಲ 100 ರೂ. ಗೆ ಸೇವೆ :
ಕಟೆಂಟ್ ಬರುತ್ತಿಲ್ಲವೆ. 100 ರೂ., ನಲ್ಲಿ ರಿಪೇರಿಯೆ 100 ರೂ. ಸಿಂಕ್ ಸೋರುತ್ತಿದೆಯೆ ಕೇವಲ 100 ರೂ. ಅಷ್ಟೆ. ಅವರ ಅಂಗಡಿಯಲ್ಲಿ ಹತ್ತಾರು ಕೆಲಸಗಾರರು ರೆಡಿ ಇರುತ್ತಾರೆ. ಅವರ ಅಂಗಡಿ ಬಳಿ ತೆರಳಿ ಅಥವಾ ಪೋನ್ ಮಾಡಿಯೊ ಆಗಬೇಕಾದ ಕೆಲಸ ತಿಳಿಸಿದರೆ ಸಾಕು.
10 ನಿಮಿಷದಲ್ಲಿ ಕೆಲಸಗಾರ ಮನೆ ಮುಂದೆ ಪ್ರತ್ಯಕ್ಷ. ಕೆಲವೇ ನಿಮಿಷಗಳಲ್ಲಿ ಕೆಲಸ ಮುಗಿಸಿ 100 ರೂ. ಪಡೆದು ತೆರಳುತ್ತಾನೆ. ಸಣ್ಣ ಪುಟ್ಟ ಕೆಲಸ ಮಾಡಿಸಿಕೊಳ್ಳುವ ನಾಗರಿಕರಿಗೆ ಇದರಿಂದ ತುಂಬಾ ಅನುಕೂಲವಾಗಿದೆ.
ಹರೀಶ್ ಅವರ ಸಂಪರ್ಕಕ್ಕೆ :
ಇಂತಹ ಸಂದರ್ಭದಲ್ಲಿ ಸಣ್ಣ ಪುಟ್ಟ ಕೆಲಸಗಳ ಮೂಲಕ ಜನರಿಗೆ ಹತ್ತಿರವಾಗಿರುವ ಹರೀಶ್ ಅವರ ಸೇವೆ ನಾಗರಿಕರಿಗೆ ಸಿಗುತ್ತಿರುವುದು ಶ್ಲಾಘನೀಯ. ನಿಮ್ಮ ಮನೆಯಲ್ಲಿಯೂ ಯಾವುದೇ ತೊಂದರೆ ಇದ್ದಲ್ಲಿ ಹರೀಶ್ ಅವರ ಮೊಬೈಲ್ ಸಂಖ್ಯೆ 9964504443 ಗೆ ಪೋನ್ ಮಾಡಿ ಇದರ ಸದುಪಯೋಗ ಪಡೆದುಕೊಳ್ಳಿ.
ತಮ್ಮ ಅಂಗಡಿಯಲ್ಲಿ ಸಹಚರರೊಂದಿಗೆ ಕೆಲಸದಲ್ಲಿ ತಲ್ಲೀನರಾಗಿರುವ ಹರೀಶ್ ಅವರು ಗ್ರಾಹಕರಿಗೆ ಸ್ಪಂದಿಸುತ್ತಿರುವುದು.
-ಮಲ್ಲಿಕಾರ್ಜುನ ದುಂಡ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ