ಇಂದಿನಿಂದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

ಬೆಂಗಳೂರು:

 ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ಎಸ್‌ಎಸ್‌ಎಲ್ಸಿ ಪರೀಕ್ಷೆ ಇಂದಿನಿಂದ ಆರಂಭವಾಗಲಿದೆ.ಸಮವಸ್ತ್ರ ಧರಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಹಿಜಾಬ್ ಧರಿಸಿ ಬಂದರೆ ಪರೀಕ್ಷಾ ಕೊಠಡಿಗೆ ಅವಕಾಶ ನೀಡುವುದಿಲ್ಲ.

ಕನಿಷ್ಠ ಒಂದು ಗಂಟೆಗೆ ಮೊದಲೇ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ಮೊದಲ ದಿನ ನಡೆಯಲಿರುವ ಪ್ರಥಮ ಭಾಷೆ ಪರೀಕ್ಷೆಯನ್ನು ಎದುರಿಸಿ.

ಈ ಬಾರಿ 8,73,846 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 3444 ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಇಂದು, ನಾಳೆ ಭಾರತ್ ಬಂದ್ ಗೆ ಕರೆ: ದೇಶಾದ್ಯಂತ ಮುಷ್ಕರ: ಬ್ಯಾಂಕ್ ಸೇರಿ ಹಲವು ಸೇವೆ ವ್ಯತ್ಯಯ

ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳ ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರ ವರೆಗೆ, ಕೋರ್ ವಿಷಯಗಳ ಪರೀಕ್ಷೆಗಳು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15 ರವರೆಗೆ ನಡೆಯಲಿದೆ.

ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಚಾರ ದಟ್ಟಣೆಯಿಂದ ಪರೀಕ್ಷಾ ಕೇಂದ್ರ ತಲುಪುವುದು ತಡವಾಗಬಹುದು. ಬೇಗನೇ ಮನೆಯಿಂದ ಹೊರಡಿ, ಪರೀಕ್ಷೆಯನ್ನು ಎದುರಿಸುವ ಎಲ್ಲ ಮಕ್ಕಳಿಗೆ ಶುಭವಾಗಲಿ.

 ಈ ಇಬ್ಬರಿಂದ ಪಂದ್ಯ ಸೋತೆವು; 205 ರನ್ ಗಳಿಸಿಯೂ ಪಂಜಾಬ್ ವಿರುದ್ಧ ಸೋತಿದ್ದೇಕೆ ಎಂಬುದನ್ನು ಬಿಚ್ಚಿಟ್ಟ ಫಾಫ್

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap