ಮಠ-ಮಂದಿರಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ನೀಡಿ

ಚಿಕ್ಕನಾಯಕನಹಳ್ಳಿ:

ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಮಂಜಮ್ಮ ಜೋಗತಿ ಹೇಳಿಕೆ

       ತೃತೀಯ ಲಿಂಗಿಗಳನ್ನು ಪ್ರೀತಿ ವಿಶ್ವಾಸದಿಂದ ಕಾಣಿ, ಅವರಿಗೂ ಎಲ್ಲರಂತೆ ಬದುಕಲು ಅವಕಾಶ ನೀಡಿ, ಮಠ ಮಂದಿರಗಳಲ್ಲಿ ನಮ್ಮಂತಹವರಿಗೆ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂದು ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ ಮಂಜಮ್ಮ ಜೋಗತಿ ಅಭಿಪ್ರಾಯ ಪಟ್ಟರು.

ತಾಲ್ಲೂಕಿನ ಕುಪ್ಪೂರು ಗದ್ದುಗೆ ಮಠದಲ್ಲಿ ಶ್ರೀಮರುಳದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಜಾನಪದ ಕಲೆಗಳಲ್ಲಿ ಆಸಕ್ತಿ ಮೂಡಿಸಿಕೊಂಡು ಅವುಗಳನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ. 2019ರಲ್ಲಿ ತಮಿಳುನಾಡಿನ ನರ್ತಕಿನಟರಾಜ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಮೊದಲ ತೃತೀಯ ಲಿಂಗಿ. ನಾನು ಎರಡನೇಯವಳು, ಇಂತಹ ಉನ್ನತ ಗೌರವನ್ನು ನಮ್ಮಂತವರಿಗೆ ನೀಡಿರುವುದು ನಾಡಿನ ಎಲ್ಲರಿಗೂ ನೀಡಿದಂತೆಯೆ ಸರಿ ಎಂದರು.

ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ನಾನು ಕುಪ್ಪೂರು ಮರುಳಸಿದ್ಧರ ಮಠದ ಹಿರಿಯ ಶ್ರೀಗಳಾದ ಚಂದ್ರಶೇಖರ ಶಿವಚಾರ್ಯಸ್ವಾಮಿಗಳೊಂದಿಗೆ ಒಡನಾಟ ಇಟ್ಟುಕೊಂಡಿದ್ದು, ಅವರಲ್ಲಿ ಅಪಾರವಾದ ಶಕ್ತಿ ಇತ್ತು. ಅವರ ನಂತರ ಬಂದ ಯತೀಶ್ವರರು ಈ ಮಠದ ದಿಕ್ಕನ್ನೆ ಬದಲಾಯಿಸಿದರು. ಹಿಂದೆ ಜಾತ್ರೆಯಾಗಿ ನಡೆಯುತ್ತಿದ್ದ ಈ ಕಾರ್ಯಕ್ರಮಗಳನ್ನು ಸಾಂಸ್ಕೃತಿಕ ಉತ್ಸವವನ್ನಾಗಿಸಿದರು. ಈ ವೇಳೆ ಅನ್ನದಾಸೋಹದ ಜೊತೆ ಜ್ಞಾನ ದಾಸೋಹ ನೀಡಲು ಈ ಧಾರ್ಮಿಕ ಕಾರ್ಯಕ್ರಮನ್ನು ಏರ್ಪಡಿಸಿದರು ಎಂದರು.
ಕಾರ್ಯಕ್ರಮದಲ್ಲಿ ಶ್ರೀಮಠದಿಂದ ಧರ್ಮರತ್ನಕರ ಪ್ರಶಸ್ತಿಯನ್ನು ಆಧ್ಯಾತ್ಮಕ ಚಿಂತಕ ವಿದ್ವಾನ್ ಕೆ.ಪಿ.ರತ್ನಾಕರಭಟ್ಟ ಅವÀರಿಗೆ ನೀಡಲಾಯಿತು.

ಕಾರ್ಯಕ್ರಮದ ದಿವ್ಯಸಾನಿಧ್ಯದಲ್ಲಿ ಹಾರನಹಳ್ಳಿಯ ಕೋಡಿಮಠದ ಡಾ.ಶಿವಾನಂದಶಿವಯೋಗಿ, ರಾಜೇಂದ್ರಸ್ವಾಮಿಜಿ, ಕುಪೂರು ಮಠದ ನೂತನ ಸ್ವಾಮೀಜಿ ತೇಜಸ್ವಿ ಶ್ರೀಗಳು, ಹೊನ್ನವಳ್ಳಿ ಮಠದ ಶ್ರೀಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ತಹಶೀಲ್ದಾರ್ ಬಿ.ತೇಜಸ್ವಿನಿ, ಮಠದ ಆಡಳಿತಾಧಿಕಾರಿ ವಾಗೀಶ್ ಸೇರಿದಂತೆ ಇತರರು ಇದ್ದರು.

ಧರ್ಮ ನಮ್ಮ ಜೀವನವನ್ನು ಲಯಬದ್ಧವಾಗಿ ರೂಪಿಸುವಂತಹ ಶಕ್ತಿ ಇರುವಂತಹ ಮಾರ್ಗವಾಗಿದೆ, ಇಂತಹ ಧರ್ಮವನ್ನು ಎಲ್ಲರೂ ಪಾಲಿಸಬೇಕು. ಇಂದು ಯತೀಶ್ವರ ಶ್ರೀಗಳು ನಮ್ಮೊಂದಿಗೆ ಇಲ್ಲದಿರುವುದು ಕಪ್ಪುಚುಕ್ಕಿ ಇಟ್ಟಾಂತಾಗಿದೆ.

-ಜೆ.ಸಿ.ಮಾಧುಸ್ವಾಮಿ, ಸಚಿವರು

ಶ್ರೀಗಳನ್ನು ಸ್ಮರಿಸಿದ ಸ್ವಾಮೀಜಿಗಳು :

ಯಡಿಯೂರು ಕ್ಷೇತ್ರದ ರೇಣುಕಾ ಶಿವಚಾರ್ಯ ಸ್ವಾಮಿಜಿ ಮಾತನಾಡಿ, ನಾಡಿನ ಪ್ರಸಿದ್ದ, ಕಲಾವಿದರನ್ನು, ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿದಂತಹವರನ್ನು ಗುರುತಿಸಿದ ಶ್ರೀಗಳು ಇಂದು ಇಲ್ಲದಿರುವುದು ನೋವಿನ ಸಂಗತಿ ಎಂದರು. ಶಿವಗಂಗೆ ಕ್ಷೇತ್ರದ ಡಾ.ಮಲಯಶಾಂತಮುನಿ ಸ್ವಾಮಿ ಮಾತನಾಡಿ, ನಾವು ನಾಡಿನ ಮಹಾತ್ಮರು ನಡೆದ ದಾರಿಯಲ್ಲಿ ಸನ್ಮಾರ್ಗದಲ್ಲಿ ನಡೆಯಬೇಕಾಗಿದ್ದು ಪ್ರತಿಯೊಬ್ಬರು ಧರ್ಮಾಚರಣೆಯನ್ನು ತಪ್ಪದೆ ಮಾಡಿ ಮಠ ಮಂದಿರಗಳಲ್ಲಿ ನೆಮ್ಮದಿಯನ್ನು ಕಾಣಬೇಕಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link