ತೆಲಂಗಾಣ :
ಅಲ್ಲು ಅರವಿಂದ್ ಮತ್ತೊಮ್ಮೆ ದುಃಖದಲ್ಲಿ ಮುಳುಗಿದ್ದಾರೆ. ಇತ್ತೀಚೆಗೆ ಅವರ ತಾಯಿಯ ಸಾವು ಅವರಿಗೆ ನೋವು ತಂದಿತ್ತು. ಈಘ ಮತ್ತೊಮ್ಮೆ ಒಂದು ದುಃಖಕರ ಘಟನೆ ಸಂಭವಿಸಿದೆ. ಅವರ ಬಾಲ್ಯದ ಸ್ನೇಹಿತ ಮತ್ತು ಗೀತಾ ಆರ್ಟ್ಸ್ ಸಹವರ್ತಿ ಸಿ. ನಾಗರಾಜು ಅನಾರೋಗ್ಯದಿಂದ ನಿಧನರಾದರು. ಬಾಲ್ಯದಿಂದಲೂ ಅಲ್ಲು ಅರವಿಂದ್ ಅವರಿಗೆ ತುಂಬಾ ಹತ್ತಿರವಾಗಿದ್ದ ನಾಗರಾಜು, ಅರವಿಂದ್ ಅವರೊಂದಿಗೆ ಇರಲು ಹೈದರಾಬಾದ್‌ಗೆ ಬಂದು ನೆಲೆಸಿದರು. ಈಗ ಅವರು ಕೊನೆಯುಸಿರು ಎಳೆದಿದ್ದಾರೆ.
ಗೀತಾ ಆರ್ಟ್ಸ್ ನಿರ್ಮಿಸಿದ ‘ಮಾಸ್ಟರ್’ ಚಿತ್ರದೊಂದಿಗೆ ಕಂಪನಿಯೊಂದಿಗಿನ ಅವರ ಸಂಬಂಧ ಪ್ರಾರಂಭವಾಯಿತು. ಅದರ ನಂತರ, ಅವರು ಗೀತಾ ಆರ್ಟ್ಸ್ ನಿರ್ಮಿಸಿದ ಅನೇಕ ಯಶಸ್ವಿ ಚಿತ್ರಗಳಿಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಸೇವೆ ಸಲ್ಲಿಸಿದರು.
ನಾಗರಾಜು ಅವರಿಗೆ ಪ್ರಸ್ತುತ 76 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ. ಅವರ ಮಗ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ಭಾನುವಾರ ಬೆಳಿಗ್ಗೆ ಹೈದರಾಬಾದ್ ತಲುಪಿದರು. ನಂತರ, ನಾಗರಾಜು ಅವರ ಅಂತ್ಯಕ್ರಿಯೆಯನ್ನು ಹೈದರಾಬಾದ್‌ನಲ್ಲಿಯೇ ನಡೆಸಲಾಯಿತು. ಅಲ್ಲು ಅರವಿಂದ್ ಅವರು ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ವೈಯಕ್ತಿಕವಾಗಿ ವಹಿಸಿಕೊಂಡರು.
ನಿರ್ದೇಶಕ ರವಿರಾಜ ಪಿನಿಸೆಟ್ಟಿ, ಬನ್ನಿ ವಾಸು, ವಂಶಿ ನಂದಿಪತಿ, ಬಂಡ್ಲ ಗಣೇಶ್, ಸುರೇಶ್ ಕೊಂಡೇಟಿ ಸೇರಿದಂತೆ ಚಿತ್ರರಂಗದ ಗಣ್ಯರು ಆಗಮಿಸಿ ನಾಗರಾಜು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲು ಅರವಿಂದ್ ಅವರ ಆತ್ಮೀಯ ಸ್ನೇಹಿತರಾಗಿದ್ದ ನಾಗರಾಜು ಅವರ ಸಾವು ಚಿತ್ರರಂಗದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.
ಇತ್ತೀಚೆಗೆ ಅಲ್ಲು ಅರವಿಂದ್ ಅವರ ತಾಯಿ ಕನಕ ರತ್ನಂ ಅವರು ನಿಧನ ಹೊಂದಿದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರು ಸಾವಿನ ಬಳಿಕ ಅಲ್ಲು ಅರವಿಂದ್ ಡಲ್ ಆಗಿದ್ದರು. ಅಲ್ಲು ಅರ್ಜುನ್ ಕೂಡ ಅಜ್ಜಿ ಸಾವಿನಿಂದ ಸಾಕಷ್ಟು ನೊಂದುಕೊಂಡಿದ್ದರು. ಈಗ ಅವರಿಗೆ ಮತ್ತೆ ನೋವಾಗಿದೆ. ಸ್ವಲ್ಪ ಸಮಯದ ನಂತರ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
