ಹೈದರಾಬಾದ್:
ಜನಪ್ರಿಯ ತೆಲುಗು ನಟಿ ಆಮಾನಿ ಅವರು ಶನಿವಾರ ಹೈದರಾಬಾದ್‌ನಲ್ಲಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್ ರಾಮಚಂದರ್ ರಾವ್ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.ಆಮಾನಿ ಜೊತೆಗೆ ಖ್ಯಾತ ಮೇಕಪ್ ಕಲಾವಿದೆ ಶೋಭಾ ಲತಾ ಕೂಡ ಕೇಸರಿ ಪಕ್ಷಕ್ಕೆ ಸೇರಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
1990 ರ ದಶಕದ ಜನಪ್ರಿಯ ನಾಯಕ ನಟಿ ಆಮಾನಿ, ಕಮಲ್ ಹಾಸನ್, ನಾಗಾರ್ಜುನ ಅಕ್ಕಿನೇನಿ, ಬಾಲಕೃಷ್ಣ, ಮತ್ತು ಜಗಪತಿ ಬಾಬು ಸೇರಿದಂತೆ ಹಲವು ಟಾಪ್ ನಟರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಆಮಾನಿ ಅವರ ಕೆಲವು ಪ್ರಮುಖ ಚಿತ್ರಗಳಲ್ಲಿ ಶುಭ ಸಂಕಲ್ಪಂ, ಶುಭ ಲಗ್ನಂ, ಮಿಸ್ಟರ್ ಪೆಲ್ಲಂ, ಘರಾನಾ ಬುಲ್ಲೋಡು ಮತ್ತು ಹಲೋ ಬ್ರದರ್ ಸೇರಿವೆ.ಚಲನಚಿತ್ರಗಳ ಜೊತೆಗೆ, ಅವರು ದೂರದರ್ಶನ ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದಾರೆ.








